ಮೋದಿ ಸರ್ಕಾರಕ್ಕೆ ಶಿವಸೇನೆ ಎಚ್ಚರಿಕೆ ಮಾತು

ಕೇಂದ್ರ ಸರ್ಕಾರವು ರೈತರ ಹಿತ ಮರೆತಿರುವುದಾಗಿ ಶಿವಸೇನೆ ಆರೋಪ. ಪಕ್ಷದ ಮುಖವಾಣಿಯಾದ ಸಾಮ್ನಾದಲ್ಲಿ ಟೀಕೆ. ರೈತರ ಸಾಲ ಮನ್ನಾ, ಬೆಂಬಲ ಬೆಲೆಗಳಿಗೆ ಆಗ್ರಹ. ರೈತರ ಹಿತ ಮರೆತರೆ ಚುನಾವಣೆಯಲ್ಲಿ ಮತದಾರರಿಂದ ತಕ್ಕ ಉತ್ತರ ಎಂದು ಶಿವಸೇನೆ ಎಚ್ಚರಿಕೆ.

ಮುಂಬೈ, ಜೂನ್ 6: ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ರೈತರ ಅಸಮಾಧಾನ ಜ್ವಾಲಾಮುಖಿಯಂತೆ ಭುಗಿಲೇಳಲಿದ್ದು, ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ಬಿಜೆಪಿಯ ಮಿತ್ರ ಪಕ್ಷವಾದ ಶಿವಸೇನೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ತನ್ನ ಪಕ್ಷದ ಮುಖವಾಣಿಯಾದ ಸಾಮ್ನಾದ ಸಂಪಾದಕೀಯ ಬರಹದಲ್ಲಿ ಈ ರೀತಿಯಾಗಿ ಎಚ್ಚರಿಸಿರುವ ಪಕ್ಷ, ರೈತರಿಗೆ, ಬಡವರಿಗೆ ನೆರವಾಗದಿದ್ದಾಗಲೆಲ್ಲಾ ಜನರು ತಕ್ಕ ಪಾಠ ಕಲಿಸಿದ್ದಾರೆ. ಹಿಂದೆ ಕಲಿತ ಆ ಪಾಠಗಳನ್ನು ಮರೆತರೆ, ಬಿಜೆಪಿಯು ಅದರ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ.

Lava of farmers’ pain will create havoc for BJP: Shiv Sena

ನಾಸಿಕ್ ನಲ್ಲಿ ರೈತರು ತಮ್ಮ ವಿವಿಧ ಬೇಡಿಕೆಗಳಿಗೆ ಈಡೇರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಲೇಖನ ಪ್ರಕಟಣೆಯಾಗಿದೆ.

ರೈತರ ಸಾಲ ಮನ್ನಾ ಹಾಗೂ ರೈತರು ಬೆಳೆದ ಬೆಲೆಗೆ ಸೂಕ್ತ ಬೆಂಬಲ ಬೆಲೆ - ಇವೆರಡೂ ತುರ್ತಾಗಿ ಆಗಬೇಕಿದೆ. ರೈತರು ಸರ್ಕಾರದಿಂದ ಇದನ್ನು ನಿರೀಕ್ಷಿಸುತ್ತಿದ್ದಾರೆ. ಈಗಲಾದರೂ ರೈತರ ಪಾಡನ್ನು ಸರ್ಕಾರ ಅರ್ಥ ಮಾಡಿಕೊಳ್ಳುವುದೇ ಎಂದು ಲೇಖನದಲ್ಲಿ ಸರ್ಕಾರ ಪ್ರಶ್ನೆ ಮಾಡಿದೆ.

ಅಲ್ಲದೆ, ರೈತರ ಹಕ್ಕುಗಳಿಗಾಗಿ ತಾನು ಎಂದಿಗೂ ಬದ್ಧವಾಗಿರುವುದಾಗಿ ತಿಳಿಸಿದ ಅದು, ಕೊನೆಯವರೆಗೂ ತಾನು ರೈತರ ಹಿತಕ್ಕಾಗಿ ಹೋರಾಡುವುದಾಗಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+