Get Updates
Get notified of breaking news, exclusive insights, and must-see stories!

'ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದರು': ಕೃಷ್ಣ ಭಕ್ತರ ಮೇಲಿನ ಲಾಠಿಚಾರ್ಜ್‌ಗೆ ಆಕ್ರೋಶ

ಮುಂಬೈ, ಜೂನ್. 12: ಪಂಡರಾಪುರದ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಮಹಾರಾಷ್ಟ್ರ ಪೊಲೀಸರು ಭಾನುವಾರ ಪುಣೆ ಜಿಲ್ಲೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಶ್ರೀಕೃಷ್ಣನ ರೂಪವಾದ ವಿಠ್ಠಲನ ಭಕ್ತಾದಿಗಳು ರಾಜ್ಯದಲ್ಲಿ ಪೊಲೀಸ್ ಕ್ರಮಕ್ಕೆ ಒಳಗಾಗಿರುವುದು ಇದೇ ಮೊದಲು. ಮೆರವಣಿಗೆ ವೇಳೆ ಭಕ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಪುಣೆ ನಗರದಿಂದ 22 ಕಿ.ಮೀ ದೂರದಲ್ಲಿರುವ ಅಳಂಡಿ ಪಟ್ಟಣದ ಶ್ರೀ ಕ್ಷೇತ್ರ ಪಂಡರಾಪುರದ ದೇವಸ್ಥಾನಕ್ಕೆ ಸಮಾರಂಭವೊಂದಕ್ಕೆ ಪ್ರವೇಶ ಮಾಡುವ ವೇಳೆ ವಾಗ್ವಾದ ನಡೆದಿದೆ. ಅಪಾರ ಸಂಖ್ಯೆಯ ಭಕ್ತರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಿಯಮದ ಪ್ರಕಾರ 75 ಮಂದಿಗೆ ಮಾತ್ರ ಆವರಣ ಪ್ರವೇಶಿಸಲು ಅವಕಾಶವಿದೆ. ಆದರೆ ಅದರ ಬದಲಾಗಿ ಸುಮಾರು 400 ಮಂದಿ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

Lathicharge on Krishna devotees

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಕ್ತರ ಮೇಲಿನ ಲಾಠಿಚಾರ್ಜ್ ಆರೋಪವನ್ನು ನಿರಾಕರಿಸಿದ್ದಾರೆ. ಇದನ್ನು ಪೊಲೀಸರು ಮತ್ತು ಭಕ್ತ ನಡುವಿನ "ಸಣ್ಣ ಘರ್ಷಣೆ" ಎಂದು ಕರೆದಿದ್ದಾರೆ. "ವಾರ್ಕರಿ ಸಮುದಾಯದ ಮೇಲೆ ಯಾವುದೇ ಲಾಠಿಚಾರ್ಜ್ ನಡೆದಿಲ್ಲ" ಎಂದು ದೇವೇಂದ್ರ ಫಡ್ನವಿಸ್ ನಾಗ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾವು ಅದೇ ಸ್ಥಳದಲ್ಲಿ (ಅಳಂದಿ) ಕಳೆದ ವರ್ಷ ನಡೆದ ಕಾಲ್ತುಳಿತದಂತಹ ಪರಿಸ್ಥಿತಿಯಿಂದ ಪಾಠ ಕಲಿತಿದ್ದೇವೆ ಮತ್ತು ವಿವಿಧ ಗುಂಪುಗಳಿಗೆ ಕಡಿಮೆ ಪ್ರವೇಶ ಪಾಸ್‌ಗಳನ್ನು ನೀಡಲು ಪ್ರಯತ್ನಿಸಿದ್ದೇವೆ. ತೀರ್ಥಯಾತ್ರೆಯಲ್ಲಿ ಭಾಗವಹಿಸುವ ಪ್ರತಿ ಗುಂಪಿಗೆ 75 ಪಾಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ" ಎಂದು ನಿರ್ವಹಿಸುವ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಉಲ್ಲೇಖಿಸಿದೆ.

Lathicharge on Krishna devotees

"ಸುಮಾರು 500 ಜನರು ಯಾತ್ರೆಯಲ್ಲಿ ಭಾಗವಹಿಸುವುದಾಗಿ ಮತ್ತು ಪ್ರವೇಶ ಪಾಸ್‌ ಹಂಚಿಕೆಯ ನಿರ್ಧಾರವನ್ನು ಅನುಸರಿಸುವುದಿಲ್ಲ ಎಂದು ಭಕ್ತರು ಗಲಾಟೆ ಮಾಡಿದರು. ಅವರು ಬ್ಯಾರಿಕೇಡ್‌ಗಳನ್ನು ಮುರಿದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದರು, ಈ ಸಂದರ್ಭದಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡರು" ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಈ ಘಟನೆ ಹಿನ್ನೆಲೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.

"ಓಹೋ.. ಹಿಂದುತ್ವ ಸರ್ಕಾರದ ಆಡಂಬರ ಬಯಲಾಗಿದೆ.. ಮುಖವಾಡ ಕಳಚಿಬಿತ್ತು. ಔರಂಗಜೇಬ್ ಇದಕ್ಕಿಂಯ ವಿಭಿನ್ನವಾಗಿ ವರ್ತಿಸುತ್ತಿದ್ದರೇ..? ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದಿದ್ದಾರೆ" ಎಂದು ಶಿವಸೇನೆಯ ಹಿರಿಯ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

''ಶ್ರೀ ಕ್ಷೇತ್ರ ಆಳಂದಿಯಲ್ಲಿ ವಾರ್ಕರಿ ಸಹೋದರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ ರೀತಿ ಅತ್ಯಂತ ಅಮಾನವೀಯವಾಗಿದ್ದು, ವಾರ್ಕರಿ ಪಂಗಡಕ್ಕೆ ಬುನಾದಿ ಹಾಕಿದ ಮಹಾನ್ ಸಂತ ಜ್ಞಾನೇಶ್ವರ ಮಹಾರಾಜರ ಸಮ್ಮುಖದಲ್ಲಿ ವಾರ್ಕರಿಗಳಿಗೆ ಈ ಅವಮಾನ ಮಾಡಿರುವುದು ಖಂಡನೀಯ. ಸರಕಾರಕ್ಕೆ ವಾರ್ಕರಿ ಪಂಥದ ಬಗ್ಗೆ ಏನಾದರೂ ಜವಾಬ್ದಾರಿ ಇದೆಯೇ ಅಥವಾ ಇಲ್ಲವೇ?" ಎಂದು ಎನ್‌ಸಿಪಿಯ ಚಗ್ಗನ್ ಭುಜಬಲ್ ಟ್ವೀಟ್ ಮಾಡಿದ್ದಾರೆ.

Lathicharge on Krishna devotees: Mughals Reincarnated In Maharashtra says Opposition

ವಾರ್ಕರಿಗಳು ಆಳಂದಿಯಿಂದ ಪಂಡರಾಪುರದ ವಿಠಲ ದೇವಸ್ಥಾನಕ್ಕೆ ಹೋಗುವ ಯಾತ್ರಿಕರು. ಜೂನ್ 11ರಿಂದ ಪಾದಯಾತ್ರೆ ಆರಂಭವಾಗಿತ್ತು. ಜೂನ್ 10 ರಂದು ಆಳಂದಿಯಿಂದ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮತ್ತು ದೇಹುದಿಂದ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ನಿರ್ಗಮಿಸುವುದು ಈ ಮಹಾ ಯಾತ್ರೆಯ ಆರಂಭವನ್ನು ಸೂಚಿಸುತ್ತದೆ. ಜೂನ್ 29 ರಂದು ಆಷಾಧಿ ಏಕಾದಶಿಯ ಶುಭ ದಿನದಂದು ಪಂಡರಾಪುರದ ಪವಿತ್ರ ಪಟ್ಟಣದಲ್ಲಿ ವಾರ್ಕರಿಗಳು ಸೇರುವ ನಿರೀಕ್ಷೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+