ಕಾರು ಹರಿಸಿ ಮೂವರನ್ನು ಹತ್ಯೆಗೈದ 12ನೇ ಕ್ಲಾಸ್ ವಿದ್ಯಾರ್ಥಿ

ನವದೆಹಲಿ, ಏಪ್ರಿಲ್ 20 : ದೆಹಲಿಯ ಕಾಶ್ಮೀರಿ ಗೇಟ್ ಬಳಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ರಸ್ತೆಬದಿ ಮಲಗಿದವರ ಮೇಲೆ ಕಾರು ಹರಿಸಿದ ಪರಿಣಾಮ ಮೂವರು ಸತ್ತು ಮೂವರು ಗಾಯಗೊಂಡ ಘಟನೆ ನಡೆದಿದೆ. ವಾಹನ ಓಡಿಸುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

ವಜಾಗೊಂಡ ತೇಜ್ ಮತ್ತೆ ಮನವಿ
ಸೇನೆಯ ವಿರುದ್ಧ ದನಿಯೆತ್ತಿದ್ದಕ್ಕಾಗಿ ವಜಾಗೊಂಡಿರುವ ಸೈನಿಕ ತೇಜ್ ಬಿ ಯಾದವ್ ಅವರು, ತಮ್ಮ ಮನವಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಆಹಾರ ಗುಣಮಟ್ಟ ಸರಿಪಡಿಸದೇಹೋದಲ್ಲಿ ತಾವು ನ್ಯಾಯಾಲಯದ ಕದ ತಟ್ಟುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಆಹಾರ ಗುಣಮಟ್ಟ ಹೆಚ್ಚಿಸಬೇಕು ಮತ್ತು ಅಗತ್ಯವಿದ್ದಾಗ ರಜಾ ನೀಡಬೇಕು ಎಂಬುದು ಅವರ ಆಗ್ರಹಗಳಾಗಿದ್ದವು.[ನೋಯ್ಡಾದಲ್ಲಿ ಅಗ್ನಿ ದುರಂತ, ಆರು ಮಂದಿ ಸಾವು, ಹಲವರು ಕಣ್ಮರೆ]

Latest Kannada news from all over India

ತಪ್ಪಿದ ವಿಮಾನ ಅಪಘಾತ
ಡೆಹ್ರಾಡೂನ್ ನಿಂದ ದೆಹಲಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್ಪೋರ್ಟ್ ನಲ್ಲಿ ಇಳಿದ ನಂತರ ಅದರಲ್ಲಿ ದೋಷ ಕಂಡುಬಂದಿತ್ತು. ತ್ವರಿತವಾಗಿ ಎಲ್ಲ 60 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಗಳನ್ನು ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.[ ಶಿಮ್ಲಾದಲ್ಲಿ ನದಿಗೆ ಬಸ್ ಬಿದ್ದು 44 ಮಂದಿ ಸಾವು]

ಬೆಂಕಿ ದುರಂತ
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಬುಧವಾರ ರಾತ್ರಿ ಜಾವ ಅಗ್ನಿ ದುರಂತ ಸಂಭವಿಸಿದ್ದು, 25 ಅಂಗಡಿಗಳು ಮತ್ತು ಮನೆಗಳು ಆಹುತಿಯಾಗಿವೆ. ಬಾರಾಮುಲ್ಲಾದ ಭಾರತೀಯ ಸೇನೆಯ 19 ಡಿವಿಜನ್ ಬೇಸ್ ನಲ್ಲಿ ಕೂಡ ಗುರುವಾರ ಬೆಳಗಿನ ಜಾವ ಅಗ್ನಿ ದುರಂತ ಸಂಭವಿಸಿದೆ. ಈಗ ತಹಬದಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+