ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಬಂಗಲೆ ಪೊಯೆಸ್ ಗಾರ್ಡನ್ ನಲ್ಲಿ ರಾತ್ರಿ ಅಳುವ ಹೆಂಗಸಿನ ಧ್ವನಿ!

ತಮಿಳುನಾಡು ರಾಜಕೀಯದ ಶಕ್ತಿಕೇಂದ್ರವಾಗಿದ್ದ, ದಿವಂಗತ ಸಿಎಂ ಜಯಲಲಿತಾ ಅವರ ಅಧಿಕೃತ ನಿವಾಸ, ಚೆನ್ನೈ ಹೃದಯ ಭಾಗದಲ್ಲಿರುವ ಪೊಯೆಸ್ ಗಾರ್ಡನ್ ಈಗ ಪಾಳುಬಿದ್ದ ಬಂಗಲೆ.

|
Google Oneindia Kannada News

ಆಳೆತ್ತರದ ಕಂಪೌಂಡ್, ಹೆಜ್ಜೆಹೆಜ್ಜೆಗೂ ಸೆಕ್ಯೂರಿಟಿ, ಎಲ್ಲಿ ನೋಡಿದರಲ್ಲಿ ಬಿಳಿಪಂಚೆ ಶರ್ಟ್, ಒಳಗೆ ಹೋಗಿ ಬರುವ ಮುಖಂಡರು, ಕಾರ್ಯಕರ್ತರಲ್ಲಿ ಏನನ್ನೋ ಸಾಧಿಸಿದ ಧನ್ಯತಾಭಾವ..

ಇದು ತಮಿಳುನಾಡಿನ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಜೀವಿತಾವಧಿಯಲ್ಲಿದ್ದ ಅವರ ಅಧಿಕೃತ ನಿವಾಸ ಚೆನ್ನೈ ಹೃದಯ ಭಾಗದಲ್ಲಿರುವ ಪೊಯೆಸ್ ಗಾರ್ಡನ್ ನಲ್ಲಿರುವ ಪೊಯೆಸ್ ಪ್ಯಾಲೇಶಿನ ವೈಭೋಗ. [ಶ್ರೀಗಳೊಂದಿಗೆ ಮಾತನಾಡಿತಂತೆ ಜಯಾ ಆತ್ಮ]

ಜಯಾ ಅನುಮಾನಾಸ್ಪದ ಸಾವಿನ ನಂತರ, ಅಧಿಕಾರದ ಲಾಲಸೆಗೆ ಹರಿದುಹಂಚಿ ಹೋದ ಅಣ್ಣಾ ಡಿಎಂಕೆ ಪಕ್ಷದ ಶಕ್ತಿಕೇಂದ್ರ ಪೊಯೆಸ್ ಗಾರ್ಡನ್ ಈಗ ಅಕ್ಷರಸ: ಪಾಳುಬಿದ್ದ ಬಂಗಲೆ. ಈಗ ಅಲ್ಲಿ ಕಾರ್ಯಕರ್ತರೂ ಇಲ್ಲ, ಪೊಲೀಸ್ ಸೈರನಿನ ಸದ್ದೂ ಇಲ್ಲ.. ಇರುವುದು ಗೇಟ್ ಕಾಯುವ ಕೆಲವು ಭದ್ರತಾ ಸಿಬ್ಬಂದಿಗಳು ಮಾತ್ರ..

ಜಯಾ ಸಾವಿನ ನಂತರ, ಮನ್ನಾರ್ ಗುಡಿ ಗ್ಯಾಂಗ್ ನೊಂದಿಗೆ ಸ್ವಲ್ಪದಿನ ಪೋಯೀಸ್ ಗಾರ್ಡನ್ ನಲ್ಲಿದ್ದ ಶಶಿಕಲಾ ನಟರಾಜನ್, ಪರಪ್ಪನ ಅಗ್ರಹಾರ ಜೈಲು ಪಾಲಾದ ನಂತರ ಈ ಬಂಗಲೆಯನ್ನು ಕೇಳುವವರೇ ಇಲ್ಲ. ಈ ನಡುವೆ ರಾತ್ರಿ ಬಂಗಲೆಯಲ್ಲಿ ಅಳುವ ಹೆಣ್ಣು ಧ್ವನಿ ಕೇಳಿಸುತ್ತಿದೆ ಎನ್ನುವುದು ಸಾಕಷ್ಟು ಸುದ್ದಿಯಾಗಿದೆ.

ಈ ಬಂಗಲೆ ನಮ್ಮದು ಎಂದು ಹಾದಿಬೀದಿ ರಂಪ ಮಾಡಿಕೊಂಡಿದ್ದ ಪಕ್ಷದ ಇತ್ತಂಡದ ಮುಖಂಡರಾಗಲಿ ಮತ್ತು ಕಾರ್ಯಕರ್ತರಾಗಲಿ ಪೊಯೆಸ್ ಪ್ಯಾಲೇಶ್ ಬಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ. ಹಗಲು ಕೆಲಸದವರು ಬಂದು ಹೋದರೆ, ತಿರುಗಿ ಬರುವುದು ಮರುದಿನವೇ.. ಮುಂದೆ ಓದಿ..

ಎರಡೂ ಬಣದವರಿಗೆ ಈ ಬಂಗಲೆ ಈಗ ಬೇಕಿಲ್ಲ

ಎರಡೂ ಬಣದವರಿಗೆ ಈ ಬಂಗಲೆ ಈಗ ಬೇಕಿಲ್ಲ

ಈ ಬಂಗಲೆ ಶಶಿಕಲಾ ನಟರಾಜನ್ ಬಣಕ್ಕೆ ಹೋಗಬಾರದು ಎನ್ನುವ ಏಕೈಕ ಕಾರಣಕ್ಕಾಗಿ ಹೊಡೆದಾಟದ ಮಟ್ಟಕ್ಕೆ ಹೋಗಿದ್ದ ಓಪಿಎಸ್ ಮತ್ತು ಇಪಿಎಸ್ ಬಣದವರು, ಪೋಯೀಸ್ ಗಾರ್ಡನ್ ಕಡೆ ತಲೆಹಾಕದೇ ಜಯಾ ಆತ್ಮಕ್ಕೂ ಶಾಂತಿ ಸಿಗದಂತೆ ಮಾಡಿದ್ದಾರೆ.[ಶಶಿಕಲಾರ 'ಬೇನಾಮಿ' ಸರಕಾರಕ್ಕೆ ಪೋಯಸ್ ಬಂಗಲೆ ಮೇಲೆ ಯಾವ ಹಕ್ಕಿದೆ?: ದೀಪಾ]

ಪೊಯೆಸ್ ಗಾರ್ಡನ್ ಬಂಗಲೆ

ಪೊಯೆಸ್ ಗಾರ್ಡನ್ ಬಂಗಲೆ

ಎರಡೂ ಪಾಳೆಯದಲ್ಲಿ ಭದ್ರತಾ ಸಿಬ್ಬಂದಿಗಳು ಬಂಗಲೆ ಕಾಯುತ್ತಿರುವುದನ್ನು ಬಿಟ್ಟರೆ, ಪೊಯೆಸ್ ಗಾರ್ಡನ್ ಬಂಗಲೆಯನ್ನು ಮ್ಯೂಸಿಯಂ ಮಾಡಲು ನಿರ್ಧರಿಸಿದ್ದ ರಾಜ್ಯ ಸರಕಾರ ಸದ್ಯ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎನ್ನುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ರಾತ್ರಿ ಹೊತ್ತು ಅಳುವ ಹೆಂಗಸಿನ ಧ್ವನಿ

ರಾತ್ರಿ ಹೊತ್ತು ಅಳುವ ಹೆಂಗಸಿನ ಧ್ವನಿ

ರಾತ್ರಿ ಹೊತ್ತು ಅಳುವ ಹೆಂಗಸಿನ ಧ್ವನಿ ಬಂಗಲೆಯೊಳಗಿನಿಂದ ಕೇಳಿ ಬರುತ್ತಿದೆ ಎನ್ನುವ ಸುದ್ದಿ ಹರಡಿರುವುದರಿಂದ, ಜಯಾ ಅನುಮಾನಾಸ್ಪದ ಸಾವಿಗೂ ಇದಕ್ಕೆ ತಾಳೆ ಹಾಕಲಾಗುತ್ತಿದೆ. ಹಾಗಾಗಿ, ರಾತ್ರಿ ಹೊತ್ತು ಇಲ್ಲಿಗೆ ಬರಲು ಯಾರೂ ಧೈರ್ಯ ತೋರುತ್ತಿಲ್ಲ.[ಪೋಯಸ್ ಗಾರ್ಡನ್ ಬಂಗಲೆಗಾಗಿ ಶುರುವಾಯಿತು ಮಹಾಕದನ!]

ಅಳುವ ಧ್ವನಿ ಜಯಾ ಆತ್ಮದ್ದು

ಅಳುವ ಧ್ವನಿ ಜಯಾ ಆತ್ಮದ್ದು

ಬಂಗಲೆಯಲ್ಲಿ ಕೇಳಿಬರುತ್ತಿರುವ ಸದ್ದು ಜಯಾ ಆತ್ಮದ್ದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜಯಲಲಿತಾ ಅವರದ್ದು ಸಹಜ ಸಾವೇ, ಅಸಹಜ ಸಾವೇ ಎನ್ನುವುದು ತಮಿಳುನಾಡಿನಲ್ಲಿ ಇನ್ನೂ ಚರ್ಚೆಯ ವಿಷಯವಾಗಿರುವುದರಿಂದ, ರಾತ್ರಿ ಕೇಳಿಬರುತ್ತಿದೆ ಎನ್ನಲಾಗುತ್ತಿರುವ ಅಳುವಿನ ಧ್ವನಿಗೆ ಇನ್ನಷ್ಟು ರೆಕ್ಕೆಪುಕ್ಕಗಳು ಅಂತೆಕಂತೆ ಸುದ್ದಿಗಳು ಸೇರುತ್ತಿವೆ.

ಪನ್ನೀರ್ ಸೆಲ್ವಂ ಹೇಳಿದ್ದರು

ಪನ್ನೀರ್ ಸೆಲ್ವಂ ಹೇಳಿದ್ದರು

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಜಯಾ ಆತ್ಮ ನನ್ನಲ್ಲಿ ಬಂದು ಮಾತನಾಡಿತು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ತಮಿಳರ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದ ಜಯಲಲಿತಾ ಬಂಗಲೆ ಈ ರೀತಿ ಪಾಳುಬಿದ್ದ ಸ್ಥಿತಿಯಲ್ಲಿರುವುದು ಮಾತ್ರ ದುರಂತ.

English summary
Late Tamilnadu Chief Minister Jayalalithaa's official residence Poes Palacce in Poes Garden bungalow turns haunted palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X