Get Updates
Get notified of breaking news, exclusive insights, and must-see stories!

ಪೋಯಸ್ ಗಾರ್ಡನ್ ಬಂಗಲೆಗಾಗಿ ಶುರುವಾಯಿತು ಮಹಾಕದನ!

ಚೆನ್ನೈ, ಫೆಬ್ರವರಿ 23: ಮೊದಲ ಬಾರಿಗೆ ಮೌನ ಮುರಿದಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸೋದರನ ಮಗ (ಸೋದರಳಿಯ) ದೀಪಕ್ ಜಯಕುಮಾರ್, ಪೋಯಸ್ ಗಾರ್ಡನ್ ನ ಬಂಗಲೆ ತನಗೆ ಹಾಗೂ ತನ್ನ ಸೋದರಿ ದೀಪಾಗೆ ಸೇರಿದ್ದು ಎಂದು ಹೇಳಿದ್ದಾರೆ.

ಟಿವಿ ಚಾನಲ್ ನ್ಯೂಸ್ ಎಕ್ಸ್ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ದೀಪಕ್, ಶಶಿಕಲಾ ಸಂಬಂಧಿಕರಾದ ಟಿಟಿವಿ ದಿನಕರನ್ ಮತ್ತು ವೆಂಕಟೇಶ್ ರಿಂದ ಎಐಎಡಿಎಂಕೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಹೇಳಿಕೆ ಮೂಲಕ ಜಯಲಿತಾರ ಸೋದರ ಸಂಬಂಧಿಗಳು ಹಾಗೂ ಶಶಿಕಲಾ ಸಂಬಂಧಿಕರ ಮಧ್ಯೆಯೇ ಜಯಲಲಿತಾರ ಉತ್ತರಾಧಿಕಾರ ಕದನ ಏರ್ಪಡುವಂತೆ ಕಾಣುತ್ತಿದೆ.[10 ಕೋಟಿ ರುಪಾಯಿ ದಂಡವನ್ನು ಶಶಿಕಲಾ ಹೇಗೆ ಕಟ್ತಾರೆ?]

ಸುಪ್ರೀಂ ಕೋರ್ಟ್ ಜಯಲಲಿತಾ ಅವರಿಗೆ ವಿಧಿಸಿದ ದಂಡ ಪಾವತಿಸಬಲ್ಲೆ. ನನಗೆ ಯಾವುದೇ ರಾಜಕೀಯ ಅಕಾಂಕ್ಷೆಗಳಿಲ್ಲ ಎಂದಿರುವ ದೀಪಕ್. "ನಾನು ಆಸ್ತಿ ಮಾರಿ ದಂಡ ಕಟ್ತೀನಿ. ಅದರೆ ಪೋಯಸ್ ಗಾರ್ಡನ್ ನನಗೆ ಹಾಗೂ ದೀಪಾಗೆ ಸೇರಿದ್ದು. ಬೇರೆ ಯಾರೂ ಅದರ ಮಾಲೀಕತ್ವ ಸ್ಥಾಪಿಸಲು ಸಾಧ್ಯವಿಲ್ಲ. ನಾನು ಹಾಗೂ ದೀಪಾ ಮಾತ್ರ ನನ್ನ ಅತ್ತೆಯ ಆಸ್ತಿಗೆ ಹಕ್ಕುದಾರರು" ಎಂದಿದ್ದಾರೆ.

ದಿನಕರನ್, ವೆಂಕಟೇಶ್ ಗೆ ಹಕ್ಕಿಲ್ಲ

ದಿನಕರನ್, ವೆಂಕಟೇಶ್ ಗೆ ಹಕ್ಕಿಲ್ಲ

"ನನಗೆ ರಾಜಕಿಯ ಉದ್ದೇಶಗಳೇನಿಲ್ಲ. ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಪ್ತೀನಿ. ಆದರೆ ದಿನಕರನ್ ಹಾಗೂ ವೆಂಕಟೇಶ್ ಗೆ ಪ್ರಮುಖ ಸ್ಥಾನಗಳನ್ನು ಕೊಟ್ಟಿರೋದು ಹೇಗೆ ಒಪ್ಪಲು ಸಾಧ್ಯ? ದೀಪಾ ಬೇಕಾದರೆ ಪಕ್ಷದಲ್ಲಿ ಸ್ಥಾನ ಕೇಳಬಹುದು. ಅದರೆ ಇವರಿಬ್ಬರಿಗೆ ಆ ಹಕ್ಕಿಲ್ಲ. ಕುಟುಂಬ ರಾಜಕಾರಣ ತರುವ ಯತ್ನ ನಡೆಯುತ್ತಿದೆ" ಎಂದಿದ್ದಾರೆ.

ಪನ್ನೀರ್ ಸೆಲ್ವಂ ಉತ್ತಮ ಆಡಳಿತ ಕೊಟ್ಟಿದ್ದಾರೆ

ಪನ್ನೀರ್ ಸೆಲ್ವಂ ಉತ್ತಮ ಆಡಳಿತ ಕೊಟ್ಟಿದ್ದಾರೆ

ಪನ್ನೀರ್ ಸೆಲ್ವಂ ಬಗ್ಗೆ ಮಾತನಾಡಿರುವ ದೀಪಕ್, ಅವರು ಉತ್ತಮ ಆಡಳಿತಕ್ಕೆ ಸಹಕಾರ ನೀಡಿದ್ದಾರೆ. "ಉತ್ತಮ ಆಡಳಿತಕ್ಕೆ ಸಹಕಾರ ನೀಡಿದ್ದಕ್ಕೆ ನಾನು ಬೆಂಬಲ ನೀಡುತ್ತೇನೆ ಮತ್ತು ಅವರನ್ನು ಗೌರವಿಸುತ್ತೇನೆ. ಅವರೊಬ್ಬ ಉತ್ತಮ ಮುಖ್ಯಮಂತ್ರಿ ಆಗಿದ್ದರು. ಇದಕ್ಕಿಂತ ಅವರ ಬಗ್ಗೆ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ.

ಎಐಎಡಿಎಂಕೆ ಇಬ್ಭಾಗ ಸಾಧ್ಯತೆ

ಎಐಎಡಿಎಂಕೆ ಇಬ್ಭಾಗ ಸಾಧ್ಯತೆ

ದೀಪಕ್ ಹೇಳಿಕೆ ಗಮನಿಸಿದರೆ ಎಐಎಡಿಎಂಕೆ ಹಾಗೂ ಜಯಲಲಿತಾ ಬೆಂಬಲಿಗರು ಇಬ್ಭಾಗ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಏಕೆಂದರೆ ಜಯಲಲಿತಾ ಅಂತ್ಯಸಂಸ್ಕಾರದ ವೇಳೆ ಶಶಿಕಲಾ ಜೊತೆಗೆ ಕಾಣಿಸಿಕೊಂಡಿದ್ದರು ದೀಪಕ್. ಆ ಸಂದರ್ಭದಲ್ಲಿ ಆತನ ಸೋದರಿ ದೀಪಾ ಉದ್ದೇಶಪೂರ್ವಕವಾಗಿ ಅಂತರ ಕಾಯ್ದುಕೊಂಡಿದ್ದರು.

ಆಗೆಲ್ಲ ದೀಪಕ್ ಜತೆಯಲ್ಲಿದ್ದರು

ಆಗೆಲ್ಲ ದೀಪಕ್ ಜತೆಯಲ್ಲಿದ್ದರು

ಇನ್ನು ಜಯಲಲಿತಾ ಅವರ ನಿಧನ ಸುದ್ದಿಯನ್ನು ಅಪೋಲೋ ಆಸ್ಪತ್ರೆಯಲ್ಲಿ ಘೋಷಿಸುವ ಸಂದರ್ಭದಲ್ಲೂ ದೀಪಕ್ ಅಲ್ಲಿದ್ದರು. ವಿಶ್ವಾಸಮತ ಸಾಬೀತಿಗೆ ಮುನ್ನ ಪಕ್ಷದ ಶಾಸಕರು ರೆಸಾರ್ಟ್ ನಲ್ಲಿದ್ದರಲ್ಲಾ, ಆಗಲೂ ದೀಪಕ್ ಅದೇ ರೆಸಾರ್ಟ್ ನಲ್ಲಿದ್ದರು. ಒ.ಪನ್ನೀರ್ ಸೆಲ್ವಂರನ್ನು ಶಶಿಕಲಾ ಪಕ್ಷದಿಂದ ಉಚ್ಚಾಟಿಸಿದಾಗ ದಿನಕರನ್ ಜತೆಗೆ ದೀಪಕ್ ಸಭೆಯಲ್ಲಿ ಹಾಜರಿದ್ದರು.

ಹೊಸ ರಾಜಕೀಯ ತಿರುವು

ಹೊಸ ರಾಜಕೀಯ ತಿರುವು

ಪೋಯಸ್ ಗಾರ್ಡನ್ ನ ಜಯಲಲಿತಾ ಸ್ಮಾರಕವಾಗಿ ಮಾಡಬೇಕು ಎಂದು ಒಪಿಎಸ್ ಹೇಳಿದಾಗ ಕೂಡ ಶಶಿಕಲಾ ಪರವಾಗಿಯೇ ದೀಪಕ್ ಇದ್ದರು. ಆದರೆ ಆತನ ಟಿವಿ ಸಂದರ್ಶನವು ತಮಿಳುನಾಡು ರಾಜಕೀಯಕ್ಕೆ ಹೊಸ ತಿರುವು ಕೊಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+