ಅತೀಕ್ ಅಹ್ಮದ್ ವಶಪಡಿಸಿಕೊಂಡಿದ್ದ ಜಮೀನು ಮಾಲೀಕರಿಗೆ ವಾಪಸ್: ಆಯೋಗ ರಚನೆಗೆ ಯೋಗಿ ಸರ್ಕಾರ ಚಿಂತನೆ
ಲಕ್ನೋ ಏಪ್ರಿಲ್ 25: ಕ್ರಿಮಿನಲ್ ಅತೀಕ್ ಅಹ್ಮದ್ ತನಗೆ ಇಷ್ಟವಾದ ಜಮೀನನ್ನು ಕಬಳಿಸುತ್ತಿದ್ದ. ತನಗೆ ಬೇಕೆನಿಸಿದರೆ ಅರ್ಧ ಬೆಲೆಗೂ ಜನರಿಂದ ಜಮೀನು ಖರೀದಿಸುತ್ತಿದ್ದನು. ಅತೀಕ್ ನ ಭೀಕರತೆಯಿಂದ ನರಳುತ್ತಿರುವವರಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ.
ಹೌದು.. ಅತೀಕ್ ವಶಪಡಿಸಿಕೊಂಡ ಭೂಮಿಯನ್ನು ಜನರಿಗೆ ಹಿಂದಿರುಗಿಸಬಹುದೇ ಎಂದು ಯೋಗಿ ಸರ್ಕಾರ ಚಿಂತನೆ ನಡೆಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಜ್ಯದಲ್ಲಿ ಯೋಗಿ ಸರ್ಕಾರ ಇದಕ್ಕಾಗಿ ಆಯೋಗವನ್ನು ರಚಿಸುತ್ತಿದೆ. ಈ ಆಯೋಗ ಅತೀಕ್ನಿಂದ ಭೂಮಿಯನ್ನು ಕಳೆದುಕೊಂಡವರು ಕಾನೂನುಬದ್ಧವಾಗಿ ಮರಳಿ ಪಡೆಯಲು ಸಹಾಯ ಮಾಡುತ್ತದೆ.

ಅತೀಕ್ ಅಹ್ಮದ್ ಹತ್ಯೆ ಪ್ರಕರಣದ ನಂತರ ಇದೀಗ ಯೋಗಿ ಸರ್ಕಾರ ಮಾಫಿಯಾದಿಂದ ವಶಪಡಿಸಿಕೊಂಡಿರುವ ಭೂಮಿಯನ್ನು ಜನರಿಗೆ ಹಿಂದಿರುಗಿಸಲು ಯೋಜಿಸುತ್ತಿದೆ. ಸುದ್ದಿ ಪ್ರಕಾರ, ಯೋಗಿ ಸರ್ಕಾರ ಶೀಘ್ರದಲ್ಲೇ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಅತೀಕ್ ಹತ್ಯೆ ಪ್ರಕರಣದ ನಂತರ ಅತೀಕ್ ಮತ್ತು ಅಶ್ರಫ್ ಬಲವಂತವಾಗಿ ಜಮೀನು ಕಬಳಿಸಿದವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ವಿವರ ಸಿದ್ಧಪಡಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಅನೇಕರು ಇಂದು ಪೊಲೀಸರ ಠಾಣೆಗೆ ಬರುತ್ತಿದ್ದಾರೆ.
ಇದೀಗ ಈ ಜಮೀನುಗಳನ್ನು ಅತೀಕ್ ಗ್ಯಾಂಗ್‌ಗಳ ವಶದಿಂದ ಮುಕ್ತಗೊಳಿಸಿ ಜನರಿಗೆ ಹಿಂದಿರುಗಿಸುವ ಯೋಜನೆಯನ್ನು ಯೋಗಿ ಸರ್ಕಾರ ಹೊಂದಿದೆ. ಸುದ್ದಿ ಪ್ರಕಾರ, ಇದಕ್ಕಾಗಿ ಸಮಿತಿಯನ್ನು ರಚಿಸುವ ಚಿಂತನೆ ನಡೆದಿದೆ. ಸಂತ್ರಸ್ತರಿಗೆ ತಮ್ಮ ಜಮೀನು ವಾಪಸ್ ಪಡೆಯಲು ಆಯೋಗ ಕಾನೂನು ನೆರವು ನೀಡಲಿದೆ.

ಯುಪಿ ನಗರಪಾಲಿಕೆ ಚುನಾವಣೆ: -
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುನ್ಸಿಪಲ್ ಚುನಾವಣಾ ಪ್ರಚಾರದ ಆರಂಭದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈಗ ರಾಜ್ಯದಲ್ಲಿ ಕರ್ಫ್ಯೂ ಇಲ್ಲ, ಗಲಭೆ ಇಲ್ಲ ಎಂದು ಸಿಎಂ ಹೇಳಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗ ಗಲಭೆಯಾಗಲೀ, ಕರ್ಫ್ಯೂ ಆಗಲಿ ಇಲ್ಲ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಯುಪಿ ಇನ್ನು ಮುಂದೆ ಉತ್ಕೃಷ್ಟ ರಾಜ್ಯವಾಗಿರುವುದರಿಂದ ಇಲ್ಲಿ ಯಾವುದೇ ಸುಲಿಗೆ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯುಪಿ 6 ವರ್ಷಗಳ ಹಿಂದೆ ಗಲಭೆ ಮತ್ತು ಕರ್ಫ್ಯೂ ಐಡೆಂಟಿಟಿಯಾಗಿತ್ತು. ಹೆಣ್ಣು ಮಕ್ಕಳಾಗಲೀ ತಾಯಂದಿರ ಗೌರವವಾಗಲೀ ಸುರಕ್ಷಿತವಾಗಿರಲಿಲ್ಲ. ತುಷ್ಟೀಕರಣ ಮತ್ತು ಪಲಾಯನವಾದದ ರಾಜಕಾರಣ ನಡೆಯುತ್ತಿತ್ತು. ಕೇವಲ 6 ವರ್ಷಗಳಲ್ಲಿ ಸಂಪೂರ್ಣ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಈಗ ಮಾಫಿಯಾ-ಕ್ರಿಮಿನಲ್‌ಗಳು ಹಿಂದೆ ಸರಿದಿದ್ದಾರೆ, ಭದ್ರತೆ, ಸಮೃದ್ಧಿ ಮತ್ತು ಉದ್ಯೋಗ ಹೆಚ್ಚಾಗಿದೆ ಎಂದು ಸಿಎಂ ಯೋಗಿ ಹೇಳಿದರು.












Click it and Unblock the Notifications