ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಅತಿಹೆಚ್ಚು ಬಳಕೆಯಾಗವು ಪ್ರತಿರೋಧಕ ಮಾತ್ರೆ ಯಾವುದು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಹಾಗೂ ಅದಕ್ಕೂ ಪೂರ್ವದಲ್ಲಿ ಮಾತ್ರೆಗಳು ಅಂದರೆ ಭಾರತೀಯರಿಗೆ ಬಲು ಅಚ್ಚುಮೆಚ್ಚು ಎಂದು ಸಾಬೀತುಪಡಿಸುವ ಅಧ್ಯಯನವೊಂದು ಹೊರ ಬಿದ್ದಿದೆ.

ಭಾರತದಲ್ಲಿ ನೆಗಡಿ, ಕೆಮ್ಮು, ಜ್ವರ, ತಲೆನೋವು, ಮೈ-ಕೈ ನೋವು ಹೀಗೆ ಪ್ರತಿಯೊಬ್ಬಕ್ಕೂ ಜನರು ರೋಗ ಪ್ರತಿರೋಧಕ(antibiotics) ಮಾತ್ರೆಗಳ ಮೇಲೆ ಡಿಪೆಂಡ್ ಆಗಿದ್ದಾರೆ. ದೇಶದಲ್ಲಿ ಈ ಔಷಧಿಗಳ ಅಸಮರ್ಪಕ ಬಳಕೆಯ ಬಗ್ಗೆ ಅಧ್ಯಯನವನ್ನು ನಡೆಸಲಾಗಿದೆ.

ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ: ಈ ರೋಗ ಎಷ್ಟು ಅಪಾಯಕಾರಿ?ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ: ಈ ರೋಗ ಎಷ್ಟು ಅಪಾಯಕಾರಿ?

ಆಗ್ನೇಯ ಏಷ್ಯಾದ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಭಾರತೀಯರು ಅತಿಹೆಚ್ಚಾಗಿ ಬಳಸುವ ಪ್ರತಿರೋಧಕ ಔಷಧಿಗಳಲ್ಲಿ ಹೆಚ್ಚಿನ ಔಷಧಿಗಳು ಕೇಂದ್ರ ನಿಯಂತ್ರಣ ಪ್ರಾಧಿಕಾರದ ಅನುಮೋದನೆಯನ್ನೇ ಪಡೆದುಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ಸೆಪ್ಟೆಂಬರ್ 1ರಂದು ಪ್ರತಿಷ್ಠಿತ ಜರ್ನಲ್‌ನಲ್ಲಿ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ.

ರಾಜ್ಯ ಮತ್ತು ಕೇಂದ್ರೀಯ ಏಜೆನ್ಸಿ ನಡುವೆ ಪೈಪೋಟಿ

ರಾಜ್ಯ ಮತ್ತು ಕೇಂದ್ರೀಯ ಏಜೆನ್ಸಿ ನಡುವೆ ಪೈಪೋಟಿ

ಔಷಧಿ ನಿಯಂತ್ರಣದ ಅಧಿಕಾರವನ್ನು ಪಡೆದುಕೊಳ್ಳುವುದಕ್ಕಾಗಿ ರಾಷ್ಟ್ರೀಯ ಮತ್ತು ರಾಜ್ಯದ ಏಜೆನ್ಸಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ದೇಶದಲ್ಲಿ ಪ್ರತಿರೋಧಕ ಔಷಧಿಗಳ ಲಭ್ಯತೆ, ಮಾರಾಟ ಮತ್ತು ಬಳಕೆಯನ್ನು ಸಮತೋಲನಗೊಳಿಸುವ ಬಗ್ಗೆ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. "ಹಲವು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಖಾಸಗಿ ವಲಯದಲ್ಲಿ ಉತ್ಪಾದಿಸುವ ಪ್ರತಿರೋಧಕ ಔಷಧಿಗಳ ಬಳಕೆಯು ಕಡಿಮೆಯಿದೆ. ಆದರೆ ದೇಶದಲ್ಲಿ ಒಟ್ಟಾರೆ ಪ್ರತಿರೋಧಕಗಳ ಬಳಕೆಯ ಗಣನೀಯ ಪ್ರಮಾಣದಲ್ಲಿದ್ದು, ಅದನ್ನು ತಗ್ಗಿಸುವ ಹಾಗೂ ಮಿತವಾಗಿ ಬಳಸುವುದು ಸೂಕ್ತವೆಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ನವದೆಹಲಿ ಮೂಲದ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದಿಂದ ಆಶ್ನಾ ಮೆಹ್ತಾ ಅವರು ನೀಡಿದ ಕೊಡುಗೆಯನ್ನು ಅಧ್ಯಯನವು ಅಂಗೀಕರಿಸಿದೆ.

ಅಂಕಿ-ಅಂಶಗಳನ್ನು ವಿಶ್ಲೇಷಿಸಿದ ವಿಶೇಷ ತಂಡ

ಅಂಕಿ-ಅಂಶಗಳನ್ನು ವಿಶ್ಲೇಷಿಸಿದ ವಿಶೇಷ ತಂಡ

ಭಾರತದಾದ್ಯಂತ ಖಾಸಗಿ ವಲಯದ ಔಷಧಯನ್ನು ಮಾರಾಟ ಮಾಡುವ 9,000 ಪ್ರತಿನಿಧಿಗಳ ಪ್ಯಾನೆಲ್‌ನಿಂದ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಈ ದತ್ತಾಂಶವನ್ನು ಫಾರ್ಮಾಟ್ರಾಕ್‌ನಿಂದ ವಿಶ್ಲೇಷಿಸಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. ಅಲ್ಲದೇ ರೋಗದ ಪ್ರತಿರೋಧಕಗಳ ತಲಾವಾರು ಖಾಸಗಿ ವಲಯದ ಬಳಕೆಯನ್ನು ಲೆಕ್ಕಹಾಕಲು ಮೆಟ್ರಿಕ್ ಡಿಫೈನ್ಡ್ ಡೈಲಿ ಡೋಸ್ (ಡಿಡಿಡಿ) ಅನ್ನು ಬಳಸಲಾಗಿದೆ.

ಕಳೆದ 2019ರಲ್ಲಿ 5071 ದಶಲಕ್ಷ ಡೋಸ್ ಔಷಧಿ ಸೇವನೆ

ಕಳೆದ 2019ರಲ್ಲಿ 5071 ದಶಲಕ್ಷ ಡೋಸ್ ಔಷಧಿ ಸೇವನೆ

ಭಾರತದಲ್ಲಿ 2019ರಲ್ಲಿ 5071 ದಶಲಕ್ಷ ಡಿಫೈನ್ಡ್ ಡೈಲಿ ಡೋಸ್ (ಡಿಡಿಡಿ) ಅನ್ನು ಬಳಕೆ ಮಾಡಲಾಗಿದೆ ಎಂದು ಸಂಶೋಧನೆಯು ಹೇಳುತ್ತದೆ. ಅದರ ಪ್ರಕಾರ, ಒಂದು ದಿನಕ್ಕೆ 1,000 ಜನರು 10.4 ಡಿಡಿಡಿ ಸೇವಿಸಿರುವುದು ಗೊತ್ತಾಗುತ್ತದೆ. ಹನ್ನೆರಡು ಪ್ರತಿರೋಧಕ ಅಣುಗಳಲ್ಲಿ ಒಟ್ಟು ಸೇವನೆಯ ಶೇ.75ರಷ್ಟಿದೆ. ಅಜಿಥ್ರೋಮೈಸಿನ್ ಹೆಚ್ಚು ಸೇವಿಸಿದ ಪ್ರತಿರೋಧಕ ಅಣುವಾಗಿದೆ. ಪ್ರತಿರೋಧಕಗಳಲ್ಲಿ ಅಜಿಥ್ರೋಮೈಸಿನ್ ಶೇ.12.60ರಷ್ಟು ಅಂದರೆ 640 ಮಿಲಿಯನ್ ಡೋಸ್ ಬಳಸಿದರೆ, ಸೆಫಿಕ್ಸಿಮ್ ಪ್ರತಿರೋಧಕವನ್ನು ಶೇ.10.20ರಷ್ಟು ಅಂದರೆ 516 ದಶಲಕ್ಷ ಡೋಸ್ ಅನ್ನು ಬಳಸಲಾಗುತ್ತಿದೆ. ಅ

ಅತಿಹೆಚ್ಚು ಬಳಕೆಯಾದ ಅಜಿಥ್ರೊಮೈಸಿನ್ ಮಾತ್ರೆಗಳು

ಅತಿಹೆಚ್ಚು ಬಳಕೆಯಾದ ಅಜಿಥ್ರೊಮೈಸಿನ್ ಮಾತ್ರೆಗಳು

ಭಾರತದಲ್ಲಿ 500MG ಇರುವ ಅಜಿಥ್ರೊಮೈಸಿನ್ ಮಾತ್ರೆಗಳನ್ನು ಅತಿಹೆಚ್ಚಾಗಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಆ ಪ್ರಕಾರ, ದೇಶದಲ್ಲಿ 384 ಮಿಲಿಯನ್ ಅಂದರೆ ಶೇ.7.6ರಷ್ಟು ಜನರು ಈ ಮಾತ್ರೆಗಳನ್ನು ಬಳಸಿದ್ದಾರೆ. ಅದೇ ರೀತಿ 200MG ಇರುವ ಸೆಫಿಕ್ಸಿಮ್ ಮಾತ್ರೆಗಳನ್ನು ಶೇ.6.5ರಷ್ಟು ಅಂದರೆ 331 ದಶಲಕ್ಷದಷ್ಟು ಜನರು ಬಳಸಿದ್ದಾರೆ ಎಂದು ಅಧ್ಯಯನದಲ್ಲಿ ಸಂಶೋಧಕರು ತಿಳಿಸಿದ್ದಾರೆ.

"ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ(NLEM)ಯಲ್ಲಿ ಮಾಡಲಾದ ಸೂತ್ರೀಕರಣಗಳು ಶೇ.49ರಷ್ಟು ಕೊಡುಗೆ ನೀಡಿದೆ. ಭಾರತದಲ್ಲಿ 1,098 ವಿಶಿಷ್ಟ ಸೂತ್ರೀಕರಣಗಳು ಮತ್ತು 10,100 ವಿಶಿಷ್ಟ ಉತ್ಪನ್ನಗಳ (ಬ್ರಾಂಡ್‌ಗಳು) ಪ್ರತಿರೋಧಕಗಳಿವೆ ಎಂದು ಹೇಳಿದೆ.

English summary
Lancet Study says Indians are use antibiotics Excessively; Azithromycin On Top of the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X