• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲು ಪ್ರಸಾದ್‌ ಯಾದವ್‌ಗೆ ಕಿಡ್ನಿ ಶಸ್ತ್ರಚಿಕಿತ್ಸೆ ಯಶಸ್ವಿ

|
Google Oneindia Kannada News

ಲಕ್ನೋ, ಡಿಸೆಂಬರ್‌ 5: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಯಾದವ್ ಅವರ ಕಿಡ್ನಿ ಕಸಿ ಪ್ರಕ್ರಿಯೆ ಯಶಸ್ವಿಯಾಗಿದ್ದು, ಅವರ ಮಗಳು ರೋಹಿಣಿ ಆಚಾರ್ಯ ಅವರು ತಂದೆಗೆ ಕಡ್ನಿಯನ್ನು ದಾನ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ತನ್ನ ತಂದೆಯೊಂದಿಗೆ ಶಸ್ತ್ರಚಿಕಿತ್ಸೆಯ ಪೂರ್ವ ಫೋಟೋವನ್ನು ಹಂಚಿಕೊಂಡಿರುವ ರೋಹಿಣಿ ಆಚಾರ್ಯ ಅವರು ರಾಕ್ ಅಂಡ್ ರೋಲ್ ಮಾಡಲು ಸಿದ್ಧ ಎಂದು ಹೇಳಿದ್ದು, ಅವರ ಅನುಯಾಯಿಗಳಿಗೆ ತಮ್ಮ ತಂದೆಗಾಗಿ ಪ್ರಾರ್ಥಿಸಲು ಕೇಳಿಕೊಂಡರು. ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಪ್ರಸಾದ್‌ ಯಾದವ್ ಅವರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು ಎಂದು ಅವರ ಮಗಳು ರೋಹಿಣಿ ಆಚಾರ್ಯ ಅವರು ದೃಢಪಡಿಸಿದ್ದಾರೆ. ಅವರು ತಮ್ಮ ಮೂತ್ರಪಿಂಡಗಳಲ್ಲಿ ಒಂದನ್ನು ತಮ್ಮ ತಂದೆಗೆ ದಾನ ಮಾಡಿರುವುದಾಗಿ ತಿಳಿಸಿದ್ದಾರೆ.

ಸಮಾಜವಾದಿ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಿತೀಶ್, ಲಾಲೂ: ಅಮಿತ್ ಶಾಸಮಾಜವಾದಿ ಸಿದ್ಧಾಂತಗಳನ್ನು ಗಾಳಿಗೆ ತೂರಿದ ನಿತೀಶ್, ಲಾಲೂ: ಅಮಿತ್ ಶಾ

ಲಾಲು ಪ್ರಸಾದ್‌ ಯಾದವ್‌ ಅವರ ಸಿಂಗಾಪುರ ಮೂಲದ ಎರಡನೇ ಪುತ್ರಿ ರೋಹಿಣಿ ಆಚಾರ್ಯ ಆಗಾಗ್ಗೆ ಟ್ವಿಟರ್‌ನಲ್ಲಿ ತನ್ನ ತಂದೆಯ ಬಗ್ಗೆ ಬರೆಯುತ್ತಾರೆ. ಇತ್ತೀಚೆಗಷ್ಟೇ ಅವರು ಟ್ವೀಟ್ ಮಾಡಿದ್ದು, ನನ್ನ ತಾಯಿ ಮತ್ತು ತಂದೆ ನನಗೆ ದೇವರು, ನಾನು ಅವರಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಬರೆದುಕೊಂಡಿದ್ದರು. ಮೂತ್ರಪಿಂಡ ಕಸಿ ಮಾಡುವಾಗ, ಅವರು ತನ್ನ ತಂದೆಗೆ ನೀಡಲು ಕಿಡ್ನಿ ಬಯಸಿದ್ದು ಕೇವಲ ಒಂದು ಸಣ್ಣ ಮಾಂಸದ ತುಂಡು ಎಂದು ಹೇಳಿದ್ದರು.

ರೋಹಿಣಿ ಅವರ ಸಹೋದರಿ ಮತ್ತು ಲಾಲು ಯಾದವ್ ಅವರ ಹಿರಿಯ ಪುತ್ರಿ ಡಾ. ಮಿಸಾ ಭಾರತಿ ಅವರು ರಾಜ್ಯಸಭಾ ಸಂಸದರಾಗಿದ್ದಾರೆ. ಅವರು ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಿಂದ ಟ್ವೀಟ್ ಮಾಡಿ "ತಂಗಿ ರೋಹಿಣಿಯ ಆಪರೇಷನ್ ಯಶಸ್ವಿಯಾಗಿ ಮಾಡಲಾಗಿದೆ. ಅವರು ಈಗ ಐಸಿಯುನಲ್ಲಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಈಗ ತಂದೆಯ ಆಪರೇಷನ್ ನಡೆಯುತ್ತಿದೆ ಎಂದು ಅವರು ಹೇಳಿದ್ದರು.

ಭವಿಷ್ಯದ ಬಿಜೆಪಿ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣವೇ!?ಭವಿಷ್ಯದ ಬಿಜೆಪಿ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣವೇ!?

ಶಸ್ತ್ರಚಿಕಿತ್ಸೆಗೆ ಮುನ್ನ ಆಕೆಯ ಮತ್ತು ಆಕೆಯ ತಂದೆಯ ಫೋಟೋವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಲಾಲು ಪ್ರಸಾದ್‌ ಯಾದವ್ ಅವರ ಪುತ್ರ, ಬಿಹಾರದ ಹಾಲಿ ಉಪಮುಖ್ಯಮಂತ್ರಿ, ತೇಜಸ್ವಿ ಯಾದವ್, ಶಸ್ತ್ರಚಿಕಿತ್ಸೆಯ ನಂತರ ವೀಡಿಯೊವನ್ನು ಹಂಚಿಕೊಂಡಿದ್ದು, "ಪಾಪ್ಪಾ ಅವರ ಮೂತ್ರಪಿಂಡ ಕಸಿ ಕಾರ್ಯಾಚರಣೆ ಯಶಸ್ವಿಯಾದ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಯಿತು. ಸಹೋದರಿ ರೋಹಿಣಿ ಆಚಾರ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು." ಎಂದು ಹೇಳಿದ್ದಾರೆ.

Lalu Prasad Yadav, who received a kidney from his daughter, has a successful kidney surgery

ಮೇವು ಹಗರಣ ಪ್ರಕರಣಗಳಲ್ಲಿ ಅಪರಾಧಿಯಾಗಿರುವ ಲಾಲು ಪ್ರಸಾದ್‌ ಯಾದವ್ ಅವರು ಆರೋಗ್ಯ ಸಮಸ್ಯೆಗಳಿಂದಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಭೇಟಿ ತೆರಳಿದ್ದರು. ಆದರೆ ದೆಹಲಿ ನ್ಯಾಯಾಲಯವು ಅವರ ವಿದೇಶಿ ಭೇಟಿಗೆ ನಿಗದಿಪಡಿಸಿದ ಅವಧಿಯ ಮುಕ್ತಾಯದ ಕಾರಣ ಹಿಂತಿರುಗಬೇಕಾಯಿತು. ಅವರು ತಮ್ಮ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಪ್ರಸ್ತುತ ಸಿಂಗಾಪುರದಲ್ಲಿದ್ದಾರೆ.

English summary
Rashtriya Janata Dal president Lalu Yadav's kidney transplant was successful, his daughter Rohini Acharya donated a kidney to her father.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X