Get Updates
Get notified of breaking news, exclusive insights, and must-see stories!

ಲಾಲೂ ಮಗನಿಗೆ ಆರು ತಿಂಗಳಿನಿಂದ 'ಭೂತ' ಕಾಟ

ಪಾಟ್ನಾ, ಫೆಬ್ರವರಿ 22: ಆರ್​ಜಿಡಿ ಮುಖಂಡ, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್ ಅವರು ಮೇವು ಹಗರಣದಲ್ಲಿ ಅಪರಾಧಿ ಎನಿಸಿ ಜೈಲು ಪಾಲಾಗಿದ್ದಾರೆ.

ಆದರೆ, ಅವರ ಹಿರಿಯ ಮಗ ತೇಜ್​ ಪ್ರತಾಪ್​ ಯಾದವ್​ ಅವರು ಇನ್ನೂ ಸಕ್ರಿಯ ರಾಜಕೀಯದಲ್ಲಿದ್ದು, ಸಚಿವರಾಗಿದ್ದಾಗ ಸಿಕ್ಕ ಬಂಗಲೆಯಲ್ಲಿ ಭೂತಕಾಟವಿದೆ ಎಂದು ಆರೋಪಿಸಿದ್ದಾರೆ.

Lalu Prasad Son Pratap Yadav vacates Ghost Bungalow

ಇದೇ 'ಭೂತ' ದ ಕಾಟಕ್ಕೆ ಹೆದರಿ ಸರ್ಕಾರಿ ಬಂಗಲೆಯನ್ನೇ ತೊರೆದಿದ್ದಾಗಿ ಹೇಳಿದ್ದಾರೆ. ಆರ್​ಜಿಡಿ, ಜೆಡಿ(ಯು) ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದ ಕಾಲದಲ್ಲಿ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಆರೋಗ್ಯ ಸಚಿವರಾಗಿದ್ದರು. ತೇಜ್​ ಪ್ರತಾಪ್​ ಯಾದವ್​ ಅವರಿಗೆ ಪಾಟ್ನಾದ ದೇಶರತ್ನಾ ಮಾರ್ಗ್​ ನಲ್ಲಿ ಸರ್ಕಾರಿ ಬಂಗಲೆ ನೀಡಲಾಗಿತ್ತು.

Lalu Prasad Son Pratap Yadav vacates Ghost Bungalow

ಆದರೆ, ರಾಜಕೀಯ ಬೆಳವಣಿಗೆಯಾಗಿ ಬಿಜೆಪಿ ಮತ್ತು ಜೆಡಿ(ಯು) ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಇದಾದ ಕೂಡಲೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ತೇಜ್​ ಪ್ರತಾಪ್​ಗೆ ನಿತೀಶ್ ಕುಮಾರ್ ಸರ್ಕಾರ ಆದೇಶಿಸಿತ್ತು.

ಸರ್ಕಾರಿ ಆದೇಶದ ವಿರುದ್ಧ ಪಾಟ್ನ ಹೈ ಕೋರ್ಟ್​ ಮೊರೆ ಹೋಗಿ ಆದೇಶದ ವಿರುದ್ಧ ತಡೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಬಾಡಿಗೆ ನೀಡುವಂತೆ ನಿತೀಶ್ ಕುಮಾರ್ ಸೂಚಿಸಿದ್ದರು.

ಆದರೆ ಆ ನಂತರ ಭೂತದ ಕಾಟದಿಂದಾಗಿ ಬಂಗಲೆಯನ್ನು ತೊರೆದೆ ಎಂದು ತೇಜ್​ ಪ್ರತಾಪ್​ ಯಾದವ್​ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ಸರ್ಕಾರಿ ಬಂಗಲೆಯಲ್ಲಿ ದೆವ್ವದ ಕಾಟ ಸೃಷ್ಟಿಸಿದ್ದು ಸ್ವತಃ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮತ್ತು ಸುಶೀಲ್​ ಮೋದಿ ಎಂದು ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+