ಗೂಟದ ಕಾರಿನ ಬಳಕೆ ನಿಂತರೆ ಖುಷಿ ಪಡೋರು ಪೊಲೀಸರು!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಏಪ್ರಿಲ್ 20: ಯಾವುದೇ ವಾಹನದ ಮೇಲೆ ಅನಧಿಕೃತವಾಗಿ ಬಣ್ಣದ ದೀಪಗಳನ್ನು ಬಳಸುವುದು ಕಂಡು ಬಂದರೆ ಮೊದಲ ಬಾರಿಗೆ 100 ರುಪಾಯಿ ದಂಡ, ಆ ನಂತರ 300 ರುಪಾಯಿವರೆಗೆ ದಂಡ ವಿಧಿಸುವುದಾಗಿ ದೆಹಲಿ ಮೋಟಾರು ವಾಹನ ನಿಯಮಗಳು ಹೇಳುತ್ತವೆ.

ವಾಹನಗಳ ಮೇಲೆ ಕೆಂಪು ದೀಪ ಬಳಸಬಾರದು ಎಂಬ ಸರಕಾರದ ನಿಯಮ ವಿಐಪಿ ಸಂಸ್ಕೃತಿಯನ್ನು ಮಾತ್ರವಲ್ಲ, ದುರ್ಬಳಕೆಯನ್ನು ಕೂಡ ತಡೆಯಲು ಸಹಕಾರಿಯಾಗುತ್ತದೆ. ದೆಹಲಿ ಪೊಲೀಸರಿಗೆ ಇಂಥ ದುರ್ಬಳಕೆ ತಡೆಯುವುದೇ ದೊಡ್ಡ ತಲೆನೋವಾಗಿತ್ತು. ತುಂಬ ದೊಡ್ಡವರ ವಾಹನ ತಡೆದು, ತಮ್ಮ ಕೆಲಸಕ್ಕೆಲ್ಲಿ ಕುತ್ತಾಗುತ್ತದೋ ಎಂದು ಪೊಲೀಸರು ಹೆದರುತ್ತಿದ್ದರು.[ಇನ್ಮೇಲೆ, ಭಾರತದಲ್ಲಿ ಪ್ರತಿಯೊಬ್ಬರೂ ವಿಐಪಿಯೇ..!]

Lal batti regime ends: Here is how it will help the police

2011ರಿಂದ 2013ರ ಮಧ್ಯೆ ಕೆಂಪು ದೀಪದ ಕಾರನ್ನು ದುರ್ಬಳಕೆ ಮಾಡಿದವರ ವಿರುದ್ಧ ಒಂದೇ ಒಂದು ಪ್ರಕರಣ ಕೂಡ ದಾಖಲಾಗಿಲ್ಲ. 2014ರಲ್ಲಿ 10 ಪ್ರಕರಣ, ಮರುವರ್ಷ ಏಳು ಪ್ರಕರಣ ದಾಖಲಾಗಿವೆ. ಅಂದಹಾಗೆ ನಿಯಮಗಳು ಏನು ಹೇಳುತ್ತವೆ ಅಂತ ನೋಡಬೇಕು.[ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!]

* ತುರ್ತು ಸೇವೆಯ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ಪೊಲೀಸ್ ಪಹರೆ ವಾಹನಗಳಿಗೆ ನೀಲಿ ಬಣ್ಣದ ದೀಪ ಬಳಸಬಹುದು. ಮೋಟಾರು ವಾಹನ ಕಾಯ್ದೆ 1993ರ ಪ್ರಕಾರ ನೀಲಿ ಬಣ್ಣದ ದೀಪ ಬಳಸಲು ಅವಕಾಶ ನೀಡಲಾಗಿದೆ.

* ಸುತ್ತುತ್ತಾ-ಪ್ರತಿಫಲಿಸುವ ಕೆಂಪು ದೀಪವನ್ನು ತುರ್ತು ಮೋಟಾರು ವಾಹನಗಳಾದ ಅಂಬ್ಯುಲೆನ್ಸ್, ಅಗ್ನಿಶಾಮಕ ದಳ, ದೆಹಲಿ ಪೊಲೀಸ್ ಕಂಟ್ರೋಲ್ ರೂಮ್ ನವರು ಬಳಸಬಹುದು.

* ಪೊಲೀಸ್ ಪಹರೆ ವಾಹನ, ಪೈಲಟ್ ವಾಹನ, ಸಾರಿಗೆ ಇಲಾಖೆ ವಾಹನಗಳಲ್ಲಿ ಸುತ್ತುತ್ತಾ-ಪ್ರತಿಫಲಿಸುವ ಕೆಂಪು ದೀಪವನ್ನು ವಾಹನದ ಮುಂಭಾಗ ಮತ್ತು ವಿಂಡ್ ಸ್ಕ್ರೀನ್ ನ ಮೇಲ್ಭಾಗದಲ್ಲಿ ಹಾಕಿರುತ್ತಾರೆ.

* ದೆಹಲಿಯ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನಗಳಿಗೆ ದೀಪಗಳನ್ನು ಬಳಸುತ್ತಾರೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಧಿಸೂಚನೆ ಏನು ಹೇಳುತ್ತದೆ?
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಮಾಜಿ ರಾಷ್ಟ್ರಪತಿಗಳು, ಉಪ ಪ್ರಧಾನಿ, ಭಾರತದ ಮುಖ್ಯನ್ಯಾಯಮೂರ್ತಿ, ಲೋಕಸಭೆ ಸ್ಪೀಕರ್, ಕೇಂದ್ರದ ಸಂಪುಟ ದರ್ಜೆ ಸಚಿವರು, ಯೋಜನಾ ಆಯೋಗದ ಉಪಾಧ್ಯಕ್ಷ, ಮಾಜಿ ಪ್ರಧಾನಿಗಳು, ರಾಜ್ಯಸಭೆ-ಲೋಕಸಬೆ ವಿಪಕ್ಷ ನಾಯಕರು, ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳು ಪ್ರತಿಫಲಿಸುವ ಕೆಂಪು ದೀಪವನ್ನು ಬಳಸಬಹುದಿತ್ತು.

ಮುಖ್ಯ ಚುನಾವಣೆ ಆಯುಕ್ತ, ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ, ರಾಜ್ಯಸಭೆ ಡೆಪ್ಯುಟಿ ಚೇರ್ ಮನ್, ಲೋಕಸಭೆ ಡೆಪ್ಯುಟಿ ಸ್ಪೀಕರ್, ರಾಜ್ಯ ಖಾತೆ ಸಚಿವರು, ಯೋಜನಾ ಆಯೋಗದ ಸದಸ್ಯರು, ಅಟಾರ್ನಿ ಜನರಲ್, ಸಂಪುಟ ಕಾರ್ಯದರ್ಶಿ, ಕೇಂದ್ರದ ಉಪ ಸಚಿವರು, ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಸಮನಾದ ಹುದ್ದೆಯಲ್ಲಿರುವವರು, ಕೇಂದ್ರ ಆಡಳಿತ ನ್ಯಾಯಮಂಡಳಿ ಅಧ್ಯಕ್ಷರು, ಅಲ್ಪಸಂಖ್ಯಾತರ ಆಯೋಗ ಹಾಗೂ ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷರು, ಯುಪಿಎಸ್ ಸಿ ಅಧ್ಯಕ್ಷರು, ಸಾಲಿಸಿಟರ್ ಜನರಲ್ ಕೆಂಪು ದೀಪವನ್ನು ಬಳಸಬಹುದು. ಆದರೆ ಪ್ರತಿಫಲನ ಇರುವಂತಿಲ್ಲ.

-ಸದ್ಯಕ್ಕೆ ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಮುಖ್ಯನ್ಯಾಯಮೂರ್ತಿಗಳಿಗೆ ಬಣ್ಣದ ದೀಪದ ವಾಹನ ಬಳಸಲು ವಿನಾಯಿತಿ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The decision by the government to ban the use of red beacons on vehicles not only ends the famous, 'lal batti' culture, but will also help prevent its misuse. The traffic cops in Delhi have struggled to control the menace of its misuse.
Please Wait while comments are loading...