ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ನವಜಾತ ಮಗುವಿನ ಪ್ರಾಣ ಉಳಿಸಿದ ಭಾಗ್ಯ ನಿಮ್ಮದಾಗಲಿ

Google Oneindia Kannada News

ಇದೇನು ವಿಧಿಯ ಲೀಲೆಯೋ, ವಿಧಿಯ ಅಟ್ಟಹಾಸವೋ? ಭುವಿಗೆ ಆಗಮಿಸಿ, ಹುಟ್ಟಿಸಿದವರನ್ನು ಸಂತಸದ ಕಡಲಲ್ಲಿ ತೇಲಾಡಿಸುವುದು ಮಾತ್ರವಲ್ಲ, ತಾನೂ ಬದುಕಿ ಬಾಳಬೇಕಾದ ಕಂದಮ್ಮ, ಹುಟ್ಟು ಸಾವಿನ ಉಯ್ಯಾಲೆಯಲ್ಲಿ ತೂಗುತ್ತಿದೆ. ಆ ಮಗುವನ್ನು ಉಳಿಸಿಕೊಳ್ಳಲು ಲಕ್ಷ್ಮಿ ಮತ್ತು ಅವರ ಗಂಡ ತಮ್ಮ ಜೀವವನ್ನೇ ಪಣಕ್ಕೆ ಇಟ್ಟಿದ್ದಾರೆ.

ಈಗ ಈ ಮಗು ಬದುಕುಳಿಯಬೇಕಾದರೆ ದಾನಿಗಳ ಅಗತ್ಯವಿದೆ. ಅಲ್ಲದೆ, ಈ ದಾರುಣ ಕಥೆಯನ್ನು ಸ್ನೇಹಿತರು, ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಳ್ಳಬಹುದು. ದೇವರು ಯಾವ ದಿಕ್ಕಿನಿಂದ ಕಣ್ಣು ಬಿಡುತ್ತಾನೋ ಯಾರು ಬಲ್ಲರು? ಈ ಬಡ ಕುಟುಂಬದ ಸಂಕಟದ ಕಥೆಯನ್ನು ಮಗುವಿನ ತಾಯಿಯ ಮಾತಲ್ಲೇ ಕೇಳಿರಿ.

"ನನ್ನ ಮಗು ನನ್ನ ಮಡಿಲಿಗೆ ಬಂದಾಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಬಗೆಯ ಧನ್ಯತೆಯ ಭಾವ ನನ್ನಲ್ಲಿ ಮೂಡಿತು. ಇಷ್ಟು ದಿನ ಅನುಭವಿಸಿದ ನೋವುಗಳೆಲ್ಲಾ ಸಂತೋಷದ ಕ್ಷಣಗಳಾಗಿ ಮರಳಿದ್ದವು. ನನ್ನ ಬದುಕಿನ ಆಶಾಕಿರಣ ಈ ಮಗು ಎನ್ನುವ ಸಂತೋಷದ ಚಿಲುಮೆ ನನ್ನಲ್ಲಿ ಮೂಡಿತ್ತು..." ಎನ್ನುತ್ತಾರೆ ಲಕ್ಷ್ಮಿ. ಮಗುವಿನ ಜನನದಿಂದ ಸಂತೋಷ ಪಟ್ಟ ಲಕ್ಷ್ಮಿ ಇದೀಗ ಅದೇ ಮಗುವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ.

ಲಕ್ಷ್ಮಿಗೆ ಇದು ಚೊಚ್ಚಲ ಮಗು. ಆಕೆ ಮತ್ತು ಆಕೆಯ ಪತಿ ಮಗನನ್ನು ಸ್ವಾಗತಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸೆಲ್ ಫೋನ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿಯ ಗಂಡ ಇದೀಗ ಮಗುವನ್ನು ಉಳಿಸಿಕೊಳ್ಳಲು ತನ್ನ ಕೆಲಸದ ಸಮಯವನ್ನು ಹೆಚ್ಚಿಸಿಕೊಂಡಿದ್ದಾರೆ ಮತ್ತು ಒಂದೊಂದು ಹೆಚ್ಚುವರಿ ಪೈಸೆ ಕೂಡ ಅವರಿಗೆ ಅನಿವಾರ್ಯವಾಗಿದೆ.

ಲಕ್ಷ್ಮಿಯವರಿಗೆ ಅವಧಿಗೆ ಮುಂಚೆಯೇ ಹುಟ್ಟಿದ ಮಗುವಿಗೆ ಇದೀಗ ಅಧಿಕ ಆರೈಕೆ ಹಾಗೂ ಚಿಕಿತ್ಸೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿಯೇ ಆಕೆಯ ಪತಿಯು ಇನ್ನಷ್ಟು ಹಣವನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚುವರಿ ಹಣವನ್ನು ಹೊಂದಿಸಲು ಧಾರ್ಮಿಕ ಕೆಲಸವನ್ನು ಕೈಗೊಂಡಿದ್ದಾರೆ. ರಾತ್ರಿ ಹಗಲು ಎನ್ನದೆ ದುಡಿಯುತ್ತಿದ್ದಾರೆ. ಮಗುವಿನ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಪೂರೈಸಲು ಮುಂದಾಗಿದ್ದಾರೆ.

"ನನ್ನ ಪತಿ ಮಗುವಿನ ಆಗಮನಕ್ಕೆ ಬಹಳಷ್ಟು ಸಿದ್ಧತೆ ಹಾಗೂ ಸಂತೋಷದಿಂದ ಇದ್ದರು. ಆದರೆ ವಿಧಿ ನಮ್ಮ ಸಂತೋಷಕ್ಕೆ ಕಲ್ಲು ಹಾಕಿದೆ. ಅಕಾಲಿಕವಾಗಿ ಜನಿಸಿದ ನಮ್ಮ ಮಗುವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಿದೆ. ನಮ್ಮ ಆದಾಯವು ತೃಪ್ತಿಕರವಾಗಿಲ್ಲದೆ ಇರುವುದರಿಂದ, ಪತಿಯು ಸಾಕಷ್ಟು ಕಷ್ಟಪಡುತ್ತಿದ್ದಾರೆ. ನಮ್ಮ ಜೀವನದ ಸಂತೋಷವಾದ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ" ಎನ್ನುತ್ತಾರೆ ಲಕ್ಷ್ಮಿ.

"ಮಗು ಹುಟ್ಟಿದ ನಂತರ ನನ್ನ ಕೈಗೆ ಒಮ್ಮೆ ಕೊಟ್ಟಿದ್ದರು. ಆಗ ಸಂತೋಷದಿಂದ ನಾನು ಮಗುವನ್ನು ತಬ್ಬಿಕೊಂಡೆ. ಆದರೆ ಮರುಕ್ಷಣಕ್ಕೆ ಮಗುವು ಅಕಾಲಿಕ ಜನನದಿಂದಾಗಿ ಉಸಿರಾಟದ ತೊಂದರೆ ಹಾಗೂ ಅಕಾಲಿಕ ಜನನದ ದೋಷದಿಂದ ಬಳಲುತ್ತಿದೆ. ಅದನ್ನು ವೆಂಟಿಲೇಟರ್ ಅಲ್ಲಿ ಇರಿಸಬೇಕು ಎಂದು ವೈದ್ಯರು ಕರೆದೊಯ್ದರು... ನನ್ನ ಮಗು ಅಮ್ಮನ ಪ್ರೀತಿಯಿಂದ ದೂರವಾಗಿ ವೆಂಟಿಲೇಟರ್ ಅಲ್ಲಿ ಇರುವುದು ನೋಡಲಾಗುತ್ತಿಲ್ಲ" ಎಂದು ಕಂಬನಿ ಇಡುತ್ತಿದ್ದಾರೆ ಲಕ್ಷ್ಮಿ.

ಆ ಪುಟಾಣಿ ಕಂದಮ್ಮ ಎನ್‍ಐಸಿಯು ಅಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇದೀಗ ಅವರ ಕುಟುಂಬವು ಮಗುವಿನ ಚಿಕಿತ್ಸೆಗಾಗಿ ಪ್ರತಿದಿನ 25,000 ರೂಪಾಯಿಯನ್ನು ಭರಿಸಬೇಕಿದೆ. ಲಕ್ಷ್ಮಿ ಹಾಗೂ ಅವರ ಪತಿ ಮಗುವಿನ ಚಿಕಿತ್ಸೆಗಾಗಿ ಈಗಾಗಲೇ 12 ಲಕ್ಷ ರೂಪಾಯಿಯನ್ನು ಭರಿಸಿದ್ದಾರೆ.

ಮಗುವಿನ ಚಿಕಿತ್ಸೆಗಾಗಿ ನಮ್ಮಲ್ಲಿರುವ ಹಣವನ್ನು ಭರಿಸಿದ್ದೇವೆ. ಆದರೆ ಮಗುವಿನ ಚಿಕಿತ್ಸೆ ಇನ್ನು ಮುಂದುವರಿಯಬೇಕು ಎಂದಾದರೆ ಇನ್ನಷ್ಟು ಹಣವನ್ನು ಭರಿಸಬೇಕಿದೆ. ಸಮಯಕ್ಕೆ ಸರಿಯಾಗಿ ಹಣವನ್ನು ಭರಿಸದಿದ್ದರೆ ಮಗುವಿನ ಚಿಕಿತ್ಸೆ ನಿಂತು ಹೋಗುವುದು ಎಂದು ದುಃಖದಿಂದ ಕಂಬನಿ ಮಿಡಿಯುತ್ತಾರೆ ಲಕ್ಷ್ಮಿ.

ಅನುಕ್ಷಣ ಕಂಬನಿ ಸುರಿಸುತ್ತಿರುವ ಈ ಕುಟುಂಬಕ್ಕೆ ಇನ್ನೂ 8 ಲಕ್ಷ ರೂಪಾಯಿಯ ಅಗತ್ಯವಿದೆ. ಅಷ್ಟೊಂದು ಹಣವನ್ನು ಭರಿಸಲು ಸಾಧ್ಯವಾಗದ ಕಾರಣ ಇದೀಗ ದಂಪತಿಗಳು ನಿಮ್ಮಲ್ಲಿ ಸಹಾಯ ಯಾಚಿಸುತ್ತಿದ್ದಾರೆ. ನಿಮ್ಮ ಒಂದು ಸಹಾಯ ಅವರ ಜೀವನದ ಬೆಳಕನ್ನು ಬೆಳಗಿಸಲಿದೆ. ಒಂದು ಮಗುವಿನ ಪ್ರಾಣವನ್ನು ಉಳಿಸಿದ ಭಾಗ್ಯ ನಿಮ್ಮದಾಗಲಿದೆ.

ಮಾನವೀಯತೆಗೆ ಸಹಾಯ ಮಾಡಲು ಮತ್ತು ಸೇವೆ ಸಲ್ಲಿಸಲು ನಮ್ಮೆಲ್ಲರ ಕೈ ಜೋಡಿಸಬೇಕು. ನಮ್ಮಿಂದಾಗುವ ಒಂದು ಅಲ್ಪ ಸಹಾಯವು ಒಂದು ಮುಗ್ಧ ಮಗುವಿನ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನುಂಟುಮಾಡುವುದು. ನೀವು ಈ ಪುಟ್ಟ ಮಗುವನ್ನು ಉಳಿಸಲು ಸಹಾಯ ಮಾಡಲು ಸಹಾಯ ನಿಧಿಗೆ ಹಣವನ್ನು ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X