Get Updates
Get notified of breaking news, exclusive insights, and must-see stories!

Ladakh-Kargil polls: ಲಡಾಖ್‌ನಲ್ಲಿ 'ಇಂಡಿಯಾ'ಗೆ ಜಯ- ಕರ್ನಾಟಕ ಚುನಾವಣೆ ಬಳಿಕ ಬಿಜೆಪಿಗೆ 'ಕೈ'ಕೊಡುತ್ತಲೇ ಇದೆ ಅದೃಷ್ಟ

ಶ್ರೀನಗರ, ಅಕ್ಟೋಬರ್‌ 09: ಲಡಾಕ್‌-ಕಾರ್ಗಿಲ್‌ ಕೌನ್ಸಿಲ್‌ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. 26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫಿರೆನ್ಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಕೂಟವು 22 ಸ್ಥಾನಗಳಲ್ಲಿ ಜಯಬೇರಿ ಬಾರಿಸಿದ್ದು, ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲು ಸಾಧಿಸಿದೆ. ಕರ್ನಾಟಕ ಚುನಾವಣೆ ಬಳಿಕ ಬಿಜೆಪಿ ಇದು ಎರಡನೇ ಮುಖಭಂಗವಾಗಿದೆ.

ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ.

Ladakh-Kargil polls: NC-Congress combine wins council elections- Is it Wake Up Call For BJP?

ನ್ಯಾಷನಲ್ ಕಾನ್ಫರೆನ್ಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದೆ. ಮೂರು ಸ್ಥಾನಗಳಲ್ಲಿ ಪಕ್ಷೇತರರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನೂ ಎರಡು ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪಿಡಿಪಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಎನ್‌ಸಿಯಿಂದ 17 ಮತ್ತು ಕಾಂಗ್ರೆಸ್‌ನ 22 ಸೇರಿದಂತೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಎನ್‌ಸಿಪಿ-ಕಾಂಗ್ರೆಸ್ ಎರಡು ಪ್ರಬಲ ಧಾರ್ಮಿಕ ಸಂಸ್ಥೆಗಳ ಬೆಂಬಲವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ. ಜಮಿಯತ್ ಉಲೇಮಾ ಕಾರ್ಗಿಲ್ ಮತ್ತು ಇಮಾಮ್ ಖುಮೈನಿ ಸ್ಮಾರಕ ಟ್ರಸ್ಟ್‌ಗಳು 'ಇಂಡಿಯಾ' ಮೈತ್ರಿಕೂಟವನ್ನು ಬೆಂಬಲಿಸಿದ್ದವು. ಎರಡು ಧಾರ್ಮಿಕ ಸಂಸ್ಥೆಗಳ ಧರ್ಮಗುರುಗಳು ಬಿಜೆಪಿ ವಿರುದ್ಧ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.

ಜನರ ತೀರ್ಪಿಗೆ ಪ್ರತಿಕ್ರಿಯಿಸಿದ ನ್ಯಾಷನಲ್‌ ಕಾನ್ಫಿರೆನ್ಸ್‌ ನಾಯಕ ಒಮರ್ ಅಬ್ದುಲ್ಲಾ, 'ನ್ಯಾಷನಲ್‌ ಕಾನ್ಫಿರೆನ್ಸ್‌ -ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ' ಎಂದು ಹೇಳಿದ್ದಾರೆ.

'ಈ ಫಲಿತಾಂಶವು ಪ್ರಜಾಸತ್ತಾತ್ಮಕವಾಗಿದೆ. ಅಸಾಂವಿಧಾನಿಕವಾಗಿ ಜನರ ಒಪ್ಪಿಗೆಯಿಲ್ಲದೆ ರಾಜ್ಯವನ್ನು ವಿಭಜಿಸಿದ ಎಲ್ಲಾ ಶಕ್ತಿಗಳು ಮತ್ತು ಪಕ್ಷಗಳಿಗೆ ಇದು ಸಂದೇಶವನ್ನು ಕಳುಹಿಸಿದೆ. ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಈ ವಿಜಯವು ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಿದೆ ಝನ್ಸ್ಕಾರ್, ಕಾರ್ಗಿಲ್ ಮತ್ತು ಡ್ರಾಸ್ ಜನರಿಗೆ ಸೇರಿದೆ. ಚುನಾಯಿತ ಎಲ್ಲಾ ಕೌನ್ಸಿಲರ್‌ಗಳಿಗೆ ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜನರ ಸೇವೆಗಾಗಿ ಅವರ ಸಮರ್ಪಣೆಯನ್ನು ಗೌರವಿಸುತ್ತೇವೆ. ಅವಿರತ ಬೆಂಬಲಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ' ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಚುನಾವಣೆ ಬಳಿಕ ಲಡಾಕ್‌ ಸೋಲು ಬಿಜೆಪಿಗೆ ಹಿನ್ನಡೆ ಉಂಟುಮಾಡಿದೆ. ಡಿಸೆಂಬರ್‌ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಸಮೀಕ್ಷೆ ಪ್ರಕಾರ, ಈ ರಾಜ್ಯಗಳಲ್ಲೂ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+