ಎಎಪಿಯಿಂದ 97 ಕೋಟಿ ರೂ. ಜಾಹೀರಾತು ಮೊತ್ತ ವಸೂಲಿಗೆ ಎಲ್-ಜಿ ವಿಕೆ ಸಕ್ಸೇನಾ ಸೂಚನೆ
ನವದೆಹಲಿ, ಡಿಸೆಂಬರ್ 20: ನವದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಸರ್ಕಾರಿ ಜಾಹೀರಾತುಗಳಾಗಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ 97 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮಂಗಳವಾರ ಸೂಚಿಸಿದ್ದಾರೆ.
ಆಡಳಿತ ಪಕ್ಷವು ಸುಪ್ರೀಂ ಕೋರ್ಟ್‌ನ ಆದೇಶ, 2016ರ ದೆಹಲಿ ಹೈಕೋರ್ಟ್ ಆದೇಶ ಮತ್ತು 2016ರ ಸರ್ಕಾರಿ ಜಾಹೀರಾತಿನ (CCRGA) ವಿಷಯ ನಿಯಂತ್ರಣ ಸಮಿತಿಯ ಆದೇಶವನ್ನು ಉಲ್ಲಂಘಿಸಿದೆ ಎಂದು ಎಲ್-ಜಿ ಸಕ್ಸೇನಾ ಉಲ್ಲೇಖಿಸಿದ್ದಾರೆ.
ಸರ್ಕಾರವು ಪ್ರಕಟಿಸಿದ ನಿರ್ದಿಷ್ಟ ಜಾಹೀರಾತುಗಳಲ್ಲಿ ಸರ್ಕಾರಿ ಜಾಹೀರಾತಿನ (CCRGA) ವಿಷಯ ನಿಯಂತ್ರಣ ಸಮಿತಿಯ ಆದೇಶ 2016ರಲ್ಲಿ ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆಯನ್ನು ಗುರುತಿಸಲಾಗಿದೆ. ಈ ಹಿನ್ನೆಲೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯಕ್ಕೆ (ಡಿಐಪಿ) ಅಂತಹ ಜಾಹೀರಾತುಗಳಿಗೆ ಖರ್ಚು ಮಾಡಿದ ಮೊತ್ತವನ್ನು ಲೆಕ್ಕಹಾಕಲು ಮತ್ತು ಆಡಳಿತಾರೂಢ ಎಎಪಿಯಿಂದ ವಸೂಲಿ ಮಾಡುವಂತೆ ಸೂಚಿಸಲಾಗಿದೆ.

97.14 ಕೋಟಿ ರೂಪಾಯಿ ಜಾಹೀರಾತಿಗಾಗಿ ಖರ್ಚು
ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು 97,14,69,137 ರೂಪಾಯಿಗಳನ್ನು "ಅನುರೂಪವಲ್ಲದ ಜಾಹೀರಾತುಗಳ" ಖಾತೆಯಿಂದ ಖರ್ಚು ಮಾಡಲಾಗಿದೆ ಅಥವಾ ಬುಕ್ ಮಾಡಲಾಗಿದೆ ಎಂದು ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯವು ಪ್ರಮಾಣೀಕರಿಸಿದೆ. "ಇದರಲ್ಲಿ, 42.26 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಪಾವತಿಗಳನ್ನು ಡಿಐಪಿ ಈಗಾಗಲೇ ಬಿಡುಗಡೆ ಮಾಡಿದ್ದರೆ, ಪ್ರಕಟಿಸಿದ ಜಾಹೀರಾತುಗಳಿಗಾಗಿ 54.87 ಕೋಟಿ ರೂಪಾಯಿಗಳ ವಿತರಣೆ ಇನ್ನೂ ಬಾಕಿ ಇದೆ," ಎಂದು ಮೂಲವೊಂದು ತಿಳಿಸಿದೆ.

ಎಎಪಿಯಿಂದ ಜಾಹೀರಾತು ಮೊತ್ತ ವಸೂಲಿಗೆ ನಿರ್ದೇಶನ
2017ರಲ್ಲಿ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯವು ಎಎಪಿಗೆ 42.26 ಕೋಟಿ ರೂಪಾಯಿಗಳನ್ನು ತಕ್ಷಣವೇ ರಾಜ್ಯದ ಬೊಕ್ಕಸಕ್ಕೆ ಪಾವತಿಸಲು ಮತ್ತು 30 ದಿನಗಳಲ್ಲಿ ಸಂಬಂಧಿಸಿದ ಜಾಹೀರಾತು ಏಜೆನ್ಸಿಗಳು ಅಥವಾ ಪ್ರಕಟಣೆಗಳಿಗೆ ಬಾಕಿ ಉಳಿದಿರುವ 54.87 ಕೋಟಿ ರೂಪಾಯಿಗಳನ್ನು ನೇರವಾಗಿ ಪಾವತಿಸಲು ನಿರ್ದೇಶಿಸಿತ್ತು. ಆದಾಗ್ಯೂ, 5 ವರ್ಷಗಳ ನಂತರವೂ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ ಹೊರಡಿಸಿದ ಆದೇಶವನ್ನು ಎಎಪಿ ಪಾಲಿಸಿಲ್ಲ.

ಶಬ್ದಾರ್ಥ್‌ನ ಹಣಕಾಸು ಲೆಕ್ಕಪರಿಶೋಧನೆ ಬಗ್ಗೆ ವಿಕೆ ಸಕ್ಸೇನಾ ಹೇಳಿದ್ದೇನು?
ನವದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಚಿಸಿರುವ ಸಾರ್ವಜನಿಕ ಏಜೆನ್ಸಿ ಶಬ್ದಾರ್ಥ್‌ನ ಹಣಕಾಸು ಲೆಕ್ಕಪರಿಶೋಧನೆಗೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ತಿಳಿಸಿದ್ದಾರೆ. ಶಬ್ದಾರ್ಥ್ ಎಂಬ ಸಾರ್ವಜನಿಕ ಏಜೆನ್ಸಿಯಲ್ಲಿ ಒಟ್ಟು ಮಂಜೂರಾದ 38 ಅಧಿಕಾರಿಗಳ ಪೈಕಿ ಪ್ರಸ್ತುತ 35 ಅಧಿಕಾರಿಗಳಿಂದ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಸಲಿಗೆ ಈ ಏಜೆನ್ಸಿಯನ್ನು ಖಾಸಗಿ ವ್ಯಕ್ತಿಗಳ ಬದಲಿಗೆ ಸರ್ಕಾರಿ ನೌಕರರು ನಿರ್ವಹಿಸಬೇಕಿತ್ತು.

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾರಿಗೆ ಎಎಪಿ ತಿರುಗೇಟು
ಲೆಫ್ಟಿನೆಂಟ್ ಗವರ್ನರ್ ಇದೀಗ ಶಬ್ದಾರ್ಥವನ್ನು ಸರ್ಕಾರಿ ಅಧಿಕಾರಿಗಳು ನಿರ್ವಹಿಸುತ್ತಾರೆಯೇ ಹೊರತು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಲ್ಲ ಎಂದು ಆದೇಶಿಸಿದ್ದಾರೆ. ಎಲ್-ಜಿ ಹೊರಡಿಸಿದ ಆದೇಶಗಳಿಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, "ಎಲ್-ಜಿಗೆ ಅಂತಹ ಆದೇಶಗಳನ್ನು ನೀಡುವ ಅಧಿಕಾರವಿಲ್ಲ" ಎಂದು ಹೇಳಿದರು.
"ದೆಹಲಿ ಸರ್ಕಾರದ ಜಾಹೀರಾತುಗಳನ್ನು ದೆಹಲಿಯ ಹೊರಗೆ ಏಕೆ ಪ್ರಕಟಿಸಲಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಕಳೆದ ಒಂದು ತಿಂಗಳಿನಿಂದ ಪತ್ರಿಕೆಗಳನ್ನು ಹೊರತರಲಾಗಿದೆ. ಬಿಜೆಪಿಯ ಎಲ್-ಜಿ ನಕಲಿ ಹೆಸರುಗಳ ನೆಪದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಬಿಜೆಪಿ ವಕ್ತಾರರೊಬ್ಬರ ವಾದವನ್ನು ತಮ್ಮ ಪತ್ರದಲ್ಲಿ ನೀಡಿದ್ದಾರೆ ಎಂದು ಆರೋಪಿಸಿದರು. "ಎಲ್‌ಜಿ ಅಧಿಕಾರಿಯ ಪತ್ರವು ಮೂರ್ಖತನದಿಂದ ತುಂಬಿದೆ. ಅವರ ಆದೇಶಕ್ಕೆ ಕಾನೂನಾತ್ಮಕವಾಗಿ ಯಾವುದೇ ಬೆಲೆ ಇಲ್ಲ. ನಾವು ಆ ಆದೇಶವನ್ನು ನಿರ್ಲಕ್ಷಿಸಿದ್ದೇವೆ ಎಂದು ಭಾರದ್ವಾಜ್ ಹೇಳಿದರು.












Click it and Unblock the Notifications