ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯ್ನಾಡಲ್ಲಿ ಮೋದಿ ಹೆಮ್ಮೆಯಿಂದ ಹೇಳಿದ ಮಾತೇನು?

ಎರಡು ದಿನಗಳ ಕಾಲ ತಮ್ಮ ತಾಯ್ನಾಡಾದ ಗುಜರಾತಿನಲ್ಲಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ ಗುಜರಾತಿನ ಜನರ ಮನೋಬಲವನ್ನು ಕೊಂಡಾಡಿದರು.

|
Google Oneindia Kannada News

ಕಛ್, ಮೇ 23: ಕಛ್ ಗೆ ನನ್ನ ಹೃದಯದಲ್ಲಿಹೆಮ್ಮೆಯ ಸ್ಥಾನವಿದೆ. 2001 ರ ಭೂಕಂಪದಿಂದಾಗಿ ಸಂಪೂರ್ಣ ನಾಶವಾಗಿದ್ದ ಕಛ್ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿ ಹೆಸರು ಮಾಡಿದೆ. ಇಲ್ಲಿನ ಜನರ ಛಲ ಮತ್ತು ಧೈರ್ಯದಿಂದಲೇ ಇದು ಸಾಧ್ಯವಾಗಿರುವುದು ಎಂದು ಪ್ರಧಾನಿ ನರೆಂದ್ರ ಮೋದಿ ಕಛ್ ಜನರ ಕುರಿತು ಅಭಿಮಾನ ಮತ್ತು ಮೆಚ್ಚುಗೆಯ ಮಾತುಗಳನ್ನಾಡಿದರು.

ಎರಡು ದಿನಗಳ ಕಾಲ ತಮ್ಮ ತಾಯ್ನಾಡಾದ ಗುಜರಾತ್ ಪ್ರವಾಸದಲ್ಲಿರುವ ಮೋದಿ, ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿ, ಗುಜರಾತಿನ ಜನರ ಮನೋಬಲವನ್ನು ಕೊಂಡಾಡಿದರು. ನಿನ್ನೆ (ಮೇ 22) ಇಲ್ಲಿನ ಕಂಡ್ಲಾ ಮತ್ತು ಬಚೋ ಬಂದರುಗಳನ್ನು ಉದ್ಘಾಟಿಸಿದ ಅವರು, ಬಂದರುಗಳು ಪ್ರತಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಮೂಲಸೌಕರ್ಯ ಅಭಿವೃದ್ಧಿ ಆಡಳಿತದಲ್ಲಿ ಪಾರದರ್ಶಕತೆ ಈ ಎಲ್ಲವೂ ಒಂದು ಸರ್ಕಾರದ ಆಧಾರ ಸ್ತಂಬಗಳು ಎಂಮದಿರುವ ಮೋದಿ, ಕಛ್ ಜನರು ನನಗೆ ತೋರಿದ ಅಭಿಮಾನಕ್ಕೆ ಚಿರಋಣಿ ಎಂದರು.[ದೇಶದ ಎಲ್ಲ ಹಳ್ಳಿಗಳಲ್ಲೂ ಮುಂದಿನ ವರ್ಷದ ಹೊತ್ತಿಗೆ ವಿದ್ಯುತ್ ಸಂಪರ್ಕ: ಮೋದಿ]

ಅತ್ತ ಮೋದಿ ದೇಶದ ಆಧಾರ ಸ್ತಂಬದ ಬಗ್ಗೆ ಮಾತನಾಡಿ, ದೇಶದ ಅಭಿವೃದ್ಧಿಯ ಕುರಿತು ಚಿಂತಿಸುತ್ತಿದ್ದರೆ ಇತ್ತ ಕಾಶ್ಮೀರದಲ್ಲಿ ದೇಶದ ಭವಿಷ್ಯ ಎಂದೇ ಕರೆಸಿಕೊಳ್ಳುವ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಕಲ್ಲು ಹಿಡಿದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿನಗರದಲ್ಲಿ ಪ್ರಧಾನಿ ಮೋದಿ

ಗಾಂಧಿನಗರದಲ್ಲಿ ಪ್ರಧಾನಿ ಮೋದಿ

[ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿ ಮೋದಿ ಸರಕಾರದ ತ್ರಿವಿಕ್ರಮ ಹೆಜ್ಜೆ][ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿ ಮೋದಿ ಸರಕಾರದ ತ್ರಿವಿಕ್ರಮ ಹೆಜ್ಜೆ]

ಹತ್ರ ಬಂದ್ರೆ ಹುಷಾರ್!

ಹತ್ರ ಬಂದ್ರೆ ಹುಷಾರ್!

[ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62][ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62]

ನಾಲ್ಗೊಂಡದಲ್ಲಿ ಅಮಿತ್ ಶಾ

ನಾಲ್ಗೊಂಡದಲ್ಲಿ ಅಮಿತ್ ಶಾ

ತೆಲಂಗಾಣದ ನಾಲ್ಗೊಂಡದ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮನೆ ಮನೆಯ ಪ್ರಚಾರದ ಸಮಯದಲ್ಲಿ ತೆರಟ್ಪಳ್ಳಿಯ ದಲಿತ ಕಾಲೊನಿಯಲ್ಲಿಕಂಡಿದ್ದು ಹೀಗೆ.

ರೈತರಿಗಾಗಿ ಹೋರಾಟ

ರೈತರಿಗಾಗಿ ಹೋರಾಟ

ಸ್ವಾಭಿಮಾನಿ ಶೆತ್ಕಾರಿ ಸಂಘಟನೆಯ ನಾಯಕ ರಾಜು ಶೆಟ್ಟಿ ರೈತರ ಪರ ಹೋರಾಟ ಆರಂಭಿಸಿದ್ದು, ನಿನ್ನೆ ಮಹಾರಾಷ್ಟ್ರದ ಪುಣೆಯಿಂದ ಮುಂಬೈ ವರೆಗೆ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಅವರು ಕಂಡುಬಂದಿದ್ದು ಹೀಗೆ.

ಮ್ಯಾಂಚೆಸ್ಟರ್ ದುರಂತ

ಮ್ಯಾಂಚೆಸ್ಟರ್ ದುರಂತ

ಇಂಗ್ಲೆಂಡಿನ ಮ್ಯಾಂಚೆಸ್ಟರ್ ಅರೇನಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಅಳಿದುಳಿದಿರುವವವರ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರು. ಭಾರತೀಯ ಕಾಲಮಾನದಂತೆ ಇಂದು (ಮೇ 23) ಬೆಳಗ್ಗೆ 3:03 ಕ್ಕೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 19 ಜನ ಅಸುನೀಗಿದ್ದರು.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ಅಂಗಳದಲ್ಲೂ ಪ್ರಸಿದ್ಧಿ ಪಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಬೇವಾಚ್ ಎಂಬ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿರುವ ಪ್ರಿಯಾಂಕ ಚೋಪ್ರಾ ಆ ಚಿತ್ರದ ದೃಶ್ಯವೊಂದರಲ್ಲಿ ಕಂಡುಬಂದಿದ್ದು ಹೀಗೆ.

English summary
utch has a very special place in my heart: PM ModiaKutch has a very special place in my heart. It is blessed with wonderful people and a remarkable spirit of resilience, Prime Minister Naredra Modi told In Kutch, Gujarat yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X