ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 8: ಯುನೆಸ್ಕೋದ ಜಾಗತಿಕ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ತೀರ್ಥಯಾತ್ರಿಗಳ ಪ್ರಸಿದ್ಧ ಕುಂಭಮೇಳ ಸೇರಿದೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾಸಿಕ್ ಮಹಾಕುಂಭಮೇಳದಲ್ಲಿ ಭಕ್ತರ ಪುಣ್ಯಸ್ನಾನ

ಯುನೆಸ್ಕೋ ಪಟ್ಟಿಗೆ ಕುಂಭಮೇಳ ಸೇರಿರುವುದು ಭಾರತಕ್ಕೆ ಹೆಮ್ಮೆ ಹಾಗೂ ಗೌರವದ ವಿಷಯ ಎಂದು ನರೇಂದ್ರ ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಉತ್ಸವವಾದ ಕುಂಭಮೇಳ ಭಾರತದ ನಾಲ್ಕು ಕಡೆಗಳಲ್ಲಿ ನಡೆಯುತ್ತದೆ.

Kumbh Mela on UNESCO list is matter of pride: PM Modi

ಹರಿದ್ವಾರ ಹಾಗೂ ಅಲಹಾಬಾದ್ ನ ಗಂಗಾ ತೀರದಲ್ಲಿ ಹಾಗೂ ಉಜ್ಜಯನಿಯ ಕ್ಷಿಪ್ರ ನದಿ ಹಾಗೂ ನಾಸಿಕದ ಗೋದಾವರಿ ನದಿಯ ತೀರದಲ್ಲಿ ನಡೆಯುತ್ತದೆ. ಈ ಮಹಾಮೇಳಕ್ಕೆ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಆಗಮಿಸುತ್ತಿದ್ದಾರೆ.

ಇದೀಗ ಕುಂಭಮೇಳ ಯುನೆಸ್ಕೋದ ಜಾಗತಿಕ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿರುವುದು ಜನರಲ್ಲಿ ಸಂತೋಷವನ್ನುಂಟು ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A day after the Kumbh Mela mass Hindu pilgrimage was inscribed on Unesco's Representative List of Intangible Cultural Heritage of Humanity, Prime Minister Narendra Modi on Friday described it as a matter of immense joy and pride for the country

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ