ಇಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಕುಲ್ಗಾಮ, ಜೂನ್ 25: ಜಮ್ಮು ಕಾಶ್ಮೀರದ ಕುಲ್ಗಾಂ ನಲ್ಲಿ ಭಾರತೀಯ ಸೇನೆಯು ಭಯೋತ್ಪಾದಕರ ವಿರುದ್ಧ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಹತ್ಯೆಮಾಡಲಾಗಿದೆ.
ಭಾರತೀಯ ಸೇನೆ, ಪೊಲೀಸರ ನಿದ್ದೆ ಕೆಡಿಸಿರುವ 22 ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಈ ಇಬ್ಬರು ಸಹ ಕುಖ್ಯಾತಿಗಳಿಸಿದವರಾಗಿದ್ದರು ಎಂದು ಸೇನೆ ತಿಳಿಸಿದೆ.
ಲಷ್ಕರ್ ಇ ತೊಯ್ಬಾ ಸಂಘಟನೆಯ ಶಾಕೂರ್ ದಾರ್ ಮತ್ತು ಹೈದರ್ ಎಂಬ ಇಬ್ಬರು ಉಗ್ರರನ್ನು ನಿನ್ನೆ(ಜೂನ್ 24) ನಡೆದ ಎನ್ ಕೌಂಟರ್ ದಾಳಿಯಲ್ಲಿ ಹೊಡೆದು ಹಾಕಲಾಗಿದೆ.

ಜೂನ್ 22 ರಂದು ಬೆಳಗ್ಗಿನ ಜಾವ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ದಾಳಿ ನಡೆಸಿದ್ದ ಭಾರತೀಯ ಸೇನೆ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಸಫಲವಾಗಿತ್ತು.
ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ಹಿಂಸಾಚಾರಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಟಿಣ ಹೆಜ್ಜೆಯನ್ನಿಡುತ್ತಿದೆ. ಕಾಶ್ಮೀರದಲ್ಲಿ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಮತ್ತು ಸೈನಿಕ ಔರಂಗಜೇಬ್ ಅಪಹರಣ ಮತ್ತು ಹತ್ಯೆಯ ನಂತರ ಭಾರತೀಯ ಸೇನೆ ಉಗ್ರರ ದಮನಕ್ಕೆ ಅವಿರತ ಹೋರಾಟ ನಡೆಸುತ್ತಿದೆ.












Click it and Unblock the Notifications