ಬೆಂಗಳೂರಿನಿಂದ ಶಬರಿಮಲೆಗೆ ರಾಜಹಂಸ ಬಸ್ ಸಂಚಾರ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ರಾಜಹಂಸ ಬಸ್ ಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ.

ಡಿಸೆಂಬರ್ 9ರಿಂದ ಈ ಹೊಸ ಸೇವೆ ಆರಂಭಗೊಳ್ಳಲಿದೆ. ಬೆಂಗಳೂರು-ಪಂಪಾ(ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಸಂಚಾರ ಮಾಡಲಿದೆ. ಪ್ರಯಾಣ ದರ ವಯಸ್ಕರಿಗೆ 825 ರೂ. ನಿಗದಿ ಮಾಡಲಾಗಿದೆ. ಹಬ್ಬದ ಸೀಸನ್ ನಲ್ಲಿ ಖಾಸಗಿ ಬಸ್ ದರ 2,000 ರು ತನಕ ಏರಿಕೆಯಾಗುತ್ತದೆ.[ಶಬರಿಮಲೈ ದರ್ಶನಕ್ಕೆ ಮಹಿಳೆಯರಿಗೆ ಕೇರಳ ಸರ್ಕಾರ ಅನುಮತಿ]

KSRTC Rajahamsa Service to Pampa Sabarimala

ಬೆಂಗಳೂರನ್ನು 1.30 PM ಗೆ ಬಿಡುವ ಬಸ್ ಮರುದಿನ ಪಂಪಾಗೆ 8.45 AM ಗೆ ಸೇರಲಿದೆ. ಪಂಪಾದಿಂಡ 5 PMಗೆ ಬಿಡುವ ಬಸ್ ಮರುದಿನ ಮಧ್ಯಾಹ್ನ ಬೆಂಗಳೂರು ಸೇರಲಿದೆ. ಈ ರಾಜಹಂಸ ಬಸ್ ಗೆ ಮುಂಗಡ ಬುಕ್ಕಿಂಗ್ ಹಲವಾರು ಕೌಂಟರ್ ಗಳಲ್ಲಿ ಲಭ್ಯವಿದೆ.[ಶಬರಿಮಲೆ ಯಾತ್ರೆ ಆರಂಭ, ಕರ್ನಾಟಕದ ಭಕ್ತರಿಗೆ ನೆರವು]

ಹೆಚ್ಚಿನ ಮಾಹಿತಿಯನ್ನು ಕೆಎಸ್ಸಾರ್ಟಿಸಿ ವೆಬ್ ಸೈಟ್ ನಲ್ಲಿ ಪಡೆಯಬಹುದು. ಬೆಂಗಳೂರಿನಿಂದ ಕೇರಳಕ್ಕೆ ರೈಲು ಮಾರ್ಗ: ಯಶವಂತಪುರ ಗರೀಬ್ ರಥ (12257/12258) ಏರಿ ಹೋಗಬಹುದು.
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka State Road Transport Corporation (KSRTC) has introduced Rajahamsa service between Bengaluru and Pampa (Sabarimala) from December 9. The two-month annual Mandalam-Makaravilakku pilgrimage season that began from November 14, the first day of the Malayalam month of Vrischikom.
Please Wait while comments are loading...