ಫೋರ್ಬ್ಸ್ ಭಾರತದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ರೈತನ ಮಗ, ಅವರ ಕಥೆ ಗೊತ್ತಾ?
ಬೆಂಗಳೂರು, ಅಕ್ಟೋಬರ್ 14: ಇತ್ತೀಚೆಗೆ ಪ್ರಕಟವಾದ ಫೋರ್ಬ್ಸ್ ಇಂಡಿಯಾದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ವ್ಯಾಪಾರಿ ಕುಟುಂಬದ ಹಿನ್ನೆಲೆಯ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಭಾರತದ ಅತಿ ದೊಡ್ಡ ಶ್ರೀಮಂತ ಎಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಆ ಪಟ್ಟಿಯಲ್ಲಿ ರೈತನ ಮಗನೊಬ್ಬನ ಹೆಸರಿದೆ ಅವರು ಯಾರೆಂದು ಇಲ್ಲಿ ತಿಳಿಯೋಣ.
ಅವರು ಬೇರೆ ಯಾರು ಅಲ್ಲ ಕೆಪಿ ರಾಮಸಾಮಿ. ಅವರು ಜವಳಿ ಮತ್ತು ಸಕ್ಕರೆ ತಯಾರಕ ಕೆಪಿಆರ್ ಮಿಲ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರು ಮತ್ತು ಫೋರ್ಬ್ಸ್ ಪಟ್ಟಿಯ ಹೊಸ ಸದಸ್ಯರಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿರುವ ಅವರು $2.3 ಬಿಲಿಯನ್ (9,143 ಕೋಟಿ) ನಿವ್ವಳ ಮೌಲ್ಯದೊಂದಿಗೆ ಜವಳಿ ಉದ್ಯಮಿ ಈಗ 100 ನೇ ಸ್ಥಾನದಲ್ಲಿದ್ದಾರೆ.

ಕೆಪಿ ರಾಮಸಾಮಿ ಯಾರು:
74 ವರ್ಷದ ಕೆ.ಪಿ.ರಾಮಸಾಮಿ ಕೃಷಿಕ ಕುಟುಂಬದಿಂದ ಬಂದವರು. ಅವರು ರೈತನ ಮಗ ಮತ್ತು ಅರ್ಧದಲ್ಲೇ ಕಾಲೇಜು ಬಿಟ್ಟವರು. ಅವರು ಭಾರತದ ಅತಿದೊಡ್ಡ ಬಟ್ಟೆ ರಫ್ತು ವ್ಯವಹಾರಗಳಲ್ಲಿ ಒಂದನ್ನು ಸ್ಥಾಪಿಸುವ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದಾರೆ. 1984 ರಲ್ಲಿ ಕೆಪಿಆರ್ ಮಿಲ್ ಅನ್ನು ಅವರು ಸ್ಥಾಪಿಸಿದ್ದಾರೆ.
ಕೆಪಿ ರಾಮಸಾಮಿ ಅವರು ತಮ್ಮ ಬಟ್ಟೆ ಕಂಪನಿಗೆ ಮಾತ್ರವೇ ಸೀಮಿತರಾಗದೆ 2013 ರಲ್ಲಿ ಸಕ್ಕರೆ ಉತ್ಪಾದನೆಯನ್ನು ಮಾಡತೊಡಗಿದರು. ಮಾತ್ರವಲ್ಲದೆ 2019 ರಲ್ಲಿ ಪುರುಷರ ಒಳ ಉಡುಪುಗಳ ಬ್ರಾಂಡ್ ಫಾಸೊ ಎಂಬ ಕಂಪೆನಿಯನ್ನು ಆರಂಭಿಸಿದ್ದಾರೆ. ಸಕ್ಕರೆ ಮತ್ತು ಎಥೆನಾಲ್ ಅನ್ನು ಉತ್ಪಾದಿಸುವುದರ ಜೊತೆಗೆ ಕೆಪಿಆರ್ ಮಿಲ್ ಹತ್ತಿ, ಪಾಲಿಯೆಸ್ಟರ್ ಮತ್ತು ಹೆಣೆದ ಬಟ್ಟೆಗಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ.
ಕೆಪಿಆರ್ ಮಿಲ್ ತಮಿಳುನಾಡಿನ ಕೊಯಮತ್ತೂರಿನಲ್ಲಿದೆ. ಕಂಪನಿಯು ರಾಮಸಾಮಿ ಮತ್ತು ಅವರ 2 ಸಹೋದರರ ಒಡೆತನದಲ್ಲಿದೆ. ಇದು 30,000 ಉದ್ಯೋಗಿಗಳನ್ನು ಹೊಂದಿದೆ ಅವರಲ್ಲಿ 90% ಮಹಿಳೆಯರು. ಫೋರ್ಬ್ಸ್ ವೆಬ್‌ಸೈಟ್‌ನ ಪ್ರಕಾರ, ಕೆಪಿಆರ್ ಮಿಲ್ ಪ್ರತಿ ವರ್ಷ 128 ಮಿಲಿಯನ್ ಬಟ್ಟೆಗಳನ್ನು ತಯಾರಿಸುತ್ತದೆ, ಕ್ರೀಡಾ ಉಡುಪುಗಳಿಂದ ಹಿಡಿದು ಸ್ಲೀಪ್‌ವೇರ್ ವರೆಗೆ, ಇವುಗಳನ್ನು ಎಚ್&ಎಂ, ಮಾರ್ಕ್ಸ್ & ಸ್ಪೆನ್ಸರ್ ಮತ್ತು ವಾಲ್‌ಮಾರ್ಟ್‌ನಂತಹ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ.












Click it and Unblock the Notifications