ನಾಯಿಯ ಮೇಲೆ ಅತ್ಯಾಚಾರ ಮಾಡಿದ ವಿಕೃತಕಾಮಿ
ಕೊಚ್ಚಿ, ಫೆಬ್ರವರಿ, 19: ಆಡಿನ ಮೇಲೆ ರೇಪ್, ಹಸುವಿನ ಕರುವಿನ ಮೇಲೆ ರೇಪ್ ಸಾಲಿಗೆ ಮತ್ತೊಂದು ಸೇರ್ಪಡೆ ಹೆಣ್ಣು ನಾಯಿಯ ಮೇಲೆ ರೇಪ್. ಹೌದು ಕೇರಳದಲ್ಲೊಬ್ಬ ವಿಕೃತ ಕಾಮಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ,
ಕೇರಳದಲ್ಲಿ ನಡೆದಿರುವ ವಿಲಕ್ಷಣ ಪ್ರಕರಣದ ವಿಡಿಯೋಗಳು ಮೊಬೈಲ್ ನಲ್ಲಿ ಹರಿದಾಡುತ್ತಿವೆ. 2 ನಿಮಿಷಗಳ ಕಾಲ ಇರುವ ಈ ವಿಡಿಯೋವೊಂದರಲ್ಲಿ ವ್ಯಕ್ತಿಯೋರ್ವ ನಾಯಿ ಮೇಲೆ ಅತ್ಯಾಚಾರವೆಸಗುತ್ತಿರುವುದು ಕಂಡು ಬಂದಿದೆ. ಅತ್ಯಾಚಾರ ಮಾಡಿರುವ ವ್ಯಕ್ತಿ ಮಲಯಾಳಂನಲ್ಲಿ ಮಾತನಾಡುತ್ತಿದ್ದು, ಅತ್ಯಾಚಾರವಾಗಿರುವ ನಿರ್ದಿಷ್ಟ ಪ್ರದೇಶದ ಕುರಿತು ಸ್ಪಷ್ಟನೆ ಇಲ್ಲ.[ಹಸುವಿನ ಕರು ಮೇಲೆಯೇಯೂ ಅತ್ಯಾಚಾರವೇ?]

ಈ ಪ್ರಕರಣವನ್ನು ಖಂಡಿಸಿರುವ ಪ್ರಾಣಿ ಹಕ್ಕುಗಳ ಸಂಘಟನೆ ಆರೋಪಿಯ ವಿರುದ್ಧ ಕಠಿಣ ಕ್ರಮಗೊಳ್ಳುವಂತೆ ಆಗ್ರಹಿಸಿದೆ. ಅಲ್ಲದೆ ವಿಡಿಯೋ ಸಂಬಂಧಿಸಿ ದೂರು ಸಹ ದಾಖಲು ಮಾಡಿದ್ದಾರೆ.[ಒಲ್ಲದ ಗರ್ಭ ತೆಗೆಸಿದ ಅತ್ಯಾಚಾರ ಸಂತ್ರಸ್ತೆಗೆ ನವಜೀವ!]
ಅತ್ಯಾಚಾರದ ವೇಳೆ ವ್ಯಕ್ತಿ ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಿದ್ದು, ಘಟನೆ ಸ್ಥಳವನ್ನು ನೋಡಿದರೆ ಕೇರಳ ರಾಜ್ಯದಲ್ಲಿಯೇ ನಡೆದಿದೆ ಎಂದು ತೀರ್ಮಾನಕ್ಕೆ ಬರಬಹುದು. ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಹಿಡಿದುಕೊಟ್ಟವರಿಗೆ ರು. 1 ಲಕ್ಷ ಬಹುಮಾನವನ್ನು ನೀಡಲಾಗುತ್ತದೆ ಪ್ರಾಣಿ ಹಕ್ಕುಗಳ ಸಂಘಟನೆ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಇದರಂತೆ ಸಂಘಟನೆ ದಾಖಲಿಸಿರುವ ದೂರಿನ ಅನ್ವಯ ಕೇರಳ ರಾಜ್ಯ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಡಿಜಿಪಿ ಟಿಪಿ ಸೇತುಕುಮಾರ್ ತಿಳಿಸಿದ್ದಾರೆ.












Click it and Unblock the Notifications