• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸಾರಾಂ ಬಾಪು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

|
Google Oneindia Kannada News

ನವದೆಹಲಿ, ಸೆ.01: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಅನಾರೋಗ್ಯ ಪೀಡಿತರಾಗಿರುವ ಅಸಾರಾಂ ಅವರು ಆಯುರ್ವೇದ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

ಬಾಲಕಿಯ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಅಪರಾಧ ಎನಿಸಿ ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು ಉತ್ತರಾಖಂಡ್ ಅಯುರ್ವೇದ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿದ್ದರು.

ಚಿತ್ರಗಳಲ್ಲಿ: ಅಸಾರಮ್ ಬಾಪು 10 ವಿವಾದಗಳುಚಿತ್ರಗಳಲ್ಲಿ: ಅಸಾರಮ್ ಬಾಪು 10 ವಿವಾದಗಳು

ಅಸಾರಾಂ ಬಾಪು ಅವರಿಗೆ ವಿಧಿಸಿರುವ ಶಿಕ್ಷೆ,ಅವರು ಎಸಗಿದ್ದು 'ಸಾಮಾನ್ಯ ಅಪರಾಧವಲ್ಲ' ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿ ರಾಮಸುಬ್ರಮಣಿಯನ್‌ ಹಾಗೂ ಬೇಲಾ ತ್ರಿವೇದಿ ಅವರಿದ್ದ ತ್ರಿಸದಸ್ಯ ಪೀಠವು ಆದೇಶದಲ್ಲಿ ತಿಳಿಸಿದೆ.

ಅಯುರ್ವೇದ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಮನವಿ

ಅಯುರ್ವೇದ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಮನವಿ

ಅರ್ಜಿದಾರರ ಪರವಾಗಿ ಮನವಿ ಸಲ್ಲಿಸಿದ ಹಿರಿಯ ವಕೀಲ ಆರ್‌ ಬಸಂತ್‌, ತಮ್ಮ ಕಕ್ಷೀದಾರರ ಆರೋಗ್ಯವು ತೀವ್ರ ಹದಗೆಟ್ಟಿದ್ದು ಅಯುರ್ವೇದ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಆರು ವಾರಗಳ ಅವಧಿಗೆ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಬೇಕು ಎಂದು ಕೋರಿದರು. ಆದರೆ, ಇದಕ್ಕೆ ಸಮ್ಮತಿಸದ ಪೀಠವು, ''ಸಮಗ್ರವಾಗಿ ಪರಿಗಣಿಸಿ ನೋಡುವುದಾದರೆ ಇದು (ಅಸಾರಾಂ ಬಾಪು ಎಸಗಿರುವ ಕೃತ್ಯ) ಸಾಮಾನ್ಯ ಅಪರಾಧವಲ್ಲ. ನಿಮಗೆ ಬೇಕಿರುವ ಎಲ್ಲ ಆಯುರ್ವೇದ ಚಿಕಿತ್ಸೆಯು ಜೈಲಿನಲ್ಲೇ ದೊರೆಯಲಿದೆ'' ಎಂದು ನ್ಯಾಯಾಲಯ ಹೇಳಿದೆ.

''ಜೈಲಿನಲ್ಲೇ ಅಸಾರಾಂ ಅವರಿಗೆ ಅಗತ್ಯವಾಗಿರುವ ಚಿಕಿತ್ಸೆಯನ್ನು ಒದಗಿಸಲು ವ್ಯವಸ್ಥೆ ಮಾಡಬಹುದು, ಈ ಮನವಿಯನ್ನು ಪುರಸ್ಕರಿಸುವುದು ಸರಿಯಲ್ಲ'' ಎಂದು ಹಿರಿಯ ವಕೀಲ ಮನೀಶ್ ಸಿಂಘ್ವಿ ವಾದಿಸಿದರು.

ಜೈಲಿನಲ್ಲಿರುವ ಅಸಾರಾಂ ಬಾಪು

ಜೈಲಿನಲ್ಲಿರುವ ಅಸಾರಾಂ ಬಾಪು

ಜೈಲಿನಲ್ಲಿರುವ ಅಸಾರಾಂ ಬಾಪು: 2013ರ ಅತ್ಯಾಚಾರ ಪ್ರಕರಣದಲ್ಲಿ ಏಪ್ರಿಲ್ 25,2018ರಂದು ಜೋಧಪುರದ ನ್ಯಾಯಾಲಯವು ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪ್ರಾಪ್ತ ಬಾಲಕಿಯ ಮೇಲೆ ಐದು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿದೆ.

ಇದಲ್ಲದೆ, ಅಸಾರಾಂ ಬಾಪು ಹಾಗೂ ಅವರ ಪುತ್ರ ನಾರಾಯಣ ಸಾಯಿ ವಿರುದ್ಧ ಸೂರತ್ ಮೂಲದ ಇಬ್ಬರು ಸೋದರಿಯರು ಸಲ್ಲಿಸಿರುವ ಪ್ರತ್ಯೇಕ ಅರ್ಜಿ ಇದೆ. ಅಸಾರಾಂ ಹಾಗೂ ನಾರಾಯಣ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ, ಬೆದರಿಸಿ ಒತ್ತೆಯಾಳಾಗಿ ಇಟ್ಟುಕೊಂಡ ಆರೋಪಗಳನ್ನು ಹೊರೆಸಲಾಗಿದೆ. ಗುಜರಾತಿನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅಸಾರಾಂ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಹತ್ತು ಹಲವು ಪ್ರಕರಣಗಳಿವೆ

ಹತ್ತು ಹಲವು ಪ್ರಕರಣಗಳಿವೆ

ಜನವರಿ 2013ರಲ್ಲಿ ಮಧ್ಯಪ್ರದೇಶದಲ್ಲಿ ಸುಮಾರು 700 ಕೋಟಿ ರು ಗೂ ಅಧಿಕ ಭೂ ಹಗರಣದಲ್ಲಿ ಅಸಾರಮ್ ಬಾಪು ಹೆಸರು ತಗುಲಿಕೊಂಡಿತು. ರತ್ಲಮ್ ನಲ್ಲಿರುವ ಆಶ್ರಮಕ್ಕೆ ಸೇರಿದ 200 ಎಕರೆ ಭೂಮಿ ವಿವಾದಕ್ಕೆ ಕಾರಣವಾಯಿತು. Serious Fraud Investigating Office (SFIO) ತಂಡ ಅಸಾರಾಮ್ ಬಾಪು ವಿರುದ್ಧ ಕ್ರಮಕ್ಕೆ ಸೂಚಿಸಿತ್ತು.

2013ರ ಫೆಬ್ರವರಿಯಲ್ಲಿ 24 ವರ್ಷದ ರಾಹುಲ್ ಪಚೌರಿ ಎಂಬ ಯುವಕ ಬಾಪು ಅವರ ಜಬಲ್ ಪುರದ ಆಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಬಾಪು ಆಶ್ರಮದಲ್ಲಿ ನನ್ನ ಮಗನಿಗೆ ವಿಷವಿಕ್ಕಿ ಕೊಲ್ಲಲಾಗಿದೆ ಎಂದು ರಾಹುಲ್ ತಂದೆ ಅರೋಪಿಸಿದರು. ಆಶ್ರಮದಲ್ಲಿ ನಕಲಿ ಔಷಧ ಮಾರಾಟ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ರಾಹುಲ್ ಅವರ ತಂದೆ ಹೇಳಿದ್ದ ಎನ್ನಲಾಗಿದೆ.

ಅಸಾರಾಂ ಬಾಪು ಬಗ್ಗೆ

ಅಸಾರಾಂ ಬಾಪು ಬಗ್ಗೆ

ಅಸಾರಾಂ ಬಾಪು ಬಗ್ಗೆ: ಏಪ್ರಿಲ್ 17, 1942ರಲ್ಲಿ ಅವಿಭಜಿತ ಭಾರತದ ನವಾಬ್ ಶಾ ಜಿಲ್ಲೆಯ ಬೆರಾನಿ ಗ್ರಾಮದಲ್ಲಿ(ಈಗ ಪಾಕಿಸ್ತಾನದಲ್ಲಿದೆ) ಜನಿಸಿದರು. ಮೆನ್ಹಗಿಬಾ ಹಾಗೂ ಉದ್ಯಮಿ ಥೊಮಲ್ ಸಿರುಮಲಾನಿ ದಂಪತಿಗೆ ಜನಿಸಿದ ಗಂಡು ಕೂಸಿಗೆ ಅಸುಮಲ್ ಎಂದು ಹೆಸರಿಡಲಾಗಿತ್ತು.

1958-59ರ ಅವಧಿಯಲ್ಲಿ ಮ್ಯಾಜಿಸ್ಟ್ರೇಟ್ ಅವರ ಕಚೇರಿ ಎದುರಿನ ಚಹಾ ಅಂಗಡಿಯಲ್ಲಿ ಎಂಜಲು ಲೋಟ ತೊಳೆದು ಬಂದ ಗ್ರಾಹಕರಿಗೆ ಟೀ ನೀಡುತ್ತಿದ್ದ ಅಸುಮಲ್ ಮುಂದೆ ದೇವಮಾನವನಾಗಿ ಬೆಳೆದ. ಅಸುಮಲ್ ಅಲಿಯಾಸ್ ಅಸಾರಾಮ್ ನಂತರ ಜ್ಞಾನೋದಯ ಪಡೆದು ಅಸಾರಾಂ ಬಾಪು ಆಗಿ ಬೆಳೆದರು. 200ಕ್ಕೂ ಅಧಿಕ ಆಶ್ರಮ, ಸಾವಿರಾರು ಕೋಟಿ ರು ಒಡೆಯ. ಸ್ವಯಂ ಘೋಷಿತ ದೇವ ಮಾನವನಾಗಿ ಹಲವಾರು ದೇಶಗಳಲ್ಲಿ ಭಕ್ತರನ್ನು ಹೊಂದಿರುವ ಬಾಪುಗೆ ಮೈತುಂಬಾ ಹಗರಣಗಳೇ ತುಂಬಿದೆ, ಶ್ರೀಮಂತ ಧಾರ್ಮಿಕ ಗುರುವಿನ ಎಲ್ಲಾ ಕುಕೃತ್ಯಗಳಲ್ಲಿ ಆತನ ಪುತ್ರ ನಾರಾಯಣ ಸಾಯಿ ಕೂಡಾ ಭಾಗಿಯಾಗಿ, ಜೈಲುವಾಸಿಯಾಗಿದ್ದಾರೆ.

English summary
Supreme Court on Tuesday dismissed a plea of self-styled godman Asaram Bapu, seeking temporary suspension of his sentence to pursue medical treatment at an Ayurveda centre in Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X