Bank Holiday: ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗಳಿಗೆ 21 ದಿನ ರಜೆ: ಇಲ್ಲಿದೆ ವಿವರ
Bank Holiday: ಪ್ರತಿ ತಿಂಗಳಿನಿಂನಂತೆ ಅಕ್ಟೋಬರ್‌ನಲ್ಲಿಯೂ ಬ್ಯಾಂಕ್‌ಗಳಿಗೆ ಸಾಲು ರಜೆಗಳೇ ಬಂದಿವೆ. ಇದರಿಂದ ಬ್ಯಾಂಕ್ ಉದ್ಯೋಗಿಗಳ ಮುಖದಲ್ಲಿ ಸಂತಸ ನೂರ್ಮಡಿಗೊಂಡಿದೆ. ಹಾಗಾದ್ರೆ ಯಾವ ದಿನ ರಜೆ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್‌ಗಳು ಎರಡನೇ, ನಾಲ್ಕನೇ ಶನಿವಾರ ಭಾನುವಾರದಂದು ಮುಚ್ಚಲ್ಡಡುತ್ತವೆ. ಅಲ್ಲದೆ, ಸರ್ಕಾರಿ ರಜೆಗಳಂದು ಕೂಡ ಮುಚ್ಚಲ್ಪಡುತ್ತವೆ. ಹಾಗೆಯೇ ಅಕ್ಟೋಬರ್‌ನಲ್ಲೂ ಬ್ಯಾಂಕ್‌ಗಳಿಗೆ ಸಾಲು ರಜೆಗಳೇ ಬಂದಿವೆ.

ದೇಶಾದ್ಯಂತ ಆಯುಧಪೂಜೆ ಹಿನ್ನೆಲೆ ಅಕ್ಟೋಬರ್ 1, ವಿಜದಶಮಿ, ಗಾಂಧಿಜಯಂತಿ ಕಾರಣ ಇಂದು( ಅಕ್ಟೋಬರ್ 2) ಎಲ್ಲಾ ಬ್ಯಾಂಕ್‌ಗಳಿಗೂ ರಜೆ ನೀಡಲಾಗಿದೆ. ಇನ್ನು ಮುಂಬರುವ ದೀಪಾವಳಿಗೂ ಕೂಡ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇವುಗಳನ್ನು ಹೊರತುಪಡಿಸಿ ಈ ತಿಂಗಳಿನಲ್ಲಿ ಹಲವು ದಿನ ಬ್ಯಾಂಕ್‌ಗಳಿವೆ ರಜೆ ಇರಲಿದೆ. ಆದ್ದರಿಂದ ಗ್ರಾಹಕರು ತಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಮುಂಚೆಯೇ ಮಾಡಿಕೊಳ್ಳುವುದು ಉತ್ತಮ.
* ಆರ್‌ಬಿಐ ಪ್ರಕಾರ, ಅಕ್ಟೋಬರ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬ್ಯಾಂಕ್‌ಗಳಿಗೆ ಒಟ್ಟು 21 ರಜೆಗಳು ಇರಲಿವೆ. ಅಕ್ಟೋಬರ್ 5, 12, 19, 26 ಭಾನುವಾರಗಳಾಗಿದ್ದು, ಈ ದಿನಗಂದು ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ. ಅಕ್ಟೋಬರ್ 11 ಎರಡನೇ ಶನಿವಾರ ಮತ್ತು ಅಕ್ಟೋಬರ್ 25ರಂದು ನಾಲ್ಕನೇ ಶನಿವಾರಗಳಂದು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 1ರಂದು ಮಹಾನವಮಿ, ದಸರಾ, ಆಯುಧಪೂಜೆ, ದುರ್ಗಾಪೂಜೆ ಹಿನ್ನೆಲೆ ಕೇರಳ, ಒಡಿಶಾ, ತ್ರಿಪುರ, ಕರ್ನಾಟಕ, ತಮಿಳುನಾಡು, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಜಾರ್ಖಂಡ್, ಮೇಘಾಲಯದಲ್ಲಿ ಬ್ಯಾಂಕ್‌ಗಳು ಮುಚ್ಚಿದ್ದವು.
* ಅಕ್ಟೋಬರ್ 2ರ ಗುರುವಾರಂದು ಗಾಂಧಿ ಜಯಂತಿ, ದಸರಾ, ದುರ್ಗಾಪೂಜೆ ಹಿನ್ನೆಲೆ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಿವೆ.
* ಅಕ್ಟೋಬರ್ 3, 4ರಂದು ದುರ್ಗಾಪೂಜೆಗೆ ಹಿನ್ನೆಲೆ ಸಿಕ್ಕಿಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 6ರಂದು ಲಕ್ಷ್ಮೀಪೂಜೆ ಹಿನ್ನೆಲೆ ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 7ರಂದು ಮಹರ್ಷಿ ವಾಲ್ಮೀಕಿ ಜಯಂತಿ, ಕುಮಾರ ಪೂರ್ಣಿಮಾ ಹಿನ್ನೆಲೆ ಹಿಮಾಚಲ ಪ್ರದೇಶ, ಒಡಿಶಾ, ಕರ್ನಾಟಕ, ಚಂಡೀಗಢದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 10ರಂದು ಹಿಮಾಚಲ ಪ್ರದೇಶದಲ್ಲಿ ಕರ್ವಾ ಚೌತ್ ಹಿನ್ನೆಲೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 18ರಂದು ಕಾಟಿ ಬಿಹು ಹಿನ್ನೆಲೆ ಅಸ್ಸಾಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 20ರಂದು ನರಕ ಚತುರ್ದಶಿ, ಕಾಳಿಪೂಜೆ ಹಿನ್ನೆಲೆ ಜಮ್ಮು ಕಾಶ್ಮೀರ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಅಸ್ಸಾಂ, ಒಡಿಶಾದ ಹೊರತುಪಡಿಸಿ ದೇಶದ ಎಲ್ಲಾ ಕಡೆಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 21ರಂದು ಲಕ್ಷ್ಮೀಪೂಜೆ, ದೀಪಾವಳಿ, ಗೋವರ್ಧನ ಪೂಜೆ ಹಿನ್ನೆಲೆ ಮಹಾರಾಷ್ಟ್ರ, ಒಡಿಶಾ, ಮಣಿಪುರ, ಜಮ್ಮು ಕಾಶ್ಮೀರ, ಸಿಕ್ಕಿಂ, ಮಧ್ಯಪ್ರದೇಶದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 22ರಂದು ದೀಪಾವಳಿ, ಬಲಿಪಾಡ್ಯಾಮಿ, ಲಕ್ಷ್ಮೀಪೂಜೆ ಹಿನ್ನೆಕೆ ಮಹಾರಾಷ್ಟ್ರ, ಕರ್ನಾಟಕ, ಉತ್ತರಾಖಂಡ, ಸಿಕ್ಕಿಂ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್ ಸೇರಿ ದೇಶದ ಹಲವೆಡೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 23ರಂದು ಭೈದೂಜ್, ಚಿತ್ರಗುಪ್ತ ಜಯಂತಿ, ಲಕ್ಷ್ಮಿ ಪೂಜೆ ಭ್ರಾತ್ರಿದ್ವಿತಿಯಾ ಮತ್ತು ನಿಂಗೋಲ್ ಚಕ್ಕೌಬಾದ ಆಚರಣೆ ಹಿನ್ನೆಲೆ ಸಿಕ್ಕಿಂ, ಪಶ್ಚಿಮ ಬಂಗಾಳ, ಮಣಿಪುರ, ಉತ್ತರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 27ರಂದು ಛಥ್ ಪೂಜೆ ಹಿನ್ನೆಲೆ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
* ಅಕ್ಟೋಬರ್ 28ರಂದು ಛಥ್ ಪೂಜೆಗಾಗಿ ಬಿಹಾರ, ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಿನ್ನೆಲೆ ಗುಜರಾತ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಬ್ಯಾಂಕ್‌ಗಳು ಮುಚ್ಚಿರುವ ದಿನಗಳಂದು ಗ್ರಾಹಕರು ಇಂಟರ್‌ನೆಟ್ ಬ್ಯಾಂಕಿಂಗ್‌ನಲ್ಲಿ ಸೇವೆಯನ್ನು ಪಡೆದುಕೊಳ್ಳಬಹುದು. ಯುಪಿಐ ಪಾವತಿಗಳು ಮತ್ತು ಎಟಿಎಂ ವಹಿವಾಟುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಖ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿಗಳನ್ನು ಮಾಡಿಕೊಳ್ಳಬಹುದಾಗಿದೆ.












Click it and Unblock the Notifications