• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಲೀಸ್ ವ್ಯಾನ್ ನಲ್ಲೇ ಮುತ್ತಿನ ಮಳೆಗರೆದರು

|

ತಿರುವನಂತಪುರ, ನ:3: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರು ನ. 2ರಂದು ಕೊಚ್ಚಿ ಮತ್ತು ಮುಂಬೈನಲ್ಲಿ ಹಮ್ಮಿಕೊಂಡಿದ್ದ 'ಕಿಸ್ ಡೇ'ಗೆ ಪೊಲೀಸರು ಅಡ್ಡಿಯಾದರು. ಕಾರ್ಯಕ್ರಮ ಬೆಂಬಲಿಸಿ ಆಗಮಿಸಿದ್ದ ಪ್ರೇಮಿಗಳನ್ನು ಬಂಧಿಸಲಾಯಿತು. ಆದರೂ ಪೊಲೀಸ್ ವ್ಯಾನ್ ನಲ್ಲಿಯೇ ಕೆಲವರು ಪರಸ್ಪರ ಚುಂಬನ ಮಾಡಿದರು.

ಸುಮಾರು 300ಕ್ಕೂ ಹೆಚ್ಚು ಜೋಡಿಗಳು ಕಿಸ್ ಡೇ ಗೆ ಬೆಂಬಲ ಸೂಚಿಸಿ ಆಗಮಿಸಿದ್ದರು. ಆದರೆ ಪೊಲೀಸರ ಭಯಕ್ಕೆ ಹೆದರಿ ಕೆಲವರಷ್ಟೇ ಮುತ್ತು ಹಂಚಿಕೊಂಡರು. ಮರೀನ್ ಡ್ರೈವ್ ಬೀಚ್ ಬಳಿ ಸೇರಿದ್ದ 50 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಯಿತು.[ಕಿಸ್ ಡೇ : ಮುತ್ತಿನ ಮಳೆಗೆ ತಣ್ಣೀರು ಎರಚಿದ್ದು ಯಾರು?]

ಕೊಚ್ಚಿಯಲ್ಲಿ ಕೆಲ ಸಾಮಾಜಿಕ ಕಾರ್ಯಕರ್ತರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಗೊಂದಲ ಉಂಟಾದರೂ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು. ಕೊಚ್ಚಿಯಲ್ಲಿ ಮುತ್ತಿನ ಮಳೆಗರೆಯಬೇಕೇಂದಿದ್ದ ಯುವ ಪ್ರೇಮಿಗಳ ಆಸೆಗೆ ಪೊಲೀಸರು ತಣ್ಣೀರು ಎರಚಿದರು.

ಆದರೆ ಮುಂಬೈನಲ್ಲಿ ಶಿವಸೇನೆಯಿಂದಲೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಿವಸೇನೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ವರ್ಷಗಳ ಹಿಂದೆ ಕೇಸರಿ ಪಕ್ಷ ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಕಿಸ್ ಡೇ ಆಯೋಜಿಸಿದ್ದು ಯಾಕೆ?

ಅಕ್ಟೋಬರ್ 23 ರಂದು ಕೋಜಿಕೋಡ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಯುವ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸುವಂತೆ ಮಾಡಿತು. ಬಿಜೆಪಿ ಮತ್ತು ಕೇಸರಿ ಪಾಳಯದ ಕೆಲವರು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಪ್ರೇಮಿಗಳ ಮೇಲೆ ದಾಳಿ ಮಾಡಿದ್ದರು. ಈ ಘಟನೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Official crackdowns, real and anticipated, however, ensured that the much-touted Kiss Day in two cities ended up as a damp squib. In Kochi, on Sunday afternoon, police detained the 50 protestors against moral policing, and only some got to lock lips on the way to police vans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more