ಕೇಂದ್ರ ಬಜೆಟ್ ಮೇಲಿನ ಕಿರಣ್ ಮಜುಂದಾರ್ ಶಾರ ನಿರೀಕ್ಷೆಗಳು

Subscribe to Oneindia Kannada

ಬೆಂಗಳೂರು, ಜನವರಿ 11: ನರೇಂದ್ರ ಮೋದಿ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇದೇ ಫೆಬ್ರವರಿ 1ರಂದು ಮಂಡಿಸಲಿದ್ದಾರೆ.

ಮುಂದಿನ ವರ್ಷ ನರೇಂದ್ರ ಮೋದಿ ಸರಕಾರ ಚುನಾವಣೆಯನ್ನು ಎದುರಿಸಬೇಕಾಗಿದೆ. ಜತೆಗೆ ಇನ್ನೇನು ಕೆಲವೇ ತಿಂಗಳಲ್ಲಿ ಕರ್ನಾಟಕದಂಥ ಪ್ರಮುಖ ರಾಜ್ಯದಲ್ಲಿ ಚುನಾವಣೆ ಎದುರಿಸಬೇಕಾಗಿದ್ದು ಇದಕ್ಕೆ ಕೇಂದ್ರ ಸರಕಾರದ ಬಳಿ ಇರುವ ಪ್ರಮುಖ ಅಸ್ತ್ರ ಬಜೆಟ್. ಹೀಗಾಗಿ ಬಜೆಟ್ ಮೇಲೆ ಶ್ರೀಸಾಮನ್ಯರೂ, ಉದ್ಯಮಿಗಳೂ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಮೋದಿ ಐಡಿಯಾಗಳೇ ಹೆಚ್ಚಿರುತ್ತವೆಯೇ?

2018ರ ಬಜೆಟ್ ಮೇಲಿನ ತಮ್ಮ ನಿರೀಕ್ಷೆಗಳನ್ನು ಹಂಚಿಕೊಂಡಿರುವ ಉದ್ಯಮಿ, ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, "ನಮ್ಮ ಜಿಡಿಪಿ ಮಟ್ಟವನ್ನು ಶೇ. 1ರಷ್ಟು ಕೆಳಗೆ ಇಳಿಸಿದ್ದೇವೆ. ಹೀಗಾಗಿ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಹೂಡಿಕೆ ಕಾಣಲು ನಾವು ಬಯಸುತ್ತೇವೆ. ಸಾರ್ವತ್ರಿಕ ಆರೋಗ್ಯ ಸೇವೆಯನ್ನು ನೀಡಲು ಪ್ರಯತ್ನಿಸುತ್ತಿರುವ ಭಾರತದಂಥ ದೇಶದಲ್ಲಿ ಆರೋಗ್ಯ ರಕ್ಷಣೆಗಾಗಿ ಈ ಹೂಡಿಕೆಯ ಅಗತ್ಯವಿದೆ," ಎಂದು ಅವರು ಪ್ರತಿಪಾದಿಸಿದ್ದಾರೆ.

Kiran Mazumdar Shaw's

ಇದಲ್ಲದೆ, "ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹತ್ತರವಾದ ಹೂಡಿಕೆಗಳನ್ನು ನೋಡಲು ಬಯಸುತ್ತೇವೆ. ಇವತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ಹೂಡಿಕೆಯಲ್ಲಾದ ಇಳಿಕೆ ಆತಂಕಕಾರಿ ಅಂಕಿಅಂಶಗಳನ್ನು ನೀಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಹೂಡಿಕೆ ಜಿಡಿಪಿಯಲ್ಲಿ ಶೇ 0.69 ರಲ್ಲೇ ಸ್ಥಿರವಾಗಿದೆ," ಎಂದು ಕಿರಣ್ ಮಜುಂದಾರ್ ಶಾ ವಿವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kiran Mazumdar Shaw, chairman and managing director of Biocon Limited, has expected more spends in health care sector as well as science and technology sector in union budget 2018-19.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ