'ಓಂ' ಎನ್ನುವ ಸೂರ್ಯ: ನಕಲಿ ವಿಡಿಯೋ ಹಾಕಿ ಟ್ರಾಲ್ ಆದ ಕಿರಣ್ ಬೇಡಿ
ನವದೆಹಲಿ, ಜನವರಿ 4: ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಹಲವು ವರ್ಷಗಳಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದ ನಕಲಿ ವಿಡಿಯೋವೊಂದನ್ನು ನಂಬಿ ನಗೆಪಾಟಲಿಗೆ ಈಡಾಗಿದ್ದಾರೆ. ಸೂರ್ಯ 'ಓಂ' ಎಂಬ ಸದ್ದು ಹೊರಡಿಸುತ್ತಿದೆ ಎಂಬ ವಿಡಿಯೋ ಹಂಚಿಕೊಂಡಿರುವ ಕಿರಣ್ ಬೇಡಿ ಅವರನ್ನು ನೆಟ್ಟಿಗರು ಟ್ರಾಲ್ ಮಾಡುತ್ತಿದ್ದಾರೆ.
ಹಲವು ವರ್ಷಗಳಿಂದ ಈ ರೀತಿಯ ವಿಡಿಯೋವೊಂದು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೂರ್ಯನು ಸುತ್ತುವಾಗ 'ಓಂ' ಎಂಬ ಶಬ್ದ ಹೊರಬರುತ್ತದೆ. ಇದನ್ನು ನಾಸಾ ರೆಕಾರ್ಡ್ ಮಾಡಿಕೊಂಡಿದೆ ಎಂಬ ಸುಳ್ಳು ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ.
ಸೂರ್ಯನೇ 'ಓಂ'ಕಾರ ಪಠಿಸುತ್ತಿದೆ ಎಂದು ಕಿರಣ್ ಬೇಡಿ, ಸೂರ್ಯನ ಚಿತ್ರದ ಹಿನ್ನೆಲೆಯಲ್ಲಿ ಓಂ ಸದ್ದು ಬರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಸೂರ್ಯನಿಂದ ಯಾವ ರೀತಿಯ ಶಬ್ದ ಹೊರಡುತ್ತದೆ ಎಂಬುದನ್ನು ನಾಸಾ ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದು, ಅದು ಯೂಟ್ಯೂಬ್‌ನಲ್ಲಿ ಮುಕ್ತವಾಗಿ ಲಭ್ಯವಿದೆ. ಇದನ್ನು 40 ದಿನ ಸೂರ್ಯನಿಂದ ಬಂದ ಸೋಲಾರ್ ಸೌಂಡ್ ಮತ್ತು ಹೆಲಿಯೋಸ್ಪೆರಿಕ್ ಅಬ್ಸರ್ವೇಟರಿ (ಎಸ್‌ಓಎಚ್‌ಓ) ಮಿಷೆಲ್ಸನ್ ಡಾಪ್ಲರ್ ಇಮೇಜರ್ (ಎಂಡಿಐ) ಡೇಟಾವನ್ನು ಸಂಗ್ರಹಿಸಿ ಪರಿಷ್ಕರಿಸಿ ಬಿಡುಗಡೆ ಮಾಡಲಾಗಿದೆ.
ಆದರೆ ಸೂರ್ಯನಿಂದ ಓಂ ಎಂಬ ಸದ್ದು ಬರುತ್ತದೆ ಎಂದು ನಂಬಿರುವ ಕಿರಣ್ ಬೇಡಿ, ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಅವರ ಕಾಲೆಳೆದಿದ್ದಾರೆ. ತಮಾಷೆಯ ಮೀಮ್‌ಗಳನ್ನು ಹರಿಬಿಟ್ಟಿದ್ದಾರೆ.
|
ಕೋಯಿ ಮಿಲ್ ಗಯಾ ಅಭಿಮಾನಿ
ನೀವೊಬ್ಬ ಮಾಜಿ ಐಪಿಎಸ್ ಅಧಿಕಾರಿ, ಒಬ್ಬ ಲೆಫ್ಟಿನೆಂಟ್ ಗವರ್ನರ್ , ಅಲ್ಲದೆ ಜತೆಗೆ ಕೋಯಿ ಮಿಲ್ ಗಯಾದ (ಹಿಂದಿ ಸಿನಿಮಾ) ದೊಡ್ಡ ಅಭಿಮಾನಿಯಾಗಿದ್ದಾಗ ಈ ರೀತಿ ತಿಳಿವಳಿಕೆ ಬರುತ್ತದೆ ಎಂದು ರೋಷನ್ ರೈ ಟ್ರಾಲ್ ಮಾಡಿದ್ದಾರೆ.
|
ಇಸ್ರೋ ಏನು ಮಾಡುತ್ತಿದೆ?
ಸೂರ್ಯನ ಶಬ್ದವನ್ನು ರೆಕಾರ್ಡ್ ಮಾಡಿಕೊಂಡಿದ್ದಕ್ಕೆ ನಾಸಾಗೆ ಧನ್ಯವಾದಗಳು. ಆದರೆ ನಮ್ಮ ಇಸ್ರೋ ಏನು ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ವಿಮಲ್ ಲಖೋಟಿಯಾ ತಮಾಷೆ ಮಾಡಿದ್ದಾರೆ.
|
ಹಮ್ ದೇಖೇಂಗೆ
ಜತೆಗೆ ಇಡೀ ಸೌರವ್ಯೂಹ ವ್ಯವಸ್ಥೆಯು ಹಮ್ ದೇಖೇಂಗೆ ಎಂಬ ಮಂತ್ರ ಪಠಿಸುತ್ತಿದೆ. ನಾಸಾ ಅದನ್ನೂ ಕೂಡ ರೆಕಾರ್ಡ್ ಮಾಡಿಕೊಂಡಿದೆ ಎಂದು ರೋಹಿಣಿ ಸಿಂಗ್ ವ್ಯಂಗ್ಯವಾಡಿದ್ದಾರೆ.
|
ವಾಹ್ ಮೋದಿಜಿ
ಸೂರ್ಯ 2014ರ ಬಳಿಕ ತನ್ನ ಶಬ್ದವನ್ನು ಬದಲಿಸಿಕೊಂಡಿದ್ದಾನೆ. ಈಗ ಅದು ಕೂಡ 'ವಾಹ್ ಮೋದಿಜಿ ವಾಹ್' ಎನ್ನುತ್ತಿದೆ ಎಂದು ಅಜಿ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
|
ಇದನ್ನೂ ಎಡಿಟ್ ಮಾಡಿದ್ದಾರೆ
ಕಿರಣ್ ಬೇಡಿ ಹಂಚಿಕೊಂಡಿರುವ ನಕಲಿ ವಿಡಿಯೋವನ್ನು ಲೇವಡಿ ಮಾಡಿರುವ ಕಮಲೇಶ್ ಕೆ ಸಿಂಗ್, ಇದು ನಕಲಿ ಮತ್ತು ತಿದ್ದಿರುವ ವಿಡಿಯೋ. ಮೂಲ ವಿಡಿಯೋದಲ್ಲಿ ಓಂ ಬಳಿಕ ಜೈ ಜಗದೀಶ ಹರೇ ಎಂದೂ ಸೂರ್ಯ ಜಪಿಸುವುದನ್ನು ನೀವು ಕೇಳಬಹುದು. ಅದಕ್ಕಾಗಿ ಮತ್ತೊಮ್ಮೆ ವಾಟ್ಸಾಪ್‌ಅನ್ನು ಪರಿಶೀಲಿಸಿ ಎಂದು ಹೇಳಿದ್ದಾರೆ.
|
ಶಿಕ್ಷಣ ಸಾಮಾನ್ಯ ಜ್ಞಾನ ಕೊಡೊಲ್ಲ
ಕಿರಣ ಬೇಡಿ ಒಬ್ಬ ಮಾಜಿ ಐಪಿಎಸ್ ಅಧಿಕಾರಿ. ಸೂರ್ಯ ಓಂ ಶಬ್ದ ಜಪಿಸುತ್ತದೆ ಎಂದು ಅವರು ನಂಬುತ್ತಾರೆ. ಸತ್ಯಪಾಲ್ ಸಿಂಗ್ ಕೂಡ ಮಾಜಿ ಐಪಿಎಸ್ ಅಧಿಕಾರಿ. ಅವರು ಡಾರ್ವಿನ್ ಸಿದ್ಧಾಂತ ಸುಳ್ಳು ಎಂದು ನಂಬುತ್ತಾರೆ. ಪಿಯೂಷ್ ಗೋಯಲ್ ಒಬ್ಬ ಯಾಲೆ ವಿ.ವಿಯ ಮಾಜಿ ವಿದ್ಯಾರ್ಥಿ. ಗುರುತ್ವದ ಶಕ್ತಿಯನ್ನು ಐನ್‌ಸ್ಟೀನ್ ಕಂಡುಹಿಡಿದರು ಎಂದು ಅವರು ನಂಬುತ್ತಾರೆ. ಯಾರೋ ಒಬ್ಬರು ಸರಿಯಾಗಿಯೇ ಹೇಳಿದ್ದಾರೆ, ಶಿಕ್ಷಣವು ಕಾಮನ್ ಸೆನ್ಸ್‌ಅನ್ನು ಖಾತರಿಗೊಳಿಸುವುದಿಲ್ಲ ಎಂದು ಐರನ್ ಮ್ಯಾನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications