ಕಮ್ಯೂನಿಸ್ಟರ ರಕ್ತದಾಹ: ಕೇರಳದಲ್ಲಿ ಸಂಘ ಪರಿವಾರದ 'ತಲೆ' ಗಳಿಗೆ ಬೆಲೆಯಿಲ್ಲ ಕಾಂತಾ!
ದೇವರನಾಡು ಕೇರಳದಲ್ಲಿ ಸಂಘ ಪರಿವಾರದ ಮುಖಂಡರ ಹತ್ಯೆ ಮುಂದುವರಿಯುತ್ತಲೇ ಇದೆ. ಇದುವರೆಗೆ ಪರಿವಾರದ ಒಂಬತ್ತು ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ.
ಕೇರಳದ ತ್ರಿಶೂರು, ಕಣ್ಣೂರು ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಮನುಷ್ಯ ಸಂಬಂಧಕ್ಕೆ ಬೆಲೆಯೇ ಇಲ್ಲವೇ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುವುದು ಸಾಲು ಸಾಲು ಸಂಘ ಪರಿವಾರದ ಸಂಘಟನೆಯ ಕಾರ್ಯಕರ್ತರ ದಾರುಣ ಹತ್ಯೆಯಿಂದಾಗಿ.
ಯಾವುದೇ ಸಂಘಟನೆಯಿರಲಿ, ಯಾವುದೇ ಪಕ್ಷದ ಕಾರ್ಯಕರ್ತರಿರಲಿ ದ್ವೇಷದ ಕೈಗೆ ಬುದ್ದಿಕೊಟ್ಟರೆ ಕೊನೆಗೆ ಹರಿಯುವುದು ರಕ್ತ ಎನ್ನುವುದನ್ನು ಅರಿಯದ ದುರಳರು, ದೇವರನಾಡಲ್ಲಿ ರಕ್ತದೋಕುಳಿ ಹರಿಸುತ್ತಿದ್ದಾರೆ. (ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಸಿಎಂ ಸುಪಾರಿ)
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲೇ ಇದುವರೆಗೆ ಸಂಘ ಪರಿವಾರದ ಐವರು ಕಾರ್ಯಕರ್ತರು ಬರ್ಭರವಾಗಿ ಹತ್ಯೆವಾಗಿದ್ದಾರೆಂದರೆ, ಅಪಾರ ರಾಜಕೀಯ ಅನುಭವವನ್ನು ಹೊಂದಿರುವ ಪಿಣರಾಯಿ ವಿಜಯನ್ ರಾಜಕೀಯ ವೃತ್ತಿ ಜೀವನಕ್ಕೇ ಇದೊಂದು ಬಹುದೊಡ್ಡ ಕಪ್ಪುಚುಕ್ಕೆ.
ಇನ್ನೊಂದೆಡೆ ಸಂಘ ಪರಿವಾರದವರಿಂದ ಯಾವುದೇ ಪ್ರತಿಕೂಲ ವಾತಾವರಣ ಸಂಭವಿಸಿದಾಗಲೆಲ್ಲಾ ಒಮ್ಮಲೇ ಎಚ್ಚೆತ್ತುಕೊಂಡು ಪ್ರತಿಭಟನೆಗೆ ಮುಂದಾಗುವ ಮತ್ತು ಬಿಜೆಪಿ ಮಾತೃಸಂಘಟನೆಗಳ ಕಾರ್ಯಕರ್ತರು ದಾರುಣವಾಗಿ ಹತ್ಯೆಗೊಳ್ಳುವಾಗ ಬಾಯಿಗೆ ಬೀಗ ಹಾಕಿಕೊಳ್ಳುವ 'ಬುದ್ದಿಜೀವಿಗಳ' ದ್ವಂದ್ವ ನೀತಿಯಿಂದಾಗಿ ' ಬುದ್ದಿಜೀವಿಗಳು' ಎನ್ನುವ ಪದವೇ ಪ್ರಶ್ನಾರ್ಹವಾದಂತಾಗಿದೆ.
ಪ್ರಮುಖವಾಗಿ ಮೂರು ಜಿಲ್ಲೆಗಳಲ್ಲಿ ಈ ಹಿಂದೆ ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುತ್ತಿತ್ತು, ಈಗ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಟಾರ್ಗೆಟ್ ಆಗುತ್ತಿದ್ದಾರೆ.
ಹತ್ತು ದಿನಗಳ ಕೆಳಗೆ ದೇವಾಲವೊಂದರ ಜಾತ್ರೆಯ ಸಂದರ್ಭದಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಸಾವನ್ನಪ್ಪುವ ಮೂಲಕ, ಕಳೆದ 13 ತಿಂಗಳಿನಿಂದ ಕಮ್ಯೂನಿಸ್ಟರ ರಕ್ತದ ದಾಹಕ್ಕೆ ಒಂಬತ್ತನೇ ಜೀವ ಬಲಿಯಾದಂತಾಗಿದೆ. ಸವಿವರ (ಎಂಟು ಜನರ), ಮುಂದೆ ಓದಿ..

ಕೊಲ್ಲಂ ಜಿಲ್ಲೆಯಲ್ಲಿ ಹತ್ಯೆ
ಕೊಲ್ಲಂ ಜಿಲ್ಲೆಯ ಕಡಕ್ಕಲ್ ಎನ್ನುವಲ್ಲಿ ದೇವಾಲಯದ ಜಾತ್ರೆಯೊಂದರಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ ಕಾರ್ಯಕರ್ತ ರವೀಂದ್ರನಾಥ್ ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ರವೀಂದ್ರನಾಥ್ ಶುಕ್ರವಾರ (ಫೆ 17) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇಪ್ಪತ್ತು ವರ್ಷದ ಯುವಕನ ಹತ್ಯೆ
ತ್ರಿಶೂರು ಜಿಲ್ಲೆಯಲ್ಲಿ 20 ವರ್ಷ ವಯಸ್ಸಿನ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಫೆಬ್ರವರಿ ಹನ್ನೆರಡರ ತಡ ರಾತ್ರಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಜಿಲ್ಲೆಯ ಮುಕ್ಕತ್ತುಕಾರ ಗ್ರಾಮದಲ್ಲಿ ನಿರ್ಮಲ್ ಎನ್ನುವ ಕಾರ್ಯಕರ್ತ ಈ ದುರ್ಘಟನೆಯಲ್ಲಿ ಬಲಿಯಾದವರು.

ಮನೆ ಮೇಲೆ ದಾಳಿ ಮಾಡಿ ಹತ್ಯೆ
52ವರ್ಷದ ಸಂತೋಶ್ ಎನ್ನುವವರ ಮನೆಗೆ ಜನವರಿ 18ರಂದು ದಾಳಿ ನಡೆಸಿದ ಸಿಪಿಎಂ ಕಾರ್ಯಕರ್ತರು ಅವರನ್ನು ಹತ್ಯೆ ಮಾಡಿದ್ದರು. ಸಂತೋಶ್ ಅವರ ನಿವಾಸವಿರುವುದು ಸಿಎಂ ಪಿಣರಾಯಿ ವಿಜಯನ್ ಕ್ಷೇತ್ರದ ಧರ್ಮಾದಂನಲ್ಲಿ.

ವಿಮಲಾ ಸಾವನ್ನಪ್ಪಿದ ಕಾರ್ಯಕರ್ತೆ
ಡಿಸೆಂಬರ್ 28ರಂದು ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವಿಮಲಾ ಎನ್ನುವವರ ಪಾಲಕ್ಕಾಡ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವಿಮಲಾ ನಿಧನಹೊಂದಿದ್ದರು.

ಪಯ್ಯನೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ
ಕಳೆದ ವರ್ಷ ಜುಲೈ ಹನ್ನೊಂದರಂದು ಬಿಜೆಪಿ ಕಾರ್ಯಕರ್ತ ಸಿ ಕೆ ರಾಮಚಂದ್ರನ್ ಅವರ ಮೇಲೆ ದಾಳಿ ನಡೆಸಿದ ಸಿಪಿಎಂ ಕಾರ್ಯಕರ್ತರು ಅವರನ್ನು ಅಮಾನುಷವಾಗಿ ಹತ್ಯೆಗೈದಿದ್ದರು.

ಸಂಘ ಪರಿವಾರದ ಕಾರ್ಯಕರ್ತನ ಹತ್ಯೆ
ಕಳೆದ ವರ್ಷ ಫೆಬ್ರವರಿ 19ರಂದು ಸಂಘ ಪರಿವಾರದ ಕಾರ್ಯಕರ್ತ, 27ವರ್ಷದ ಸುಜಿತ್ ಎನ್ನುವವರ ಹತ್ಯೆಯಾಗಿತ್ತು.

ಬೇಡವಾದ ಕಾರಣಕ್ಕೆ ಹೆಸರಾದ ಕಣ್ಣೂರು
ಕಳೆದ ವರ್ಷ ಅಕ್ಟೋಬರ್ ಹನ್ನೊಂದರ ರಾತ್ರಿ ಬಿಜೆಪಿ ಕಾರ್ಯಕರ್ತ ರಮಿತ್ ಉತ್ತಮನ್ ಎನ್ನುವವರನ್ನು ಸಿಪಿಎಂ ಕಾರ್ಯಕರ್ತರು ಹತ್ಯೆಗೈದಿದ್ದರು. ಸಿಪಿಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ಎನ್ನಲಾಗುತ್ತಿದೆ. ಇದು ಕೂಡಾ ಪಿಣರಾಯಿ ವಿಜಯನ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ನಡೆದದ್ದು.

ದ್ವೇಷಕ್ಕೆ ಬಿತ್ತು ಮತ್ತೊಂದು ಬಲಿ
ಸೆಪ್ಟಂಬರ್ 3,2016ರಂದು 26ವರ್ಷದ ಆರ್ ಎಸ್ ಎಸ್ ಸ್ವಯಂಸೇವಕ ಬಿನೀಶ್ ಎನ್ನುವವರನ್ನು ಹತ್ಯೆಗೈಲಾಗಿತ್ತು.












Click it and Unblock the Notifications