Kerala Vande Bharat Express: ಟಿಕೆಟ್ ಇಲ್ಲದೇ ವಾಶ್‌ರೂಮ್‌ನಲ್ಲಿ ಕುಳಿತ ವ್ಯಕ್ತಿ, ಹೊರಬರಲು ನಕಾರ, ಮುಂದೇನಾಯ್ತು?

ಕೇರಳ, ಜೂನ್ 26: ದೇಶದಲ್ಲಿ ಒಂದೇ ಭಾರತದಲ್ಲಿ ರೈಲುಗಳು ಆರಂಭಗೊಂಡ ಬಳಿಕ ಕಲ್ಲೆಸೆತ, ರಾಸುಗಳಿಗೆ ಡಿಕ್ಕಿ, ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ರೈಲು ಸುದ್ದಿಯಲ್ಲಿರುತ್ತದೆ. ಇದೀಗ ಹೊರ ಬರದೆ ರೈಲಿನ ವಾಶ್‌ ರೂಮಿನಲ್ಲಿ ಕೂತ ವ್ಯಕ್ತಿಯಿಂದಾಗಿ ಕೇರಳದ ವಂದೇ ಭಾರತ್ ರೈಲು ಸುದ್ದಿಯಾಗಿದೆ.

ಕೇರಳದ ವಂದೇ ಭಾರತ್ ರೈಲಿನಲ್ಲಿ ಭಾನುವಾರ ವಿಚಿತ್ರ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಟಿಕೆಟ್ ಇಲ್ಲದೇ ವಂದೇ ಭಾರತ್ ಎಕ್ಸ್‌ಪ್ರೆಸ್ ಹತ್ತಿದ್ದಾನೆ. ಬಳಿಕ ಆತ ಸೀದಾ ರೈಲಿನ ವಾಶ್‌ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತವ ಹೊರ ಬರಲು ನಿರಾಕರಿಸಿದ್ದಾನೆ.

Kerala Vande Bharat Express

ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರೂ ಸಹ ಬಾಗಿಲು ಚಿಲಕ ತೆಗೆಯದೇ ಹಠ ಹಿಡಿದು ವ್ಯಕ್ತಿ ಕೂತಿದ್ದಾರೆ. ವಾಶ್ ರೂಮ್‌ ಒಳಗಿನಿಂದ ಲಾಕ್ ಆಗಿದ್ದರಿಂದ ಅಧಿಕಾರಿಗಳು ತೆರೆಯಲು ಹರಸಾಹಸ ಪಟ್ಟಿದ್ದಾರೆ.

ಕೇರಳಕ್ಕೆ ಹೊರಟಿದ್ದ ರೈಲು ಪಾಲಕ್ಕಾಡ್‌ನ ಶೋರನೂರ್ ನಿಲ್ದಾಣ ತಲುಪಿದಾಗ, ಅಧಿಕಾರಿಗಳು ವಾಶ್‌ರೂಮ್‌ನ ಬಾಗಿಲು ಮುರಿದಿದ್ದಾರೆ. ಟಿಕೆಟ್ ಇಲ್ಲದೇ ಒಳ ಕುಳಿತು ಸತಾಯಿಸಿದ್ದ ವ್ಯಕ್ತಿಯನ್ನು ಹೊರತೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಚಾರಣೆ ಬಳಿಕ ಸತ್ಯಾಂಶ ಬಯಲು

ಟಿಕೆಟ್ ಪಡೆಯದೇ ರೈಲು ಏರಿದ್ದ ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ವಾಶ್‌ ರೂಮ್‌ನಿಂದ ಹೊರಕ್ಕೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಆತ ಸುಳ್ಳು ಹೇಳಲು ಪ್ರಯತ್ನಿಸಿದ್ದಾನೆ. ಮೊದಲಿಗೆ ತಾನು ಯುವಕ ಮಹಾರಾಷ್ಟ್ರದ ವ್ಯಕ್ತಿ ಎಂದು ಹೇಳಿದ್ದ. ನಂತರ ತಾನು ಕಾಸರಗೋಡಿನ ನಿವಾಸಿ ಎಂದಿದ್ದಾನೆ. ಈತ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

Kerala Vande Bharat Express

ವಾಶ್ ರೋಮ್‌ನಲ್ಲಿ ಕುಳಿತಿದ್ದ ಈ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಟಿಕೆಟ್ ಪಡೆಯದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಂಬುದು ಗೊತ್ತಾಗಿದೆ. ವಿಚಾರಣೆ ವೇಳೆ ಯುವಕ ತನ್ನನ್ನು ಯಾರೋ ಹಿಂಬಾಲಿಸಿಕೊಂಡು ಬರುತ್ತಿದ್ದಾರೆ. ಆತನಿಂದ ತಪ್ಪಿಸಿಕೊಳ್ಳಲು ರೈಲು ಏರಿ ವಾಶ್‌ರೂಮ್‌ಗೆ ಹೋಗಿ ಕುಳಿತೆ ಎಂದು ವಿವರಿಸಿದ್ದಾನೆ ಎಂದು ತಿಳಿದು ಬಂದಿದೆ.

ಈತ ವಾಶ್‌ ರೂಮಿನಲ್ಲಿದ್ದಾಗ ಅಧಿಕಾರಿಗಳು ಎಷ್ಟೇ ಕೇಳಿಕೊಂಡರು ಹೊರ ಬಂದಿರಲಿಲ್ಲ. ಆಗ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಣ್ಣೂರು ನಿಲ್ದಾಣ ಬಂದಾಗ ಇಳಿ ಅಂದರೂ ಆತ ಖ್ಯಾರೆ ಎನ್ನಲಿಲ್ಲ. ಹೀಗಾಗಿ ಅಧಿಕಾರಿಗಳು ಅನುಮಾನಗೊಂಡು ಬಾಗಿಲು ಮುರಿದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಆತ ಅಪರಿಚಿತ ಎನ್ನುವುದು ಗೊತ್ತಾಗಿದೆ. ಯಾವ ಕೆಟ್ಟ ಉದ್ದೇಶ ಹೊಂದಿರಲಿಲ್ಲ ಎಂದು ಕಂಡು ಅಧಿಕಾರಿಗಳು ನಿರಾಳರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+