ಸುಪ್ರೀಂನಲ್ಲಿ ಜು.17ರಂದು ವರ್ಗೀಸ್ ಜಾಮೀನು ಅರ್ಜಿ ವಿಚಾರಣೆ

ತಿರುವನಂತಪುರಂ, ಜುಲೈ 16 : ಕೇರಳದ ಪಾದ್ರಿ ಫಾದರ್ ಅಬ್ರಾಹಂ ವರ್ಗೀಸ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ನಡೆಯಲಿದೆ. ಚರ್ಚ್‌ನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವರ್ಗೀಸ್ ಆರೋಪಿಯಾಗಿದ್ದಾರೆ.

ಸುಪ್ರೀಂಕೋರ್ಟ್‌ ತುರ್ತಾಗಿ ಅರ್ಜಿಯ ವಿಚಾರಣೆಯನ್ನು ನಡೆಸಲು ಒಪ್ಪಿಗೆ ನೀಡಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಎಂ.ಕನ್ವೀಲ್ಕರ್ ಮತ್ತು ನ್ಯಾ.ಚಂದ್ರಚೂಡ್ ಅವರ ತ್ರಿ ಸದಸ್ಯ ಪೀಠ ಅರ್ಜಿಯ ವಿಚಾರಣೆಗೆ ಸಮ್ಮಿತಿಸಿದೆ.

ಜುಲೈ 2ರಂದು ಕೇರಳದ ಕ್ರೈಂ ಬ್ರಾಂಚ್‌ ಫಾದರ್ ಅಬ್ರಾಹಂ ವರ್ಗೀಸ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲು ಮಾಡಿಕೊಂಡಿದೆ. ಚರ್ಚ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು.

Kerala sex scandal case : SC to hear bail plea of Sony Varghese

ಕೇರಳ ಹೈಕೋರ್ಟ್ ಅಬ್ರಾಹಂ ವರ್ಗೀಸ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ವರ್ಗೀಸ್ ಪರ ವಕೀಲ ಕಾರ್ತಿಕ್ ಅಶೋಕ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಪಾದ್ರಿ ವರ್ಗೀಸ್, ಜಾಬ್ ಮ್ಯಾಥ್ಯೂ ಮತ್ತು ಪಾದ್ರಿ ಕೆ.ಜಾರ್ಜ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯೂ ನಡೆಯಲಿದೆ.

ಕೇರಳ ಹೈಕೋರ್ಟ್ ಅಬ್ರಾಹಂ ವರ್ಗೀಸ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ವರ್ಗೀಸ್ ಪರ ವಕೀಲ ಕಾರ್ತಿಕ್ ಅಶೋಕ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಪಾದ್ರಿ ವರ್ಗೀಸ್, ಜಾಬ್ ಮ್ಯಾಥ್ಯೂ ಮತ್ತು ಪಾದ್ರಿ ಕೆ.ಜಾರ್ಜ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯೂ ನಡೆಯಲಿದೆ.

ಕೇರಳ ಹೈಕೋರ್ಟ್ ಅಬ್ರಾಹಂ ವರ್ಗೀಸ್ ಸೇರಿದಂತೆ ಇತರ ಪಾದ್ರಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಎಲ್ಲಾ ಪಾದ್ರಿಗಳು ಪೊಲೀಸರಿಗೆ ಶರಣಾಗಬೇಕು ಎಂದು ಸೂಚನೆ ನೀಡಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಇಬ್ಬರು ಪಾದ್ರಿಗಳನ್ನು ಬಂಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+