Kerala Blast: ಸರಣಿ ಸ್ಪೋಟಕ್ಕೆ ಕಾರಣವಾದ ವ್ಯಕ್ತಿ ಬಂಧನ, ವಿವಿಧ ಆಯಾಮಗಳಲ್ಲಿ ತನಿಖೆ
ಕೊಚ್ಚಿ, ಅಕ್ಟೋಬರ್ 29: ಭಾನುವಾರ ದೇಶದ ಚಿತ್ತ ತನ್ನತ್ತ ಸೆಳೆದ ಕೇರಳ ಎರ್ನಾಕುಲಂನಲ್ಲಿನ ನಡೆದ ಸರಣಿ ಸ್ಪೋಟ ಘಟನೆಗೆ ಬಿಗ್ ಟ್ವೀಸ್ಟ್ ಸಿಕ್ಕಿದೆ. ಘಟನೆಯು ಬಾಂಬ್ ಸ್ಟೋಟದಿಂದ ಸಂಭವಿಸಿದ್ದು ಖಚಿತವಾಗಿದೆ. ಈ ಸ್ಪೋಟಕ್ಕೆ ಕಾರಣವಾದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.
ಎರ್ನಾಕುಲಂನ ಕಲಮಸ್ಸೆರಿಯ ಕನ್ವೆನ್ಶನ್ ಸೆಂಟರ್‌ನಲ್ಲಿ ಭಾನುವಾರ ಬೆಳಗ್ಗೆ 9.30ರ ನಂತರ ಸರಣಿಯಾಗಿ ಸ್ಫೋಟ ನಡೆಯಿತು. ಘಟನೆಯಲ್ಲಿ ಸ್ಥಳದಲ್ಲಿಯೇ ಒಬ್ಬ ಮಹಿಳೆಯರು ಮೃತಪಟ್ಟಿದ್ದರು. ಸುಮಾರು 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಬಾಂಬ್ ಸ್ಫೋಟದ ಹೊಣೆ ಹೊತ್ತು ಕೊಚ್ಚಿಯ ವ್ಯಕ್ತಿಯೊಬ್ಬರು ಕೇರಳ ಪೊಲೀಸರಿಗೆ ಶರಣಾದ ಘಟನೆ ಸ್ಫೋಟದ ನಂತರ ಕೆಲವೇ ಗಂಟೆಗಳಲ್ಲಿ ನಡೆದಿದ್ದು, ಇದನ್ನು ಪೊಲೀಸ್ ಮೂಲಗಳು ದೃಢಪಡಿಸಿವೆ.

ಪೊಲೀಸರಿಗೆ ಶರಣಾದ ವ್ಯಕ್ತಿಯನ್ನು ಮೀನಾಹಿಲ್ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನಿಂದ ಬಂದಿದ್ದ ಎನ್ನಲಾಗಿದ್ದು, ಈತ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಈ ಮಹಾ ಕೃತ್ಯ ನಡೆಯಲು ತಾನು ಬಾಂಬ್ ಇಟ್ಟಿದ್ದೆ ಕಾರಣ ಎಂದು ಆರೋಪಿ ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ.
ವಿವಿಧ ಆಯಾಮಗಳಲ್ಲಿ ತನಿಖೆ
ಕನ್ವೆನ್ಷನ್ ಸೆಂಟರ್‌ನಲ್ಲಿ ಬಾಂಬ್ ಇಟ್ಟಿರುವ ಶಂಕಿತ ಮೀನಾಹಿಲ್ ಎಂದು ಗುರುತಿಸಲಾದ ಕೊಚ್ಚಿಯ ವ್ಯಕ್ತಿ ಪೊಲೀಸರಿಗೆ ಸ್ವಇಚ್ಛೆಯಿಂದ ಶರಣಾಗಿದ್ದಾನೆ. ಪೊಲೀಸರು ಅವರನ್ನು ಕೊಚ್ಚಿಯಿಂದ ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಆತನ ಮಾನಸಿಕ ಸ್ಥಿತಿ ಬಗ್ಗೆ ತನಿಖೆ ನಡೆಸಿದ್ದಾರೆ. ಅಲ್ಲದೇ ಆತನ ಬ್ಯಾಗ್‌ನಲ್ಲಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೆಲ್ಲ ಬೆಳವಣಿಗೆ ಮಧ್ಯೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ಸೋಮವಾರ ಸರ್ವಪಕ್ಷ ಸಭೆ ಆಹ್ವಾನಿಸಿದ್ದಾರೆ. ಸದ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ಅವರಿಗೆ ಘಟನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಮಾತನಾಡಿದ್ದಾರೆ.

ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟ
ಸ್ಫೋಟದ ಸ್ಥಳದಲ್ಲಿ ಭಾನುವಾರ ನಡೆದ ವಿವಿಧ ಬಾಂಬ್ ಸ್ಫೋಟಗಳ ತನಿಖೆಯ ವೇಳೆ ಸ್ಫೋಟವನ್ನು ಪ್ರಚೋದಿಸಲು ಟಿಫಿನ್ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (IED) ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ಭಯೋತ್ಪಾದನೆ ಸೃಷ್ಟಿಸುವ ಉದ್ದೇಶದಿಂದ ನಡೆದ ಕೃತ್ಯ ಎಂದು ಮೂಲಗಳು ಖಚಿತಪಡಿಸಿವೆ. ಅಲ್ಲದೇ ಇದೇ ಸೆಂಟರ್‌ನಲ್ಲಿ ಕ್ರಿಶ್ಚಿಯನ್ ಸಮುದಾಯ ಕುರಿತು ಸಭೆ ನಡೆಯುತ್ತಿತ್ತು. ಅದರಲ್ಲಿ ಸುಮಾರು 2000 ಮಂದಿ ಪಾಲ್ಗೊಂಡಿದ್ದರು.
ಘಟನೆ ನಡೆಯುತ್ತಿದ್ದಂತೆ ಕೊಚ್ಚಿಯಿಂದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ (ಎನ್‌ಐಎ), ಬಾಂಬ್ ಸ್ಕಾಡ್, ಭಯೋತ್ಪಾದನಾ ನಿಗ್ರಹ ಸ್ಥಳಕ್ಕೆ ದೌಡಾಯಿಸಿದರು. ಈ ಸೆಂಟರ್‌ನ್ಲಲಿ ಯೆಹೋವನ ಸಾಕ್ಷಿ ಭಕ್ತರ ಸಭೆ ನಡೆದ ಸ್ಥಳದಿಂದ ಅನೇಕ ಸ್ಫೋಟಗಳು ವರದಿಯಾಗಿವೆ.












Click it and Unblock the Notifications