ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ನಿರ್ಬಂಧ: ಕೇರಳಕ್ಕೆ ಸುಪ್ರೀಂ ಬಲ

Posted By:
Subscribe to Oneindia Kannada

ನವದೆಹಲಿ, ಡಿ. 29: ಪಂಚತಾರಾ ಹೋಟೆಲ್ ಗಳಲ್ಲಿ ಮದ್ಯ ಪೂರೈಕೆ ಹಾಗೂ ಸೇವನೆ ಬಗ್ಗೆ ಕೇರಳ ಸರ್ಕಾರ ಹೊರಡಿಸಿರುವ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.

ಸರ್ಕಾರದ ನಿರ್ಣಯದ ವಿರುದ್ಧ ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾರ್ ಮಾಲೀಕರು ಹೈಕೋರ್ಟಿನಲ್ಲಿ ಸುಮಾರು 82 ಅರ್ಜಿ ಹಾಕಿದ್ದರು. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವನ್ನು ಕೊಟ್ಟಿದ್ದ ರಾಜ್ಯಸರ್ಕಾರ, ಅವುಗಳೂ ಕೂಡ ಭಾನುವಾರ ಮಧ್ಯ ಮಾರದೆ ಒಣ ದಿನವನ್ನು ಅನುಸರಿಸಬೇಕು ಎಂದು ತಾಕೀತು ಮಾಡಿತ್ತು. ಮದ್ಯ ಮಾರಾಟ ನಿಷೇಧದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 6000 ಕೋಟಿ ರು ನಷ್ಟವಾಗಲಿದೆ.

Kerala's decision to restrict liquor in 5 star hotels upheld by Supreme Court

ಕೇರಳದ ಉಮ್ಮನ್ ಚಾಂಡಿ ಸರ್ಕಾರ ಮದ್ಯ ನಿಷೇಧ ಕಾಯಿದೆ ಜಾರಿಗೊಂಡರೆ 700ಕ್ಕೂ ಅಧಿಕ ಬಾರ್ ಗಳು ಮುಚ್ಚಬೇಕಾಗುತ್ತದೆ. ಹೀಗಾಗಿ 21 ಫೈವ್ ಸ್ಟಾರ್ ಹೋಟೆಲ್, 44 ಫೋರ್ ಸ್ಟಾರ್ ಹಾಗೂ 8 ಹೆರಿಟೇಜ್ ಹೋಟೆಲ್ ಗಳಿಗೆ ಮಾನ್ಯತೆ ಸಿಕ್ಕಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court today upheld the decision of the Kerala Government to restrict the sale and drinking of liquor to 5 star hotels. The decision of the Kerala government restricting the sale and consumption of liquor at the bars in five star hotels only was challenged before the Supreme Court.
Please Wait while comments are loading...