ಕಾವ್ಯಾ ಮಾಧವನ್ ಸುತ್ತ ದೌರ್ಜನ್ಯದ ಉರುಳು!

By: ಸುನೀಲ್
Subscribe to Oneindia Kannada

ತಿರುವನಂತಪುರಂ, ಜುಲೈ 13 : ಕನ್ನಡದಲ್ಲಿಯೂ ನಟಿಸಿದ್ದ ಖ್ಯಾತ ಮಲಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಉರುಳು ನಟ ದಿಲೀಪ್ ಕುಟುಂಬದ ಸುತ್ತ ಬಿಗಿಯಾಗಿ ಸುತ್ತಿಕೊಳ್ಳಲು ಆರಂಭಿಸಿದೆ.

ತೀವ್ರ ತಪಾಸಣೆಯ ನಂತರ, ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ನಟಿಯೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದ ದಿಲೀಪ್ ನನ್ನು ಬಂಧಿಸಿದ ನಂತರ, ಈಗ ಕೇರಳ ಪೊಲೀಸರ ಕಣ್ಣು, ಅವರ ಹೆಂಡತಿ, ಮಲಯಾಳಂ ನಟಿ ಕಾವ್ಯಾ ಮಾಧವನ್ ಮತ್ತು ಆಕೆಯ ತಾಯಿಯ ಮೇಲೆ ಬಿದ್ದಿದೆ.

ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ : ಆ ಮೆಗಾಸ್ಟಾರ್ ಯಾರು?

ಬಲ್ಲ ಮೂಲಗಳ ಪ್ರಕಾರ, ಈ ಇಡೀ ಪ್ರಕರಣದ ಪ್ರಮುಖ ಆರೋಪಿ, ಬಂಧಿತನಾಗಿರುವ ಪಲ್ಸರ್ ಸುನಿಯೊಂದಿಗೆ ಕಾವ್ಯಾ ಮಾಧವನ್ ಅವರಿಗೆ ಎಂಥ ವ್ಯವಹಾರವಿತ್ತು ಎಂಬ ಸಂಗತಿ ಕುರಿತು ಪೊಲೀಸರು ಕಾವ್ಯಾ ಮಾಧವನ್ ಮತ್ತು ಅವರ ತಾಯಿಯನ್ನು ಪ್ರಶ್ನೆಗೆ ಗುರಿಪಡಿಸಲಿದ್ದಾರೆ.

ಮಲಯಾಳಂ ನಟಿಯ ಲೈಂಗಿಕ ದೌರ್ಜನ್ಯದ ಹಿಂದೆ ಹಲವರ ಕೈವಾಡವಿದೆ, ಅಪಹರಿಸಲು ಪಿತೂರಿ ನಡೆಸಲಾಗಿತ್ತು, ಅಂಥವರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಮತ್ತೊಬ್ಬ ನಟಿ ಮಂಜು ವಾರಿಯರ್ ಅವರು ಘಟನೆ ನಡೆದ ಕೆಲವೇ ದಿನಗಳ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದರು.

ಖ್ಯಾತ ಮಲಯಾಳಂ ನಟಿಯ ಅಪಹರಣ, ಲೈಂಗಿಕ ಕಿರುಕುಳ?

ಈಗ ತನಿಖೆ ಮುಂದುವರಿದಂತೆ, ಒಬ್ಬೊಬ್ಬರ ಬಣ್ಣಗಳು ಬಯಲಾಗುತ್ತಿವೆ. ಈಗಾಗಲೆ ದಿಲೀಪ್ ಅವರು ಬಂಧಿತರಾಗಿದ್ದರೆ, ಕಾವ್ಯಾ ಮಾಧವನ್ ಮತ್ತು ಅವರ ತಾಯಿಯ ವಿಚಾರಣೆಯಿಂದ ಮತ್ತಷ್ಟು ಹುಳುಕುಗಳು ಹೊರಬೀಳುವ ನಿರೀಕ್ಷೆಯಿದೆ.

ಕಾವ್ಯಾ ಹೇಸರು ಕೇಳಿಬರಲು ಕಾರಣವೇನು?

ಕಾವ್ಯಾ ಹೇಸರು ಕೇಳಿಬರಲು ಕಾರಣವೇನು?

ಕಾವ್ಯಾ ಹೇಸರು ಕೇಳಿಬರಲು ಕಾರಣವೇನು?

ಕಾವ್ಯಾಗೆ ದೌರ್ಜನ್ಯದ ವಿಡಿಯೋ ಕೊಟ್ಟಿದ್ದನಾ ಸುನಿ?

ಕಾವ್ಯಾಗೆ ದೌರ್ಜನ್ಯದ ವಿಡಿಯೋ ಕೊಟ್ಟಿದ್ದನಾ ಸುನಿ?

ಸುನಿ ಬಾಯಿಯಿಂದಲೇ ಬಂದಿರುವ ಮಾಹಿತಿ ಪ್ರಕಾರ, ನಟಿಯ ಮೇಲೆ ಆರು ಜನ ದುರುಳರು ಚಲಿಸುತ್ತಿದ್ದ ವಾಹನದಲ್ಲಿ ನಡೆಸಿದ್ದ ಲೈಂಗಿಕ ದೌರ್ಜನ್ಯದ ವಿಡಿಯೋದ ಪ್ರತಿಯನ್ನು ಕಾವ್ಯಾ ಮಾಧವನ್ ಅವರ ಅಂಗಡಿಗೆ ಪಲ್ಸರ್ ಸುನಿ ಕೊಟ್ಟಿದ್ದ. ಇದಕ್ಕೆ ಪ್ರತಿಯಾಗಿ ಆತನಿಗೆ 2 ಲಕ್ಷ ರುಪಾಯಿಯನ್ನು ಸಂದಾಯ ಮಾಡಲಾಗಿತ್ತು.

ಲೈಂಗಿಕ ದೌರ್ಜನ್ಯ ಎಸಗಲು ಕೋಟಿ ದುಡ್ಡು?

ಲೈಂಗಿಕ ದೌರ್ಜನ್ಯ ಎಸಗಲು ಕೋಟಿ ದುಡ್ಡು?

ಮತ್ತೊಂದು ಮಾಹಿತಿ ಪ್ರಕಾರ, ಇತ್ತೀಚೆಗೆ ಕನ್ನಡದ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಮಲಯಾಳಂ ನಟಿಯನ್ನು ಅಪಹರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪಲ್ಸರ್ ಸುನಿಗೆ 1.5 ಕೋಟಿ ರುಪಾಯಿಯನ್ನು ದಿಲೀಪ್ ಅವರು ನೀಡಿದ್ದರು. ಹಿಂದೊಂದು ಕಾಲದಲ್ಲಿ ಇವರಿಬ್ಬರ ನಡುವೆಯೇ ಆತ್ಮೀಯ ಸಂಬಂಧವೂ ಇತ್ತು.

ಅನೈತಿಕ ಸಂಬಂಧ ಬಯಲಿಗೆಳೆದಿದ್ದ ಮಲಯಾಳಂ ನಟಿ

ಅನೈತಿಕ ಸಂಬಂಧ ಬಯಲಿಗೆಳೆದಿದ್ದ ಮಲಯಾಳಂ ನಟಿ

ಈಗ ಮದುವೆಯಾಗಿರುವ ಕಾವ್ಯಾ ಮಾಧವನ್ ಅವರ ಜೊತೆ ಅನೈತಿಕ ಸಂಬಂಧವಿದೆಯೆಂದು ದೌರ್ಜನ್ಯಕ್ಕೊಳಗಾಗಿರುವ ನಟಿ, ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್ ಅವರಿಗೆ ಕಿವಿಯೂದಿದ್ದರು. ಇದಕ್ಕಾಗಿ ಮಲಯಾಳಂ ನಟಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಲೀಪ್ ತಹತಹಿಸುತ್ತಿದ್ದರು. ಇದಕ್ಕೆ ಹೊರತಾಗಿ, ದಿಲೀಪ್ ಮತ್ತು ಮಲಯಾಳಂ ನಟಿಯ ನಡುವೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯವೂ ಇತ್ತು.

ಫೆಬ್ರವರಿ 17ರಂದು ಆಗಿದ್ದೇನು?

ಫೆಬ್ರವರಿ 17ರಂದು ಆಗಿದ್ದೇನು?

ಮಲಯಾಳಂ ನಟಿ ಫೆಬ್ರವರಿ 17ರಂದು ಚಿತ್ರೀಕರಣ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಅವರಿದ್ದ ಸಫಾರಿ ವಾಹನಕ್ಕೆ ಮತ್ತೊಂದು ವಾಹನಕ್ಕೆ ಗುದ್ದಲಾಗಿತ್ತು. ನಂತರ ನಟಿಯನ್ನು ಅಪಹರಿಸಿ ವಾಹನದಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಇದನ್ನು ಪಲ್ಸರ್ ಸುನಿ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದ. ನಂತರ, ಆ ಮೊಬೈಲ ಕಳೆದುಹೋಗಿದೆಯೆಂದು ಸುಳ್ಳು ಹೇಳಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala police are likely to inquire actress Kavya Madhavan, wife of Dileep, who has been arrested for adbuction and sexual harassment of famous Malayalam actress. It is believed that Pulsar Suni has handed over video of sexual harassment to Kavya Madhavan.
Please Wait while comments are loading...