ಹಸು ಸಾಯಿಸಿದ್ದಕ್ಕೆ ಕೇರಳದ ಎಂಟು ಯುವ ಕಾಂಗ್ರೆಸ್ಸಿಗರ ಬಂಧನ
ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ಕೇರಳದ ಕಣ್ಣೂರಿನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು.
ಕಣ್ಣೂರು (ಕೇರಳ), ಜೂನ್ 1: ಹಸುವೊಂದನ್ನು ಹತ್ಯೆ ಮಾಡಿದ್ದಕ್ಕಾಗಿ ಕೇರಳ ಪೊಲೀಸರು ಯುವ ಕಾಂಗ್ರೆಸ್ ನ 8 ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ಕೇರಳದ ಕಣ್ಣೂರಿನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹಸುವನ್ನು ಹತ್ಯೆಗೈಯುವ ಮೂಲಕ ತನ್ನ ಆಕ್ರೋಶವನ್ನು ಕೆಲ ಯುವ ಕಾಂಗ್ರೆಸ್ ಕಾರ್ಯಕರ್ತರು ಹೊರಹಾಕಿದ್ದರು.[ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 28 ಭಾನುವಾರದಂದು ಪ್ರಕರಣ ದಾಖಲಿಸಿಕೊಂಡಿದ್ದ ಕಣ್ಣೂರಿನ ಪೊಲೀಸರು, ಇಂದು 8 ಜನರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರಿಜಿಲ್ ಮುಕುಟ್ಟಿ, ಜೋಸಿ ಕಾಂಡಥಿಲ್, ಕೆ.ಶರಫುದ್ದಿನ್ ಮುಂತಾದವರೆಂದು ಗುರುತಿಸಲಾಗಿದೆ.
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ ಎಫ್ ಐ) ಸಹ ಗೋಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ತಿರುವನಂತಪುರಂ ನಲ್ಲಿ ಪ್ರತಿಭಟನೆ ನಡೆಸಿತ್ತು.












Click it and Unblock the Notifications