Oommen Chandy: ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ
ಬೆಂಗಳೂರು, ಜುಲೈ 18: ಕಾಂಗ್ರೆಸ್ ನಾಯಕ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ (73) ಅವರು ಬೆಂಗಳೂರಿನಲ್ಲಿ ನಿಧನರಾಗಿದರು. ವರ್ಷಗಳಿಂದಲೂ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮಂಗಳವಾರ ಉಸಿರು ಚೆಲ್ಲಿದ್ದಾರೆ.
ಉಮ್ಮನ್ ಚಾಂಡಿ ಅವರಿಗೆ ಕ್ಯಾನ್ಸ್‌ರ್ ಚಿಕಿತ್ಸೆ ನೀಡಲು ಬೆಂಗಳೂರಿನ ಚಿನ್ಮಯ ಆಸ್ಪ್ರೆತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಜುಲೈ 18ರಂದು ಬೆಳಗಿನ ಜಾವ 4.25ಕ್ಕೆಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಕೇರಳದ ರಾಜ್ಯದಲ್ಲಿ ಜೂನ್ 2004 ರಿಂದ 2006 ಹಾಗೂ 2011 ರಿಂದ 2016ರ ಅವಧಿಯಲ್ಲಿ ಕೇರಳದ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದವರು.
1943 ಅಕ್ಟೋಬರ್ 31ರಂದು ಜನಿಸಿದ ಅವರು, ಅವರು ಕೇರಳ ವಿದ್ಯಾರ್ಥಿ ಒಕ್ಕೂಟದ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. 1967 ರಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದರು. ಅಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿದ ಉಮ್ಮನ್ ಚಾಂಡಿ ಅವರು ನಂತರ 1969 ರಲ್ಲಿ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.
ಹತ್ತು ಭಾರಿ ಶಾಸಕರಾಗಿದ್ದರು
ಹೀಗೆ ರಾಜಕೀಯ ಪ್ರವೇಶಿಸಿದ ಅವರು, 1970 ರಲ್ಲಿ ಎದುರಾದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದರು. ಅಂದು ಅವರು ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಕ್ಷೇತ್ರ ಪ್ರತಿನಿಧಿಸಿ ಶಾಸಕರಾದರು. ಒಟ್ಟು 10 ಬಾರಿ ಶಾಸಕರಾಗಿದ್ದ ಉಮ್ಮನಚಾಂಡಿಯವರ ಜನಪರ ಆಡಳಿತ ನೀಡಿದ್ದಾರೆ.
1977ರಲ್ಲಿ ಕಾರ್ಮಿಕ ಸಚಿವರಾಗಿ ಮತ್ತು 1981ರಲ್ಲಿ ಗೃಹ ಸಚಿವರಾಗಿಯು ಅನುಭವ ಹೊಂದಿದ್ದ ಉಮ್ಮನ್ ಚಾಂಡಿ ಅವರು, 2011ರಲ್ಲಿ ಕೇರಳ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಉಮ್ಮನ್ ಚಾಂಡಿ ಯಾವಾಗಲೂ ಎಕೆ ಆಂಟನಿ ಪರ ನಿಲುವಿನವರು ಎನ್ನಲಾಗಿದೆ.












Click it and Unblock the Notifications