ಕೇರಳದಲ್ಲಿ 'ಗಂಭೀರ ಸ್ವರೂಪದ ಪ್ರಾಕೃತಿಕ ವಿಕೋಪ' ಘೋಷಣೆ: ಇದರ ಲಾಭವೇನು?
ನವದೆಹಲಿ, ಆಗಸ್ಟ್ 20 : ಕೇಂದ್ರ ಸರಕಾರವು ಕೇರಳದ ಪ್ರವಾಹ ಪರಿಸ್ಥಿತಿಯನ್ನು 'ಗಂಭೀರ ಸ್ವರೂಪದ ಪ್ರಾಕೃತಿಕ ವಿಕೋಪ' ಎಂದು ಘೋಷಣೆ ಮಾಡಿದೆ. ಹೀಗೆ ಘೋಷಣೆ ಮಾಡಿರುವುದರಿಂದ ದೇಶದ ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಉದಾರವಾಗಿಯೇ ದೇಣಿಗೆ ನೀಡಬಹುದಾಗಿದೆ.
The Union Government has declared the Kerala floods as a ‘calamity of a severe nature’. MPs from across the country can donate liberally from their MPLADS funds for providing relief pic.twitter.com/ppZaI3ynf1
— A. Surya Prakash (@mediasurya) 20 August 2018
ಈ ವಿಚಾರವನ್ನು ಪ್ರಸಾರ್ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಕೇರಳದಲ್ಲಿನ ಪ್ರವಾಹ ಸ್ಥಿತಿ, ಜೀವ ಹಾನಿ ಮತ್ತಿತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಘೋಷಣೆ ಮಾಡಲಾಗಿದೆ ಎಂದು ಕೇಂದ್ರ ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇರಳ ಪ್ರವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಐನೂರು ಕೋಟಿ ರುಪಾಯಿ ಏನೇನೂ ಸಾಲುವುದಿಲ್ಲ. ಇದನ್ನು ರಾಷ್ಟ್ರೀಯ ದುರಂತ ಎಂದು ಘೋಷಣೆ ಮಾಡಬೇಕು. ಕೇರಳದ ಜನರು ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹೆಚ್ಚು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.













Click it and Unblock the Notifications