ರನ್‌ವೇ ಮೇಲೆ ದೇವರ ಮೆರವಣಿಗೆ: ನ.1ಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣ 5 ತಾಸ್ ಬಂದ್

ತಿರುವನಂತಪುರಂ ಅಕ್ಟೋಬರ್ 31: ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಐದು ಗಂಟೆಗಳ ಕಾಲ ವಿಮಾನ ಸೇವೆ ಸ್ಥಗಿತಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆಗೂ ಮುನ್ನ ನವೆಂಬರ್ 1 ರಂದು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ.

''ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೂಲಕ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆಗಾಗಿ ಶತಮಾನಗಳ ಹಿಂದಿನ ಆಚರಣೆಯನ್ನು ಸುಗಮವಾಗಿ ಮುಂದುವರಿಸಲು 1ನೇ ನವೆಂಬರ್ 2022 ರಂದು ವಿಮಾನ ಸೇವೆಗಳನ್ನು 5 ಗಂಟೆಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ" ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿಕೆ ತಿಳಿಸಿದೆ.

ಈ ಅವಧಿಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಸೇವೆಗಳನ್ನು ಮರುಹೊಂದಿಸಲಾಗಿದೆ. ಜೊತೆಗೆ ನವೀಕರಿಸಿದ ಸಮಯಗಳು ಆಯಾ ವಿಮಾನಯಾನ ಸಂಸ್ಥೆಗಳಿಂದ ಲಭ್ಯವಿರುತ್ತವೆ ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ಹೇಳಿದೆ.

Kerala: Flight suspension at Thiruvananthapuram airport for 5 hours November 1

ಶತಮಾನದಷ್ಟು ಹಳೆಯದಾದ ವಿಷ್ಣು ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಆರಟ್ಟು ಮೆರವಣಿಗೆ ಮಾಡಲಾಗುತ್ತದೆ. ದೇವಾಲಯದ ಉತ್ತರಾಧಿಕಾರಿಗಳಾದ ಮಾಜಿ ತಿರುವಾಂಕೂರು ದೊರೆ ಮಾರ್ತಾಂಡ ವರ್ಮ ಅವರ ಕಾಲದಿಂದಲೂ ಈ ಪದ್ಧತಿಯನ್ನು ನಡೆಸಿಕೊಂಡು ಬರಲಾಗಿದೆ. ಅಂದಿನಿಂದ 1,000 ವರ್ಷಗಳಿಗೂ ಹೆಚ್ಚು ಕಾಲ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಲಾಗಿದೆ. ವಿಮಾನ ನಿಲ್ದಾಣ ಪ್ರತಿ ವರ್ಷ ಸಾಂಪ್ರದಾಯಿಕ ಆರಾಟ್ಟು ಮೆರವಣಿಗೆಯ ಸಮಯದಲ್ಲಿ ತನ್ನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆ.

ಈ ಮೆರವಣಿಗೆಯಲ್ಲಿ ವಿಷ್ಣುವಿನ ವಿಗ್ರಹವನ್ನು ತಿರುವನಂತಪುರಂನ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಶಂಕುಮುಖಂ ಬೀಚ್‌ಗೆ ಕೊಂಡೊಯ್ಯಲಾಗುತ್ತದೆ. 1932 ರಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಮೊದಲೇ ದೇವರಿಗೆ ಇಲ್ಲಿ ವರ್ಷಕ್ಕೆ ಎರಡು ಬಾರಿ 'ಪವಿತ್ರ ಸ್ನಾನ' ಮಾಡಿಸಲಾಗುತ್ತದೆ. ಮೊದಲು ಮಾರ್ಚ್ ಮತ್ತು ಏಪ್ರಿಲ್ ನಡುವೆ ಪಂಗುನಿ ಹಬ್ಬದಲ್ಲಿ ವಿಷ್ಣುವಿನ ವಿಗ್ರಹಕ್ಕೆ ಸ್ನಾನ ಮಾಡಿಸಲಾಗುತ್ತದೆ. ನಂತರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಲ್ಫಾಸಿ ಆಚರಿಸುವ ವೇಳೆ ಈ ಪದ್ಧತಿ ನೆರವೇರಿಸುವುದು ರೂಢಿಯಲ್ಲಿದೆ.

Kerala: Flight suspension at Thiruvananthapuram airport for 5 hours November 1

ಈ ಸಮಯದಲ್ಲಿ ವಿಮಾನ ನಿಲ್ದಾಣವು ಏರ್‌ಮೆನ್‌ಗಳಿಗೆ (NOTAM) ವಿಮಾನ ಹಾರಾಟ ಸ್ಥಗಿತಗೊಳಿಸಲು ಸೂಚನೆಯನ್ನು ನೀಡುತ್ತದೆ. ಮೆರವಣಿಗೆಯಲ್ಲಿ ನೂರಾರು ಜನರು ಮತ್ತು ಅಲಂಕಾರಗೊಂಡ ನಾಲ್ಕು ಆನೆಗಳು ಗರುಡ ವಾಹನಗಳಲ್ಲಿ ಪದ್ಮನಾಭಸ್ವಾಮಿ, ನರಸಿಂಹ ಮೂರ್ತಿ ಮತ್ತು ಕೃಷ್ಣ ಸ್ವಾಮಿಗಳ ಉತ್ಸವ ವಿಗ್ರಹವನ್ನು ಹೊತ್ತುಕೊಂಡು ಪುರೋಹಿತರೊಂದಿಗೆ ಈ ಉದ್ದದ ರನ್‌ವೇ ಮೂಲಕ ಶಂಕುಮುಖಂ ಬೀಚ್ಗೆ ತೆರಳುತ್ತದೆ.

ಈ ಕಡಲತೀರದಲ್ಲಿ ಸ್ನಾನದ ನಂತರ, ವಿಗ್ರಹಗಳನ್ನು ಸಾಂಪ್ರದಾಯಿಕ ಪಂಜುಗಳಿಂದ ಗುರುತಿಸಲಾದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ, ಇದು ಉತ್ಸವದ ಮುಕ್ತಾಯವನ್ನು ಸೂಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+