ಜಂಕ್ ಫುಡ್‌ಗಳ ಮೇಲೆ ಕೇರಳದಲ್ಲಿ ಶೇ 14ರಷ್ಟು fat tax

By: ಮೈತ್ರೇಯಿ
Subscribe to Oneindia Kannada

ತಿರುವನಂತಪುರಂ, ಜುಲೈ 09 : ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದವುಗಳನ್ನು ಸರಬರಾಜು ಮಾಡುವ ರೆಸ್ಟೋರೆಂಟ್‌ಗಳಿಗೆ ಕೊಬ್ಬು ದರ (fat tax) ಹಾಕಲು ಕೇರಳ ಸರ್ಕಾರ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ನಿರ್ಧಾರವನ್ನು ಕೈಗೊಂಡ ಮೊದಲ ರಾಜ್ಯ ಕೇರಳ.

ಕೇರಳದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಎಲ್‌ಡಿಎಫ್ ಸರ್ಕಾರ ಜುಲೈ 8ರ ಶುಕ್ರವಾರ ಬಜೆಟ್ ಮಂಡನೆ ಮಾಡಿದೆ. ಇದರದಲ್ಲಿ ಶೇ 14.5ರಷ್ಟು fat tax ಜಾರಿಗೆ ತರುವ ಘೋಷಣೆ ಮಾಡಿದೆ. ಈ ತೆರಿಗೆಯಿಂದಾಗಿ ವಾರ್ಷಿಕ 10 ಕೋಟಿ ರೂ.ಗಳ ಆದಾಯವನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ. [ಮೈಸೂರ್ ಪಾಕ್ ಜನ್ಮ ತಾಳಿದ ಸವಿಯಾದ ಕಥೆ]

food

ಪಿಜ್ಜಾ, ಬರ್ಗರ್, ಪಾಸ್ತಾ ಮುಂತಾದವುಗಳನ್ನು ಸರಬರಾಜು ಮಾಡುವ ರೆಸ್ಟೋರೆಂಟ್‌ಗಳಿಗೆ ಈ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಮ್ಯಾಕ್‌ ಡೊನಾಲ್ಡ್‌ ನಂತಹ ಕಂಪನಿಗಳಿಗೆ ಹೊರೆ ಬೀಳಲಿದ್ದು, ಅದನ್ನು ಕಂಪನಿಗಳು ಜನರ ಮೇಲೆ ಹೇರುವ ಸಾಧ್ಯತೆಯೂ ಇದೆ. [ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು?]

ಸಾಮಾಜಿಕ ಜಾಲ ತಾಣಗಳಲ್ಲಿ ಸರ್ಕಾರದ ನಿರ್ಧಾರವನ್ನು ವ್ಯಂಗ್ಯ ಮಾಡಲಾಗುತ್ತಿದೆ. #FatTax ಹ್ಯಾಷ್ ಟ್ಯಾಗ್ ಬಳಸಿ ಹಲವು ಜನರು ಟ್ವಿಟ್ ಮಾಡುತ್ತಿದ್ದಾರೆ. ಕೆಲವು ಟ್ವಿಟ್‌ಗಳು ಇಲ್ಲಿವೆ..... [ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]


ಇನ್ ಪುಟ್ ಔಟ್ ಪುಟ್ ಎರಡಕ್ಕೂ ತೆರಿಗೆ

ಜನರ ಹಣ ದೋಚಲು ಹೊಸ ತಂತ್ರ

ಸಿನಿಮಾಕ್ಕೂ ತೆರಿಗೆ ಹಾಕಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bad news for the junk food lovers in the state of Kerala. A first-of-its-kind move in the country, the Kerala government decided to impose a 14.5 per cent 'fat tax' on burgers, pizzas, tacos, sandwiches, doughnuts and pasta served in restaurants.
Please Wait while comments are loading...