Covid-19 Wave in Kerala: ಕೇರಳದಲ್ಲಿ 10 ದಿನದಲ್ಲಿ ಮೂರು ಬಲಿ, ಅಲೆ ತೀವ್ರವಾಗಲಿದೆ: ತಜ್ಞರು ಹೇಳಿದ್ದೇನು?
ತಿರುವನಂತಪುರಂ, ಡಿಸೆಂಬರ್ 13: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಭೀತಿ ಸೃಷ್ಟಿಸಿದ್ದರ ಮಧ್ಯೆ ಇದೀಗ ಕೋವಿಡ್ ನಿಂದಾದ ಸಾವುಗಳು ಜನರನ್ನು ಭಯಬೀತಗೊಳಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ ಕಳೆದ ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆ ಏರಿಗತಿಯಲ್ಲಿದೆ ಎಂಬುದು ಗೊತ್ತಾಗಿದೆ.
ಕೇರಳದಲ್ಲಿ ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಮೂರು ಕೊರೊನಾ ಕಾರಣದಿಂದ ಸಾವುಗಳ ಸಂಭವಿಸಿವೆ. ಕೋವಿಡ್ ತಪಾಸಣೆ ಕಡಿಮೆಯಾಗಿದ್ದರೂ ಸಹ ಸಾವುಗಳಲ್ಲಿ ಮಂದ ಏರುಗತಿ ಇದೆ. ಅಂತ್ಯಕ್ರಿಯೆಯ ವೇಳೆ ಕೋವಿಡ್ ಸಂತ್ರಸ್ತರ ಕುಟುಂಬಗಳು ಪ್ರೋಟೋಕಾಲ್ ಅನುಸರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ರಾಜ್ಯದ ಪತ್ತನಂತಿಟ್ಟದ ಕುಂಬನಾಡ್ ನಿವಾಸಿ ಅಲೆಕ್ಸ್ ವರ್ಗೀಸ್ (70) ಅವರು ಭಾನುವಾರ ಕೋವಿಡ್‌ನಿಂದ ನಿಧನರಾದರು. ಅಲೆಕ್ಸ್ ಹೃದ್ರೋಗಿಯಾಗಿದ್ದು, ಅವರ ಮಗ ಆರೋಗ್ಯ ಕಾರ್ಯಕರ್ತನಿಂದ ಸೋಂಕಿಗೆ ಒಳಗಾದ್ದಾರೆ. ಇವರು ಅಗತ್ಯ ಕೋವಿಡ್ ಡೋಸ್‌ಗಳನ್ನು ಪಡೆದಿದ್ದರೂ ಸಹಿತ ರೋಗದ ಲಕ್ಷಣಗಳು ಕಂಡು ಬಂದಿದ್ದವು. ಆದರೆ ಕೊಮೊರ್ಬಿಡಿಟಿಗಳು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತ್ತು. ಎರಡು ದಿನ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾಗಿದ್ದಾರೆ.
ಕೋವಿಡ್ ಏರಿಕೆ, ಸಾವು ಬಗ್ಗೆ ಆರೋಗ್ಯ ಸಚಿವೆ ಪ್ರತಿಕ್ರಿಯೆ
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕೇರಳವು ಕೋವಿಡ್ ವಿರುದ್ಧ ನಿಗಾ ಇಡುವುದನ್ನು ಮುಂದುವರಿಸಿದ್ದೇವೆ. ಕೋವಿಡ್ ತಪಾಸಣೆಗಳನ್ನು ಕಡಿಮೆ ಮಾಡಿಲ್ಲ. ರೋಗದ ಲಕ್ಷಣದ ಕಂಡು ಬರುತ್ತಿದ್ದಂತೆ ಆಸ್ಪತ್ರೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಕಳೆದ ವರ್ಷ ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ನ್ಯುಮೋನಿಯಾ ಹೆಚ್ಚಾದಾಗ ನಾವು ಜಾಗೃತರಾಗಿದ್ದೇವೆ ಎಂದು ಅವರು ಸರ್ಕಾರ ನಡೆ ಸಮರ್ಥಿಸಿಕೊಂಡಿದ್ದಾರೆ.

ಕೊರೊನಾ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಯನ್ನು ಕೈಗೊಳ್ಳಲು ನಿರ್ದೇಶಿಸಲಾಗಿದೆ. ಕಳೆದ ವರ್ಷ ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ನ್ಯುಮೋನಿಯಾ ಹೆಚ್ಚಾದಾಗ ನಾವು ಜಾಗೃತರಾಗಿದ್ದೇವೆ. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಮತ್ತು ಕೊಮೊರ್ಬಿಡಿಟಿ ಹೊಂದಿರುವ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಸಾವುಗಳು ಕೋವಿಡ್‌ನಿಂದಾಗಿ ಅಲ್ಲ ಅಂತಲೂ ಅವರು ತಿಳಿಸಿದ್ದಾರೆಂದು ವರದಿ ಆಗಿದೆ.
ಓಮಿಕ್ರಾನ್ ಆರ್ಭಟ ಹೆಚ್ಚಳ ಸಾಧ್ಯತೆ
ಕೇಳರದಲ್ಲಿ ಇತ್ತೀಚಿನ ಕೋವಿಡ್ ವೇರಿಯಂಟ್ ಓಮಿಕ್ರಾನ್‌ನ ಉಪ-ವ್ಯತ್ಯಯಗಳ ಕಾರಣದಿಂದ ಅನಾರೋಗ್ಯ ಸೃಷ್ಟಿಯಾಗಿದೆ. ಲಕ್ಷಣವುಳ್ಳವರ ಮಾದರಿ ಸಂಗ್ರಹಿಸಿ ಜೀನೋಮಿಕ್ ಪರೀಕ್ಷೆಯ ಮೂಲಕ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ.
ಇತ್ತೀಚಿನ ಪ್ರಕರಣಗಳಲ್ಲಿ ಕೋವಿಡ್ ಸಾವುಗಳು ಹೆಚ್ಚಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ದಿನನಿತ್ಯದ ಪ್ರಕರಣಗಳ ಸಂಖ್ಯೆ ಒಂದು ತಿಂಗಳಲ್ಲಿ 12 ರಿಂದ 150 ಕ್ಕೆ ಏರಿಕೆ ಆಗಿದೆ. ಕೇರಳದಲ್ಲಿ ನೆನ್ನೆ ಮಂಗಳವಾರ 128 ಹೊಸ ಪ್ರಕರಣಗಳು ವರದಿ ಆಗಿವೆ. ಸಕ್ರಿಯ ಪ್ರಕರಣಗಳಲ್ಲಿಯೂ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು ಕೇರಳದಲ್ಲಿ 1,000 ಹತ್ತಿರದಲ್ಲಿದೆ.
ಕೋವಿಡ್ ಇನ್ನಷ್ಟು ತೀವ್ರಗೊಳ್ಳಲಿದೆ
ಭಾರತದಲ್ಲಿ ಈ ತಿಂಗಳು ದೇಶದಲ್ಲಿ ಸಂಭವಿಸಿದ 8 ಕೋವಿಡ್ ಸಾವುಗಳಲ್ಲಿ ಮೂರು ಕೇರಳದ್ದಾಗಿದೆ. ಕೋವಿಡ್ ಸಾವಿನ ನಿಖರವಾದ ಚಿತ್ರಣವನ್ನು ಪಡೆಯಲು ಇನ್ನೂ 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸದ್ಯದ ಕೋವಿಡ್ ಅಲೆ ತೀವ್ರಗೊಳ್ಳಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಎನ್ ಸಿ.ಕೃಷ್ಣಪ್ರಸಾದ್ ಮಾಹಿತಿ ನೀಡಿದ್ದಾರೆ.












Click it and Unblock the Notifications