ಕೇರಳದಲ್ಲಿ 12 ಉಗ್ರರಿದ್ದಾರೆ: interpol ಘೋಷಣೆ

ಆತಂಕಕಾರಿ ವಿಷಯವೆಂದರೆ ಇಂಟರ್ ಪೋಲ್ ಸಂಸ್ಥೆಗೆ ಅತ್ಯಗತ್ಯವಿರುವ 12 ಭಯೋತ್ಪಾದಕರು ಕೇರಳದಲ್ಲಿದ್ದಾರಾದರೂ ಅವರ ಅಡಗುದಾಣ ಯಾವುದು ಎಂಬುದು ಪತ್ತೆಯಾಗಿಲ್ಲ. ಆದರೆ ಇವರೆಲ್ಲ ಎರ್ನಾಕುಲಂ ಮೂಲಸ್ಥರು.
ಸಿಬಿಐ ಪ್ರಕಾರ 19 ಮಂದಿ ಉಗ್ರರು ಕೇರಳದಲ್ಲಿದ್ದಾರೆ. ಇವರ ವಿರುದ್ಧ Interpol red corner ಸಹ ಜಾರಿಗೊಳಿಸಲಾಗಿದೆ. ಆದರೆ ಅವರು ಯಾರೂ ಇದುವರೆಗೂ ಪತ್ತೆಯಾಗಿಲ್ಲ.
{ಭಯೋತ್ಪಾದನೆ ಚಟುವಟಿಕೆಗೆ ಕೇರಳ ಹೆಚ್ಚು ಪ್ರಶಸ್ತ: ಭಟ್ಕಳ}
ಆದರೆ ಭಯೋತ್ಪಾದನೆ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇಂಟರ್ ಪೋಲ್ ಸಂಸ್ಥೆ ಪ್ರಕಟಿಸಿರುವ 12 ಮಂದಿ ಭಯೋತ್ಪಾದಕರ ಪಟ್ಟಿಯಲ್ಲಿ ಅವರ ಭಾವಚಿತ್ರಗಳೇ ಇಲ್ಲ. ಅಥವಾ ವೈಯಕ್ತಿಕ ವಿವರಗಳೂ ಇಲ್ಲ. ಸ್ಥಳೀಯ ಪೊಲೀಸರು ಮತ್ತು ವಿಶೇಷ ತನಿಖಾ ದಳಗಳು ನೀಡಿರುವ ವಿವರಗಳಷ್ಟೇ ದಾಖಲಾಗಿವೆ. ಈ ಭಯೋತ್ಪಾದಕರ ಜನ್ಮಸ್ಥಳ ಮತ್ತು ಅವರು ಭಾಗಿಯಾಗಿರುವ ಭಯೋತ್ಪಾದಕ ಚಟುವಟಿಕೆಗಳ ವಿವರವಷ್ಟೇ ನಮೂದಾಗಿವೆ.
ಆತಂಕದ ವಿಷಯವೆಂದರೆ ಈ ಉಗ್ರರು ದೇಶದಲ್ಲಿ ಇನ್ನೂ ಚಲಾವಣೆಯಲ್ಲಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಹೊಂಚುಹಾಕುತ್ತಿದ್ದಾರೆ ಎಂದು ಸಿಬಿಐ ಮೂಲಗಳು ಹೇಳಿವೆ. [ದಕ್ಷಿಣ ಭಾರತದ ಮೇಲೆ ಉಗ್ರರ ಕಣ್ಣು ಬಿದ್ದಿದೆ]
Interpol red corner ಪಟ್ಟಿಯಲ್ಲಿರುವ ಪ್ರಮುಖ ಉಗ್ರರು:
ಚೆನ್ನಪರಾಂಬಿಲ್ ಮೊಹಮದ್ ಬಷೀರ್, ಅಳುವಾ, ಕದಪ್ಪುರಂ ಶಿಹಾಬ್, ಕಾಸರಗೋಡ್, ಕರೀಂಬೇರಿಪಾಡಿ ನಜೀಬ್, ಎರ್ನಾಕುಲಂ, ಕೋಚುಪೀಡಿಕಯೀಲ್ ಸಬೀರ್, ಮರಕ್ಕರಕಂಡಿ, ಕಣ್ಣೂರು, ಕೊಟ್ಟಾ ಅಬ್ದುಲ್ ಸಬೂರ್, ಮರಂಗಟ್ಟು ನಸಾರ್, ಎರ್ನಾಕುಲಂ ಮೊಹಮದ್ ಅಷಾರ್, ಕೊಳವಲ್ಲೂರು, ತಲಷೇರಿ, ಮುದಸ್ಸೇರಿ ಸವಾದ್, ಪಿಪಿ ಯೂಸುಫ್, ಕೊಯ್ಯಂ, ತಲಿಪರಂಬ, ಪೊಟ್ಟಿಂಕಲ್ ಸುಹೇಬ್, ಪತಿಯನ್ನು ಕೊಂದ ತಮಿಳುನಾಡಿನ ಡಾ. ಎದಾದನ್ ಒಮಾನಾ ಇನ್ನೂ ಮುಂತಾದವರು.
{ ಚಿತ್ತೂರು ಉಗ್ರರು ಬೆಂಗಳೂರಿಗೆ; ಜತೆಗೆ ಭಟ್ಕಳನೂ }











Click it and Unblock the Notifications