ನಟ ದಿಲೀಪ್ ಕಾಲಿಟ್ಟ ಕೂಡಲೆ ತಿರುಗಿ ಬಿದ್ದ ನಟಿಮಣಿಯರು
ಕೊಚ್ಚಿ, ಜೂನ್ 28: ಜನಪ್ರಿಯ ನಟಿ ಮೇಲಿನ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ದಿಲೀಪ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕೇರಳದ ನಟ, ನಟಿಯರ ಸಂಘದಿಂದ ನಿಷೇಧಕ್ಕೊಳಗಾಗಿದ್ದ ದಿಲೀಪ್ ರನ್ನು ಮತ್ತೊಮ್ಮೆ ಸಂಘಕ್ಕೆ ಕರೆ ತರುವ ಬಗ್ಗೆ ಮಾತುಕತೆ ಆರಂಭವಾಗುತ್ತಿದ್ದಂತೆ ಸಂಘದ ಮಹಿಳಾ ಸದಸ್ಯರು ಕೆರಳಿದ್ದಾರೆ.
ದಿಲೀಪ್ ಸೇರ್ಪಡೆ ಬಗ್ಗೆ ತಿಳಿಯುತ್ತಿದ್ದಂತೆ, ನಾಲ್ವರು ನಟಿಯರು ಕೇರಳದ ಸಿನೆಮಾ ಕಲಾವಿದರ ಸಂಘಟನೆAssociation of Malayalam Movie Artistes 'ಅಮ್ಮಾ'ಕ್ಕೆ ರಾಜೀನಾಮೆ ನೀಡಿದ್ದಾರೆ
ರಮ್ಯಾ ನಂಬೀಸನ್, ರಿಮಾ ಕಲ್ಲಿಂಗಲ್, ಗೀತು ಮೋಹನ್‍ದಾಸ್ ರಾಜೀನಾಮೆ ನೀಡಿದ ನಟಿಯರಾಗಿದ್ದಾರೆ. ನಟಿಗೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದಿಲೀಪ್‍ರನ್ನು 'ಅಮ್ಮಾ'ಗೆ ಮರಳಿ ಸೇರಿಸುವ ನಿರ್ಧಾರವನ್ನು ವಿರೋಧಿಸಿದ್ದಾರೆ.

ಆದರೆ, ನಟಿಯನ್ನು ಬೆಂಬಲಿಸುತ್ತಿರುವ ನಟಿ ಮಂಜು ವಾರಿಯರ್ ಹಾಗು ಪಾರ್ವತಿ 'ಅಮ್ಮಾ' ಸಂಘಟನೆಗೆ ಈವರೆಗೂ ರಾಜೀನಾಮೆ ನೀಡಿಲ್ಲ
'ಆರೋಪಿ ನನಗೆ ನಟನೆಯ ಅವಕಾಶವಿಲ್ಲದಂತೆ ಮಾಡಿದ್ದಾನೆ. ಅಂದು ಈ ಕುರಿತು ದೂರು ನೀಡಿದಾಗ ಸಂಘಟನೆ ಆತನ ವಿರುದ್ಧ ಸರಿಯಾದ ಕ್ರಮ ಜರಗಿಸಲು ವಿಫಲವಾಗಿತ್ತು ಎಂದು ನಟಿ ಹೇಳಿಕೊಂಡಿದ್ದಾರೆ.
ಇಷ್ಟು ಕೆಟ್ಟ ಅನುಭವ ನನ್ನ ಜೀವನದಲ್ಲಿ ನಡೆದಿರುವಾಗ, ತಾನೂ ಇರುವ ಸಂಘಟನೆ ಆರೋಪಿ ವ್ಯಕ್ತಿಯನ್ನು ಸಂರಕ್ಷಿಸಲು ಬಹಳಷ್ಟು ಶ್ರಮಿಸಿದೆ. ಇನ್ನು ಕೂಡಾ ಈ ಸಂಘಟನೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎಂದು ಮನಗಂಡು ರಾಜೀನಾಮೆ ನೀಡುತ್ತಿರುವುದಾಗಿ" ನಟಿ ಹೇಳಿದ್ದಾರೆ.
ಕಿರುಕುಳಕ್ಕೊಳಗಾಗಿರುವ ನಟಿಗೆ ಬೆಂಬಲ ಸೂಚಿಸಿ ನಟಿಯರಾದ ರಮ್ಯಾ ನಂಬೀಸನ್, ರಿಮಾ ಕಲ್ಲಿಂಗಲ್, ಗೀತು ಮೋಹನ್‍ದಾಸ್ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಜುಲೈ 13 ಅಥವಾ 14ರಂದು ತುರ್ತು ಸಭೆ ಕರೆದು ಈ ಬಗ್ಗೆ ನಿರ್ಧರಿಸುವಂತೆ ರೇವತಿ ಆಶಾ ಕೆಲುನ್ನಿ, ಪದ್ಮಪ್ರಿಯ ಜಾನಕಿರಾಮನ್ ಹಾಗೂ ಎ ಪಾರ್ವತಿ ಅವರು ಅಮ್ಮಾಗೆ ಪತ್ರ ಬರೆದಿದ್ದಾರೆ. ಆದರೆ, ಅಮ್ಮಾದ ಪ್ರಧಾನ ಕಾರ್ಯದರ್ಶಿ ಎಡವೆಲಾ ಬಾಬು ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿಲ್ಲ.
ನಟಿ ಕಿರುಕುಳ ಘಟನೆ ಬಳಿಕ ದಿಲೀಪ್ ರನ್ನು ಸಂಘದಿಂದ ಹೊರ ಹಾಕುವಂತೆ ಸೂಚಿಸಿದ್ದ ಸೂಪರ್ ಸ್ಟಾರ್ ಮಮ್ಮೂಟಿ ಅವರು ಈಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications