Kerala Blast: ಸಭೆ ನಡೆಯುತ್ತಿದ್ದ ಕೇಂದ್ರದಲ್ಲಿ ಸರಣಿ ಸ್ಫೋಟ, ಘಟನೆಯ ಪೂರ್ಣ ವಿವರ
ಬೆಂಗಳೂರು, ಅಕ್ಟೋಬರ್ 29: ಕೇರಳ ರಾಜ್ಯದಲ್ಲಿ ಎರ್ನಾಕುಲಂ ಕೇವಲ ಐದೇ ಸೆಕೆಂಡ್‌ಗಳ ಅಂತರದಲ್ಲಿ ಬೆಚ್ಚಿ ಬೀಳಿಸುವ ಸರಣಿ ಸ್ಪೋಟ ಭಾನುವಾರ ಸಂಭವಿಸಿದೆ. ಒಟ್ಟು ನಾಲ್ಕು ಕಡೆಗಳಲ್ಲಿ ಸ್ಪೋಟ ಸಂಭವಿಸಿದೆ. ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದು, ಒಟ್ಟು ಸುಮಾರು 24 ಮಂದಿ ಗಾಯಗೊಂಡಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿನ ಕಲಮ್‌ಸ್ಸೆರಿ ಕನ್ವೆಂಷನ್ ಸೆಂಟರ್ ನಲ್ಲಿ ಸರಣಿ ಸ್ಟೋಟ ಸಂಭವಿಸಿದೆ. ಈ ಕೇಂದ್ರದಲ್ಲಿ 'ಯೆಹೋವನ ಶಕ್ತಿ' ಹೆಸರಿನ ಭಕ್ತರ ಸಭೆಯಲ್ಲಿ ಸಾವಿವರಾರು ಮಂದಿ ಪಾಲ್ಗೊಂಡಿದ್ದರು. ಇಂತಹ ಸಾರ್ವಜನಿಕ ಸ್ಥಳದಲ್ಲಿ ಇಂತದ್ದೊಂದು ಸ್ಪೋಟ ನಾಲ್ಕು ಬಾರಿ ಸರಣಿಯಾಗಿ ನಡೆದಿದೆ. ಇಂದು ಬೆಳಗ್ಗೆ 9.30ರ ನಂತರ ಜರುಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಸರಣಿ ಸ್ಪೋಟ ಸಂಭವಿಸುತ್ತಿದ್ದಂತೆ ಜನರು ಜೀವ ಉಳಿಸಿಕೊಳ್ಳಲು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲ (ಫಾರೆನ್ಸಿಕ್) ತಂಡದವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ. ಆರಂಭಿಸಿದ್ದಾರೆ.
ಪೂರ್ವ ನಿಯೋಜಿತ ಕೃತ್ಯ?
ಮೇಲ್ನೋಟಕ್ಕೆ ಈ ಸರಣಿ ಸ್ಫೋಟವು ದುರುದ್ದೇಶ ಪೂರ್ವಕವಾಗಿಯೇ ನಡೆಸಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಅಧಿಕಾರಿಗಳು ಶಂಕಿಸಲಾಗಿದೆ. ಸದ್ಯ ಘಟನೆ ಹಿಂದೆ ಯಾರ ಕೈವಾಡವಿದೆ ಎಂಬ ಮಾಹಿತಿ ಲಭ್ಯವಾಗಬೇಕಿದೆ.
ಒಬ್ಬ ವ್ಯಕ್ತಿ ಸುಟ್ಟು ಕರಕಲಾಗಿದ್ದಾರೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಕಲಮಸ್ಸೆರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಲಮ್‌ಸ್ಸೆರಿ ಕನ್ವೆಂಷನ್ ಸೆಂಟರ್ ಹೊತ್ತಿ ಉರಿದಿದ್ದು, ಸುತ್ತಮುತ್ತಲಿನ ಜನರು ಭಯಬೀತರಾಗಿದ್ದಾರೆ.

ಸ್ಫೋಟವಾಗುತ್ತಿದ್ದಂತೆ ಕನ್ವೆನ್ಷನ್ ಸೆಂಟರ್‌ನೊಳಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಇದನ್ನು ಕಂಡು ಹಾಲ್‌ನಲ್ಲಿದ್ದ ಜನರು ಜನರು ಭಯದಿಂದ ಕಿರುಚುತ್ತಲೇ ಹೊರ ಓಡಿದರು. ಕೆಲವೇ ನಿಮಿಷಗಳಲ್ಲಿ ಸೆಂಟರ್ ಸುತ್ತಮುತ್ತ ಜನರು ಜಮಾಯಿಸಿದರು.
ವೈದ್ಯರ ರಜೆ ರದ್ದು, ಕೆಲಸಕ್ಕೆ ಮರಳಲು ಸಚಿವರ ಸೂಚನೆ
ರಜೆಯಲ್ಲಿರುವ ವೈದ್ಯರು ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಕೂಡಲೇ ಹಿಂತಿರುಗುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಕಲಮಸ್ಸೆರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಅವರು ನಿರ್ದೇಶಿಸಿದ್ದಾರೆ.
ಸ್ಫೋಟದ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ತಿಳಿಸಿರುವ ಕೈಗಾರಿಕಾ ಸಚಿವ ಮತ್ತು ಕಲಮಶ್ಶೇರಿ ಶಾಸಕ ಪಿ ರಾಜೀವ್, ನಾನು ಎಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಎಲ್ಲಾ ನಿರ್ದೇಶನಗಳನ್ನು ನೀಡಲಾಗಿದೆ, ನಾವು ಕಾರಣವನ್ನು ಗುರುತಿಸಬೇಕಾಗಿದೆ. ಎಲ್ಲಾ ಪರಿಶೀಲನೆಗಳನ್ನು ಮಾಡೋಣ. ಪೂರ್ಣಗೊಳಿಸಲಾಗುವುದು. ಸದ್ಯಕ್ಕೆ ಯಾರನ್ನೂ ಸ್ಥಳದ ಸಮೀಪಕ್ಕೆ ಅನುಮತಿಸಲಾಗುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸದ್ಯ ತನಿಖಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ನಿಖರ ಕಾರಣ ತಿಳಿಯಲು ಮುಂದಾಗಿದ್ದಾರೆ. ಆದಷ್ಟು ಶೀಘ್ರವೇ ಸ್ಫೋಟಕ್ಕೆ ಕಾರಣಗಳೇನು ಎಂದು ಅಧಿಕೃತ ಮಾಹಿತಿ ಲಭ್ಯವಾಗಲಿದೆ.












Click it and Unblock the Notifications