ಕೇರಳ: ಮಲಪ್ಪುರಂ ಕಲೆಕ್ಟರೇಟ್ ಕಚೇರಿ ಬಳಿ ಸ್ಫೋಟ!

Posted By:
Subscribe to Oneindia Kannada

ತಿರುವನಂತಪುರಂ, ನವೆಂಬರ್ 01: ಕರ್ನಾಟಕದಂತೆ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕೇರಳದಲ್ಲಿ ಬಾಂಬ್ ಸ್ಫೋಟದ ಘಟನೆ ವರದಿಯಾಗಿದೆ.

ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಬಾಂಬ್ ಸ್ಫೋಟ ಘಟನೆ ಮಂಗಳವಾರ ನಡೆದಿದೆ.

Kerala Blast near Malappuram collectorate office

ಜಿಲ್ಲಾ ವೈದಾಧಿಕಾರಿ(ಹೋಮಿಯೋಪತಿ) ಕಚೇರಿ ಬಳಿ ಕಾರು ನಿಲ್ಲಿಸಲಾಗಿತ್ತು. ಸ್ಫೋಟಗೊಂಡ ಕಾರಿನ ಬಳಿ ಬ್ರೀಫ್ ಕೇಸ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ, ಶ್ವಾನದಳ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Kerala Blast near Malappuram collectorate office

ಈ ಘಟನೆ ನಂತರ ಕೆಲ ಕಾಲ ಆತಂಕದ ವಾತಾವರಣೆ ಉಂಟಾಗಿತ್ತು. ಆದರೆ, ಈಗ ಪರಿಸ್ಥಿತಿ ತಿಳಿಗೊಂಡಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನಾ ಸ್ಥಳದಲ್ಲಿ ಗನ್ ಪೌಡರ್ ವಾಸನೆ ಬಂದಿದೆಯಂತೆ. ಘಟನೆಗೆ ಅಲ್ ಉಮ್ಮಾ ಸಂಘಟನೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

Kerala Blast near Malappuram collectorate office

ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ಮೂರು ಕಾರುಗಳು ಜಖಂಗೊಂಡಿವೆ. ಕಳೆದ ಜೂನ್ ತಿಂಗಳಿನಲ್ಲಿ ಕೊಲ್ಲಂ ಕಲೆಕ್ಟರೇಟ್ ಕಚೇರಿ ಆವರಣದಲ್ಲೂ ಇಂಥದ್ದೇ ಸ್ಫೋಟ ಸಂಭವಿಸಿತ್ತು. ಶೆವರ್ಲೆ ಕಾರಿನ ಮಾಲೀಕ ಜಿಲ್ಲಾ ಮೆಡಿಕಲ್ ಅಧಿಕಾರಿ ರೆಜಿ ಕುಳಿಯೆಲ್ಲಿಲ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಟಿಫನ್ ಬಾಕ್ಸ್ ಇಟ್ಟು ಸ್ಫೋಟಿಸಲಾಗಿದೆ ಎಂಬ ಮಾಹಿತಿಯೂ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala: A car parked near the Malappuram collectorate office caught fire in a blast on Tuesday(November 01).A suitcase has been found near the spot.
Please Wait while comments are loading...