ವಿದ್ಯಾರ್ಥಿನಿಗಳ ಮುಂದೆ ಗುಪ್ತಾಂಗ ತೋರಿಸಿದ ಆ ನಟ?

Posted By:
Subscribe to Oneindia Kannada

ಪಾಲಕ್ಕಾಡ್, ಸೆಪ್ಟೆಂಬರ್ 01: ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಶಾಲಾ ಮಕ್ಕಳ ಮುಂದೆ ತನ್ನ 'ಗುಪ್ತಾಂಗ' ಪ್ರದರ್ಶನ ಮಾಡಿದ ಆರೋಪ ಹೊರೆಸಲಾಗಿದೆ. ಆದರೆ, ಆರೋಪವನ್ನು ನಟ ಅಲ್ಲಗೆಳೆದಿದ್ದಾರೆ.

ಪಾಥಿರಿಪ್ಪಾಲಂ ಶಾಲೆಯ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಶಾಲಾ ಕಾಂಪೌಂಡ್ ಹೊರಗಡೆ ನಿಂತಿದ್ದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಅಸಭ್ಯವಾಗಿ ಸನ್ನೆ ಮಾಡುತ್ತಾ, ವಿದ್ಯಾರ್ಥಿನಿಗಳತ್ತ ತನ್ನ ಗುಪ್ತಾಂಗ ಪ್ರದರ್ಶನ ಮಾಡುತ್ತಿದ್ದಾನೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಳು.

Actor Sreejith Ravi taken into custody as schoolgirls complain of misbehavior...

ವಿದ್ಯಾರ್ಥಿನಿ ನೀಡಿದ್ದ ದೂರಿನ ಅನ್ವಯ ಕಾರಿನ ನಂಬರ್ ಹುಡುಕಿದಾಗ ಕಾರು ಶ್ರೀಜಿತ್ ಅವರದ್ದು ಎಂದು ತಿಳಿದು ಬಂದಿದೆ.

ಆದರೆ, ಈ ದೂರು ಆಧಾರ ರಹಿತವಾಗಿದ್ದು, ಒತ್ತಪ್ಪಲಂನ ಪಾಥಿರಿಪ್ಪಾಲಂ ಮಾರುಕಟ್ಟೆ ಬಳಿ ಹುಡುಗರ ಗುಂಪೊಂದು ಕಾರಿನ ಬಳಿ ನಿಂತು ಹುಡುಗಿಯರನ್ನು ಚೇಡಿಸುತ್ತಿತ್ತು. ಅವರಲ್ಲಿ ಯಾರಾದರೂ ಆ ರೀತಿ ಆಸಭ್ಯವಾಗಿ ವರ್ತಿಸಿರಬಹುದು. ಗಾಬರಿಯಲ್ಲಿ ವಿದ್ಯಾರ್ಥಿನಿ ಅಲ್ಲಿದ್ದ ನನ್ನ ಕಾರಿನ ನಂಬರ್ ನೀಡಿದ್ದಾಳೆ ಎಂದು ಪೊಲೀಸರ ಮುಂದೆ ನಟ ಶ್ರೀಜಿತ್ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ನಾನು ಯಾರು ಎಂಬುದು ತಿಳಿದಿದೆ. ಅಪಾರ್ಥ ಮಾಡಿಕೊಂಡು ನನ್ನ ಮೇಲೆ ದೂರು ನೀಡಿದ್ದಾರೆ ಎಂದು ನಟ ಶ್ರೀಜಿತ್ ಸ್ಪಷ್ಟಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Palakkad: Malayalam actor Sreejith Ravi has been taken into custody by police. Student from Pathirippalam has complained about him.Actor rubbished the allegations and explained his version to police.
Please Wait while comments are loading...