ಬಹುಭಾಷಾ ನಟಿ ಲೈಂಗಿಕ ಪ್ರಕರಣ: ಮಲಯಾಳಂ ನಟ ದಿಲೀಪ್ ಬಂಧನ

By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ತಿರುವನಂತಪುರಂ, ಜುಲೈ 10: ಬಹುಭಾಷಾ ಸ್ಟಾರ್ ನಟಿ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಅಪಹರಣಕ್ಕೊಳಗಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಬಹುಭಾಷಾ ಸ್ಟಾರ್ ನಟಿ ಪ್ರಕರಣದಲ್ಲಿ ಈವರೆಗೆ 6 ಜನರನ್ನು ಬಂಧಿಸಲಾಗಿದೆ.

Kerala Actor Dileep Arrested Over Kidnapping, Sexual Assault Of Actress

ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಟ ದಿಲೀಪ್ ರನ್ನು ಇಂದು(ಸೋಮವಾರ) ಬೆಳಿಗ್ಗೆ ಕಸ್ಟಡಿಗೆ ತೆಗೆದುಕೊಂಡಿದ್ದ ಪೊಲೀಸರು ಅವರನ್ನು ಇಂದು ಸಂಜೆ ಬಂಧಿಸಿರುವುದಾಗಿ ದಾಖಲಾಗಿರುವುದು ಮೂಲಗಳಿಂದ ತಿಳಿದಿದೆ. ಅಲ್ಲದೇ ನಟಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕೆಲವು ವರ್ಷಗಳ ಹಿಂದೆಯೂ ದಾಳಿ ನಡೆದಿತ್ತು.

ಈ ವರ್ಷ ಫೆಬ್ರವರಿ 19 ರಂದು ಕೊಚ್ಚಿ ಹತ್ತಿರ ರಾತ್ರಿವೇಳೆ ನಡೆದ ದಾಳಿ ಎರಡನೇ ಬಾರಿಯದ್ದು ಎಂಬ ಮಾಹಿತಿ ಈ ಹಿನ್ನೆಲೆಯಲ್ಲಿ ಹೊರಬಿದ್ದಿದೆ. ನಟಿ ಮೇಲೆ ದಾಳಿ ಮಾಡಿದ್ದ ಗ್ಯಾಂಗ್ ನ ಹಲವರ ಮೇಲೆ ಪೊಲೀಸರು ಈಗಾಗಲೇ ಏಪ್ರಿಲ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಕಳೆದ ತಿಂಗಳು ಈ ಪ್ರಕರಣದ ಮುಖ್ಯ ಆರೋಪಿ ಸುನಿಲ್ ಕುಮಾರ್(ಪಲ್ಸರ್ ಸುನಿ) ನಟ ದಿಲೀಪ್ ಗೆ ಹಣದ ಸಹಾಯ ಕೇಳಿ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಕೈಜೋಡಿಸಿರುವವರ ತನಿಖೆಗಾಗಿ ಪೊಲೀಸರು ತನಿಖೆಯನ್ನು ಮತ್ತೆ ಮುಂದುವರೆಸಿದ್ದರು.

ಇದರ ಬೆನ್ನೆಲ್ಲೇ ನಟ ದಿಲೀಪ್ ಸಹ ಸುನಿಲ್ ಕುಮಾರ್ ಸಹಚರರು 1.5 ಕೋಟಿ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಕರೆ ಮಾಡುತ್ತಿದ್ದಾರೆ ಎಂದು ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದಿಲೀಪ್ ಪೊಲೀಸ್ ತನಿಖೆಗೆ ಒಳಗಾಗಿದ್ದ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ತಿಳಿದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After many rounds of questioning, Malayalam star Dileep was arrested today in connection with the kidnapping and sexual assault of an actress in February.
Please Wait while comments are loading...