ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ದಾಳಿ ಖಂಡಿಸಿದ ಮೋದಿ, ಜೇಟ್ಲಿ

ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ಉಗ್ರರ ದಾಳಿಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ. ಟ್ವಿಟರ್ ನಲ್ಲಿ ಭಯೋತ್ಪಾದಕರ ಕುಕೃತ್ಯವನ್ನು ಕಟುವಾಗಿ ಟೀಕಿಸಿದ ನರೇಂದ್ರ ಮೋದಿ.

|
Google Oneindia Kannada News

ನವದೆಹಲಿ, ಜುಲೈ 10: ಅಮರ್ ನಾಥ್ ಯಾರ್ತಾರ್ಥಿಗಳ ಮೇಲೆ ದಾಳಿ ನಡೆಸಿ, ಆರು ಜನರ ಯಾತ್ರಾರ್ಥಿಗಳನ್ನು ಕೊಂದಿರುವ ಉಗ್ರರ ಕುಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಕಟುವಾದ ಶಬ್ದಗಳಿಂದ ನಿಂದಿಸಿದ್ದಾರೆ.

ಸೋಮವಾರ ರಾತ್ರಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಳಿ ಈ ದಾಳಿ ನಡೆದಿದ್ದು ಈ ಘಟನೆಯಲ್ಲಿ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಮರ್ ನಾಥ್ ಯಾತ್ರಾರ್ಥಿಗಳ ಬಗ್ಗೆ ವಿಚಾರಿಸಲು ಹೆಲ್ಪ್ ಲೈನ್ ಸಂಖ್ಯೆಗಳುಅಮರ್ ನಾಥ್ ಯಾತ್ರಾರ್ಥಿಗಳ ಬಗ್ಗೆ ವಿಚಾರಿಸಲು ಹೆಲ್ಪ್ ಲೈನ್ ಸಂಖ್ಯೆಗಳು

Kashmir attack: PM Modi says India will never be bogged down by evil designs of hate

ಈ ದುಷ್ಕೃತ್ಯವನ್ನು ಟ್ವಿಟ್ಟರ್ ನಲ್ಲಿ ಖಂಡಿಸಿರುವ ಮೋದಿ, ''ಉಗ್ರರ ಈ ಕರಾಳ ಕಾರ್ಯವನ್ನು ವಿಶ್ವದ ಯಾವೊಬ್ಬನೂ ಸಹಿಸಲಾರ'' ಎಂದಿದ್ದಾರಲ್ಲದೆ, ''ಈ ಘಟನೆಯಲ್ಲಿ ಸಾವಿಗೀಡಾದವರ, ಗಾಯಗೊಂಡವರ ಬಗ್ಗೆ ಪದಗಳಿಗೆ ನಿಲುಕದ ನೋವು ನಮ್ಮಲ್ಲಾಗಿದೆ'' ಎಂದು ಮೋದಿ ಹೇಳಿದ್ದಾರೆ.

''ಇಂಥ ಕೌರ್ಯಯುತ ದಾಳಿಗಳಿಗೆ ಭಾರತ ಜಗ್ಗುವುದಿಲ್ಲ'' ಎಂದೂ ಅವರು ಹೇಳಿದ್ದಾರೆ.

ದಾಳಿಕೋರರನ್ನು ಶೀಘ್ರದಲ್ಲೇ ಬಂಧಿಸುವೆವು: ಕಾಶ್ಮೀರ ಸಿಎಂ ಮುಫ್ತಿದಾಳಿಕೋರರನ್ನು ಶೀಘ್ರದಲ್ಲೇ ಬಂಧಿಸುವೆವು: ಕಾಶ್ಮೀರ ಸಿಎಂ ಮುಫ್ತಿ

ಈ ಬಗ್ಗೆ ಬೇಸರ ನುಡಿಗಳನ್ನಾಡಿರುವ ಅರುಣ್ ಜೇಟ್ಲಿ, ''ಈ ದಾಳಿ ಖಂಡನೀಯ. ಸಾವಿಗೀಡಾದವರಿಗೆ ನನ್ನ ಸಾಂತ್ವನಗಳು ಸಲ್ಲುತ್ತವೆ. ಈ ಘಟನೆಯು ಭಯೋತ್ಪಾದನೆಯ ಮೂಲೋಚ್ಛಾಟನೆ ಮಾಡುವ ನಮ್ಮ ಗುರಿಯನ್ನು ಮತ್ತಷ್ಟು ದೃಢವಾಗಿಸಿದೆ'' ಎಂದು ತಿಳಿಸಿದ್ದಾರೆ.

English summary
Prime Minister Narendra Modi on Monday night strongly condemned the dastardly terror attack on Amarnath pilgrims in Kashmir and asserted that India will never get bogged down by such cowardly attacks and evil designs of hate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X