ಕಾಶ್ಮೀರ: ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರ ಹತ್ಯೆ

ಶ್ರೀನಗರ, ಅಕ್ಟೋಬರ್ 17: ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ದಾಳಿಯಲ್ಲಿ ಮೂವರು ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ದುರದೃಷ್ಟವಶಾತ್ ಎನ್ ಕೌಂಟರ್ ಸಮಯದಲ್ಲಿ ಉಗ್ರರು ನಡೆಸಿದ ಪ್ರತಿದಾಳಿಯಲ್ಲ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಬುಧವಾರ ಬೆಳಿಗ್ಗಿನ ಜಾವ ಆರಂಭವಾದ ಎನ್ ಕೌಂಟರ್ ದಾಳಿಯ ಸಂದರ್ಭದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ಮೇಲೆ ಭಾರತದ ಯೋಧರು ಮತ್ತು ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮೂವರು ಉಗ್ರರು ಬಲಿಯಾದರು.

Kashmir: 3 terrorists and 1 police personnel killed during encounter

ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಮನನ್ ಬಶಿರ್ ವಾನಿ ಮತ್ತು ಇನ್ನೋರ್ವ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ಇತ್ತೀಚೆಗಷ್ಟೇ ಭಾರತೀಯ ಸೇನೆ ಹತ್ಯೆಗೈದಿತ್ತು. ವಾನಿ ಹತ್ಯೆಯನ್ನು ಹಲವರು ಖಂಡಿಸಿದ್ದು ಅಚ್ಚರಿ ಮೂಡಿಸಿತ್ತು.

ಭಾರತದಲ್ಲಿ ನೆಲೆಯೂರಲು ಮಸೀದಿಗಳಿಗೆ ಲಷ್ಕರ್ ಉಗ್ರರಯ ಹಣ ಸಂದಾಯ ಮಾಡುತ್ತಿರುವುದು ಮತ್ತು ಭಾರತದ ಗಡಿ ಭಾಗಗಳಲ್ಲಿ ಉಗ್ರ ದಾಳಿ ನಡೆಯುವ ಮುನ್ಸೂಚನೆಯನ್ನು ಗುಪ್ತಚರ ಇಲಾಖೆ ನೀಡಿರುವುದು ಭಾರತೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಕಾರಣದಿಂದ ಗಡಿಯಲ್ಲಿ ಮತ್ತಷ್ಟು ಬಿಗಿಭದ್ರತೆ ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+