ರೈಲ್ವೆ ಪ್ರಯಾಣಿಕರೇ ಗಮನಿಸಿ: ಹುಬ್ಬಳ್ಳಿ ರೈಲು ನಿಲ್ದಾಣ ಇನ್ನಷ್ಟು ದೊಡ್ಡದಾಗಿ ಅಭಿವೃದ್ಧಿ ಹೊಂದುವುದು ಗ್ಯಾರಂಟಿ!
ಭಾರತದಲ್ಲಿ ಜನಸಂಖ್ಯೆ ಹೆಚ್ಚು ಹೀಗಿದ್ದಾಗ ಅನಿವಾರ್ಯ ಸ್ಥಿತಿಯಲ್ಲಿ ಜನರು ರೈಲು ಪ್ರಯಾಣ, ಮತ್ತು ಸರಕು ಸಾಗಾಣಿಕೆಗೆ ಕೂಡ ಬಹುತೇಕ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೂ ನಮ್ಮ ಕರ್ನಾಟಕಕ್ಕೆ ರೈಲ್ವೆ ಯೋಜನೆ ವಿಚಾರದಲ್ಲಿ ಸಾಕಷ್ಟು ಹಿನ್ನಡೆ ಆಗುತ್ತಿದೆ ಎಂಬ ಮಾತು, ಆಗಾಗ ಕೇಳಿಬರುತ್ತದೆ. ಇಷ್ಟೆಲ್ಲದರ ನಡುವೆ ಇದೀಗ ಕರ್ನಾಟಕ ಮತ್ತು ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ!
ಹೌದು, ವಿಶ್ವದಲ್ಲೇ ಮೂರನೇ ಅತಿ ದೊಡ್ಡ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿದ ದೇಶ ಭಾರತ. 70 ಸಾವಿರ ಕಿಲೋ ಮೀಟರ್ ರೈಲ್ವೆ ಜಾಲವನ್ನು ಹೊಂದಿದ್ದು. ರೈಲ್ವೆ ಫ್ಲಾಟ್ ಫಾರ್ಮ್‌ಗಳ ಆಧುನೀಕರಣ ಕಾಮಗಾರಿ ದೇಶಾದ್ಯಂತ ನಡೆದಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣ ಕೂಡ, ಇನ್ನಷ್ಟು ವಿಸ್ತಾರವಾಗಿ ಶೀರ್ಘವೇ ಅಭಿವೃದ್ಧಿ ಆಗುತ್ತೆ ಅಂತಾ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಮಹತ್ವದ ಮಾಹಿತಿ ನೀಡಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಶೀಘ್ರವೇ ಹೊಸ ರೈಲ್ವೆ ಯೋಜನೆ ಸಿಗುವುದು ಗ್ಯಾರಂಟಿ ಆಗಿದೆ.

ರೈಲ್ವೆ ಹಳಿಗೆ ವಿದ್ಯುತ್ ಸ್ಪರ್ಷ
ಅಣ್ಣಿಗೇರಿಯಲ್ಲಿ ಆಯೋಜನೆ ಮಾಡಿದ್ದ ನವಲಗುಂದ ರಸ್ತೆ & ಅಣ್ಣಿಗೇರಿ ರೈಲ್ವೆ ನಿಲ್ದಾಣದ ನಡುವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 18 ರ ಬದಲಾಗಿ ರಸ್ತೆ ಮೇಲ್ ಸೇತುವೆಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ 2014ರವರೆಗೆ 21,413 ಕಿಲೋ ಮೀಟರ್ ರೈಲ್ವೆ ಮಾರ್ಗ ವಿದ್ಯುದ್ದೀ ಕರಣ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ ಇದು 39 ಸಾವಿರ ಕಿ.ಮೀ. ರೈಲ್ವೆ ಮಾರ್ಗಕ್ಕೆ ವಿಸ್ತರಣೆ ಆಗಿದೆ. ಇಷ್ಟು ದೊಡ್ಡ ಮಾರ್ಗದಲ್ಲಿ ವಿದ್ಯುದ್ದೀಕರಣ ಆಗಿದೆ, ಇದೊಂದು ದಾಖಲೆ ಎಂದರು ಕೇಂದ್ರ ಸಚಿವರು.
ಸ್ವಾಮೀಜಿ ಮನವಿ ಏನಾಗಿತ್ತು?
ಇದೇ ವೇಳೆ ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ನಾನು ನನ್ನ ಮಠದ ಅಭಿವೃದ್ಧಿಗೆ ಎಂದು ಕೂಡ ಕೈ ಚಾಚಿಲ್ಲ. ಅಣ್ಣಿಗೇರಿ ಪಟ್ಟಣ ಅಭಿವೃದ್ಧಿ ಆಗಿದ್ದೆ ಆದರೇ ನನ್ನ ಮಠ ಅಭಿವೃದ್ಧಿ ಆದಂತೆ ಎಂದು ಭಾವಿಸಿದ್ದೇನೆ. ನಾನು ಕೇಂದ್ರ ಸಚಿವ ಜೋಶಿ ಅವರನ್ನು ಭೇಟಿ ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದು ಈ ಬಗ್ಗೆ ಸ್ಪಂದಿಸಿದ ಅವರು, ರೈಲ್ವೆ, ಕ್ರೀಡಾಂಗಣ ಕಾಮಗಾರಿಗೆ ಒಟ್ಟು 100 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಇದಕ್ಕೆ ನಾವೆಲ್ಲ ಆಭಾರಿಯಾಗಿದ್ದೇವೆ ಎಂದರು.

ಇದೇ ವೇಳೆ ನಿವೃತ್ತಿ ಹೊಂದಲಿರುವ ನೈಋತ್ಯ ರೈಲ್ವೆ ವಿಭಾಗ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರನ್ನು ಸಚಿವರು ಸನ್ಮಾನಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ದೇಶದಾದ್ಯಂತ 41 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಕಾಮಗಾರಿಗೆ ಪ್ರಧಾನಿ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿದ್ದನ್ನು ಇದೇ ವೇಳೆ ಸಾರ್ವಜನಿಕರು ವೀಕ್ಷಿಸಿದರು.












Click it and Unblock the Notifications