Breaking: ಕರ್ನಾಟಕ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೆಲಂಗಾಣದಲ್ಲಿ ಆಕ್ರೋಶ-ಪ್ರತಿಭಟನೆ, ಮುಂದೇನಾಯ್ತು?
ಬೆಂಗಳೂರು, ಮೇ 03: ಕರ್ನಾಟಕ ರಾಜ್ಯ ಸಾವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿನ ಅಂಶಗಳು ನೆರೆ ರಾಜ್ಯ ತೆಲಂಗಾಣದಲ್ಲೂ ಭಾರೀ ಸದ್ದು ಮಾಡುತ್ತಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಬಜರಂಗದಳ ಸದಸ್ಯರನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ.
#WATCH | Telangana: Police detain Bajrang Dal members protesting against Congress' Karnataka election manifesto, in front of party office in Hyderabad.
— ANI (@ANI) May 3, 2023
The Congress has announced a ban on Bajrang Dal on the lines of PFI in its Karnataka Election 2023 manifesto. pic.twitter.com/NKTi61eaM6
ಹೌದು, ಕೋಮು ಧ್ವೇಷ ಹರಡಲು ಯತ್ನಿಸಿದರೆ ಅದು ವ್ಯಕ್ತಿಗಳಾಗಲಿ ಇಲ್ಲವೇ ಪಿಎಫ್ಐ ಮತ್ತು ಬಜರಂಗದಳದ ರೀತಿಯ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದ ಚುನಾವಣಾ ಪ್ರಣಾಳಿಕೆಯನ್ನು ಕರ್ನಾಟಕ ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿತ್ತು.

ಈ ಕುರಿತು ಕರ್ನಾಟಕ ಬಿಜೆಪಿ ನಾಯಕರು ಸೇರಿದಂತೆ ಅನೇಕರಿಂದ ವ್ಯಾಪಕ ಆಕ್ರೋಶ ವ್ಯಕತವಾಗಿತ್ತು. ಇದೀಗ ತೆಲಂಗಾದಣಲ್ಲೂ ಸಹ ಕರ್ನಾಟಕ ಕಾಂಗ್ರೆಸ್ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ಅಲ್ಲಿನ ಹೈದರಾಬಾದ್‌ನಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಬುಧವಾರ ಬೆಳಗ್ಗೆ ಪಕ್ಷದ ನಡೆ ವಿರುದ್ಧ ಬಜರಂಗದಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು.
ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪ್ರತಿಭಟನಾ ನಿರತ ಬಜರಂಗದಳದ ಸದಸ್ಯರನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ಮಧ್ಯೆ ವಾಕ್ ಸಮರ ನಡೆದಿದೆ.

ನಾವು ಪ್ರತಿಭಟನೆ ಮಾಡಿಯೇ ತೀರುತ್ತೇವೆ ಎಂದು ಅವರು ಪಟ್ಟು ಹಿಡಿದಿದ್ದಾರೆ. ಕೆಲವರನ್ನು ಪೊಲೀಸರು ಬಲವಂತದಿಂದ ತಮ್ಮ ವಾಹನ ಹತ್ತಿಸಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಗೆ ಭಾರೀ ವಿರೋಧ
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಲ್ಲದೇ ಬಜರಂಗ ದಳದ ನಿಷೇಧ ಸಾಧ್ಯವಿಲ್ಲ. ಪಿಎಫ್‌ಐ ನಂತಹ ಸಂಘಟನೆಗಳ ಜೊತೆ ಬಜರಂಗದಳ ಹೋಲಿಕೆ ಸಲ್ಲದು ಎಂದು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ, ಅಸ್ಸಾಂ ಸಿಎಂ ಹಿಮವಂತ್ ಬಿಸ್ವ ಶರ್ಮಾ, ಭಜರಂಗ ದಳದ ಮುಖ್ಯಸ್ಥರು ಕಾಂಗ್ರೆಸ್ ಪ್ರಣಾಳಿಕೆಯನ್ನು ಆಕ್ಷೇಪಿಸಿದರು.
ಅಷ್ಟೇ ಅಲ್ಲದೇ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರು ಸೇರಿದಂತೆ ಹಿಂದುಪರ ಸಂಘಟನೆಗಳ ಮುಖಂಡರು 'ನಾನು ಬಜರಂಗಿ' ಎಂಬ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಬಜರಂಗಿ ಡಿಪಿ ಫೋಟೊ ಹಾಕಿಕೊಂಡಿದ್ದಾರೆ. ಕೆಲವೆಡೆ ನಾನುಬಜರಂಗಿ ಹ್ಯಾಷ್ ಟ್ಯಾಗ್ ಹಾಕಿಕೊಂಡಿದ್ದಾರೆ. .












Click it and Unblock the Notifications