Kargil Vijay Diwas: ಯೋಧ ಹುತಾತ್ಮರ ತ್ಯಾಗ ಸ್ಮರಣಾರ್ಥ ಮಿಲಿಟರಿ ವಿದ್ಯಾರ್ಥಿಗಳ ಬೈಕ್ ರೈಡ್
ಬೆಂಗಳೂರು, ಜುಲೈ 26: ಭಾರತವು ಕಾರ್ಗಿಲ್ ಯುದ್ಧದ 25 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯ (IMA) 101 ನಿಯಮಿತ ಕೋರ್ಸ್‌ನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಪೈಕಿ 12 ಮೋಟಾರ್‌ಸೈಕಲ್ ಸವಾರರ ಗುಂಪು ಕಾರ್ಗಿಲ್ ವಿಜಯ ನೆನಪಿಸಿಕೊಡಲಿದೆ. ಈ ಸಂಬಂಧ 1999 ರಲ್ಲಿ ನಡೆದಿದ್ದ ಇಂಡೋಪಾಕ್ ನಡುವಿನ ಸಂಘರ್ಷದ ಹಾದಿ, ವಿಜಯದ ಭಾವನಾತ್ಮಕ ಬೈಕ್ ಯಾತ್ರೆ ಆರಂಭಿಸಿದೆ.
ಯುದ್ಧದ ವೇಳೆ ಭಾರತೀಯ ಸೇನೆಯು ಪಾಕಿಸ್ತಾನಿ ಒಳನುಗ್ಗುವವರನ್ನು ಹೊಡೆದೋಡಿಸಿತು.ಮತ್ತು ಕಾಶ್ಮೀರ ಪ್ರದೇಶದಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಆಪರೇಷನ್ ವಿಜಯ್‌ನಲ್ಲಿ ಟೈಗರ್ ಹಿಲ್ ಮತ್ತು ಇತರ ಪೋಸ್ಟ್‌ಗಳನ್ನು ಪುನಃ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ವಿಜಯವನ್ನು ಭಾರತೀಯ ಸೈನಿಕರು ಮೂರು ತಿಂಗಳ ಯುದ್ಧದ ನಂತರ ಸಾಧಿಸಿದರು, ಇದರಿಂದಾಗಿ ಅಂದು ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿದವು.

ಕಾರ್ಗಿಲ್‌ಗೆ 25 ವರ್ಷ ಸಂಭ್ರಮ
ಪ್ರತಿ ವರ್ಷದಂತೆ ಈ ವರ್ಷವು ಜುಲೈ 26 ರಂದು ಭಾರತವು ಕಾರ್ಗಿಲ್ ವಿಜಯ ದಿವಸ ಆಚರಿಸುತ್ತಿದೆ. ಇದರ ಸ್ಮರಣಾರ್ಥ 1997 ರಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಗುಂಪಿ ಬೈಕ್ ಸವಾರಿಯನ್ನು ಚಂಡೀಗಢದಲ್ಲಿ ಆರಂಭಿಸಿದ್ದಾರೆ. ಅವರು ಬೈಕ್ ರ್ಯಾಲಿಯು ಕಾರ್ಗಿಲ್‌ನ ಕಡಿದಾದ ಭೂಪ್ರದೇಶ ಹಾದು ಹೋಗಲಿದೆ. ದೇಶಕ್ಕಾಗಿ ಹೋರಾಡಿ ಮಡಿದ ಯೋಧ ಹುತಾತ್ಮದರ ತ್ಯಾಗ, ಬಲಿದಾನ ಸ್ಮರಿಸಲಿದ್ದಾರೆ.
ಈ ಬೈಕ್ ಯಾತ್ರೆ ಮೂಲಕ ಲೆಜೆಂಡರಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸೇರಿದಂತೆ ಮಡಿದ ಅನೇಕ ಜೀವಗಳಿಗೆ ಮನದಾಳದಿಂದ ಗೌರವ ಸಲ್ಲಿಸಲಾಗುತ್ತಿದೆ. ಕ್ಯಾಪ್ಟನ್ ಬಾತ್ರಾ ಅವರು ಶತ್ರು ಸ್ಥಾನಗಳಿಂದ ಪಾಯಿಂಟ್ 5140 ಅನ್ನು ಪುನಃ ವಶಪಡಿಸಿಕೊಳ್ಳಲು ಧೈರ್ಯಶಾಲಿ ಆಕ್ರಮಣ ತೋರಿದ ವೇಳೆ, ಗಾಯಗೊಂಡ ಅಧಿಕಾರಿ ರಕ್ಷಿಸುವಾಗ ಮಡಿದರು.
ಈ ಮಾಜಿ ಸೈನಿಕರು ಓಡಿದ ಪ್ರತಿಯೊಂದು ಮೈಲುಗಳು ಭಾರತದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ. ಅವರ ಧ್ಯೇಯವು ಕಾರ್ಗಿಲ್ ಯುದ್ಧದ ವೀರರನ್ನು ಗೌರವಿಸುವುದು ಮಾತ್ರವಲ್ಲದೆ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ತಮ್ಮ ಮನೆಗಳ ಸೌಕರ್ಯವನ್ನು ಬಿಟ್ಟು ಸೈನಿಕರು ಮಾಡಿದ ನಿಸ್ವಾರ್ಥ ತ್ಯಾಗವನ್ನು ನೆನಪಿಸುತ್ತದೆ.

ಅಕಾಡೆಮಿಯ ವಿದ್ಯಾರ್ಥಿಗಳು ಗೌರವವು ರಾಷ್ಟ್ರದ ಸಮಗ್ರತೆಯನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರಿಗೆ ಹೆಮ್ಮೆ ಮತ್ತು ಕೃತಜ್ಞತೆಯಿಂದ ಅರ್ಪಿಸುತ್ತದೆ. ಕಾರ್ಗಿಲ್‌ನಲ್ಲಿ ಮಡಿದ ತ್ಯಾಗ, ಬಲಿದಾನ, ಮಹತ್ಕಾರ್ಯಗಳು ದೇಶದಲ್ಲಿ ಅಜರಾಮರವಾಗಿರುತ್ತವೆ.












Click it and Unblock the Notifications