ನಮಗ್ಯಾಕೆ ಬೇಕಯ್ಯ.. ಈ ಮಾರ್ಗದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಎಂದ ಕನ್ನಡಿಗರು, ಹೊಸ ರೈಲು ಬೇಡ ಅಭಿಯಾನ
ನವದೆಹಲಿ: ಕೇಂದ್ರ ಸರ್ಕಾರವು 9 ರಾಜ್ಯಗಳಿಗೆ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಿದೆ. ದೇಶದಾದ್ಯಂತ ಹೊಸ ಅಮೃತ್ ಭಾರತ್ ರೈಲು ಪ್ರಾರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ. ಇದರಲ್ಲಿ ಒಂದು ಕರ್ನಾಟಕಕ್ಕೆ ಸಂಬಂಧಿಸಿದ ರೈಲು ಸಹ ಇದೆ. ಆದರೆ, ಕರ್ನಾಟಕಕ್ಕೆ - ಕನ್ನಡಿಗರಿಗೆ ಈ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಯಾವ ಪ್ರಯೋಜನವೂ ಇಲ್ಲ. ಅಲ್ಲದೇ ಕರ್ನಾಟಕಕ್ಕೆ ಈ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ವಲಸೆ ಹೆಚ್ಚಾಗಲಿದೆ. ಅಲ್ಲದೇ ಕರ್ನಾಟಕದ ಒಳಭಾಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಾಗೂ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸುವಂತೆ ಕನ್ನಡಿಗರು ಒತ್ತಾಯಿಸಿದರೂ, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಪಶ್ಚಿಮ ಬಂಗಾಳ - ಕರ್ನಾಟಕದ ನಡುವೆ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲಾಗಿದೆ. ಇದಕ್ಕೆ ಕನ್ನಡಿಗರು ಕೆಂಡವಾಗಿದ್ದಾರೆ. ಬೆಂಗಳೂರು - ಮಂಗಳೂರು, ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸುವಂತೆ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಈಗ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲಾಗುತ್ತಿದೆ. ಪಶ್ವಿಮ ಬಂಗಾಳದ ಅಲಿಪುರ್ ದ್ವಾರ - ಕರ್ನಾಟಕದ ಬೆಂಗಳೂರಿನ ಎಸ್‌ಎಂವಿಟಿ ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯ ಮಾಡುವ ಅವಶ್ಯಕತೆ ಏನಿತ್ತು. ಇಲ್ಲಿ ಈಗಾಗಲೇ ವಲಸೆ ಹೆಚ್ಚಾಗಿದೆ. ಇನ್ನಷ್ಟು ವಲಸೆಗೆ ಅವಕಾಶ ಮಾಡಿಕೊಡುತ್ತಿರುವುದೇಕೆ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರವು ಅಲಿಪುರ್ ದ್ವಾರ - ಎಸ್‌ಎಂವಿಟಿ ಬೆಂಗಳೂರು ನಡುವೆ ಪರಿಚಯಿಸಿರುವ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಾಪ್ತಾಹಿಕವಾಗಿದೆ. Connecting West Bengal Karnataka / ಪಶ್ಚಿಮ ಬಂಗಾಳ - ಕರ್ನಾಟಕದ ನಡುವೆ ಸಂಪರ್ಕ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದೇಗೌಡ ಶ್ಯಾಮ್ ಪ್ರಸಾದ್ ಎನ್ನುವವರು, ಕರ್ನಾಟಕದ ಶೇ. 80 ಭಾಗಕ್ಕೆ ಮಂಗಳೂರಿನಿಂದ ರೈಲು ಸಂಪರ್ಕ ಇಲ್ಲ. ಅರ್ಧ ಕರ್ನಾಟಕಕ್ಕೆ ಮೈಸೂರಿನಿಂದ ರೈಲು ಇಲ್ಲ. ಶಿವಮೊಗ್ಗಕ್ಕಂತೂ ಶೇ. 90 ಕರ್ನಾಟಕದ ಸಂಪರ್ಕವೇ ಇಲ್ಲ! ಬಂಗಾಲ, ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಬಂದು ವಕ್ಕರಿಸಲು ವಲಸಿಗರಿಗಾಗಿ ರೈಲು! ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಕರ್ನಾಟಕ ಕಸದ ಗುಂಡಿ, ಎಲ್ಲರನ್ನು ತಂದು ತುಂಬೋಕೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕದ ಒಳಗೆ ಎಷ್ಟು ಹೊಸ ರೈಲುಗಳನ್ನು ನೀಡಲಾಗಿದೆ ಎಂದು ದಯವಿಟ್ಟು ಹೇಳಿ. ಬೆಂಗಳೂರು - ಮಂಗಳೂರು ಅಥವಾ ರಾಯಚೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಮೀಸಲಾದ ರೈಲುಗಳು ಯಾವಾಗ ಲಭ್ಯವಾಗುತ್ತವೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಕ್ರಮ ಬಾಂಗ್ಲಾದೇಶಿಗರನ್ನು ಎಲ್ಲೆಡೆ ಹೋಗುವಂತೆ ಮಾಡಲು ಮತ್ತು ಅವರನ್ನು ಮತಬ್ಯಾಂಕ್ ಆಗಿ ಬಳಸಲು ಪಶ್ಚಿಮ ಬಂಗಾಳವನ್ನು ಈ ಎಲ್ಲಾ ನಗರಗಳಿಗೆ ಸಂಪರ್ಕಿಸಬೇಕೇ. ಕರ್ನಾಟಕಕ್ಕೆ ಸಂಪರ್ಕ ಸಾಧಿಸಬೇಡಿ, ನಾವು ಈಗಾಗಲೇ ವಲಸಿಗರಿಂದ ಬೇಸತ್ತಿದ್ದೇವೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5️⃣ Connecting West Bengal <=> Karnataka pic.twitter.com/J41vIqnOJR
— Ashwini Vaishnaw (@AshwiniVaishnaw) January 13, 2026
SMVT ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ವಲಸಿಗರ ಹಾವಳಿ ಜಾಸ್ತಿಯಾಗುತ್ತಿದೆ. ಅವರು ಭಾರತೀಯರ ಇಲ್ಲ, ಬೇರೆ ದೇಶದವರ ಎಂದು ಸಂಶಯವು ಬರುತ್ತದೆ ಹಿಂಗೆ ಮುಂದುವರಿದರೆ ಬೆಂಗಳೂರು ಹಾಳು ಕೊಂಪೆಯಾಗುವುದರಲ್ಲಿ ಸಂಶಯವಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
People would have asked trains for inside Karnataka like Shivamogga to Raichur via Hosapete, Mangaluru to Kalaburagi, Bengaluru to Raichuru via Hosapete and etc. Look at what we are getting West Bengal to Bengaluru. So this shows everything decided in the AC Rooms not from people… https://t.co/zKX3jgDrQ8
— ಮೋಹನ್ ದಾಸರಿ - Mohan Dasari (@MohanDasari_) January 14, 2026
ಕನ್ನಡಿಗರಿಗೆ ಮೋಸ
ಕೇಂದ್ರ ಸರ್ಕಾರವು ಕನ್ನಡಿಗರಿಗೆ ನಿರಂತರವಾಗಿ ಮೋಸ ಮಾಡುತ್ತಿದೆ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications