ಸಂಸತ್ತಿನಲ್ಲಿ ಮಂಡ್ಯ ಸಂಸದೆ ರಮ್ಯಾ ಪ್ರಪ್ರಥಮ ಭಾಷಣ
ನವದೆಹಲಿ, ಫೆ.21: ಮಂಡ್ಯ ಸಂಸದೆ, ಕನ್ನಡ ಸಿನಿಮಾ ತಾರೆ ರಮ್ಯಾ ಅವರು ಲೋಕಸಭೆ ಕಲಾಪ ಅಂತಿಮ ಅವಧಿ ತಲುಪುವ ಮುನ್ನ ಭಾಷಣ ಮಾಡಿ ಗಮನ ಸೆಳೆದಿದ್ದಾರೆ. ಮಂಡ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಸಂಸತ್ತಿನ ಗಮನ ಸೆಳೆದ ರಮ್ಯಾ ನಿರರ್ಗಳವಾಗಿ ಇಂಗ್ಲೀಷ್ ನಲ್ಲಿ ಭಾಷಣ ಬಿಗಿದರು. ರಮ್ಯಾ ಅವರ ಪ್ರಥಮ ಭಾಷಣಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಡ್ಯದ ಹೆಮ್ಮೆಯ ಪುತ್ರಿ ಎಂದು ಅನೇಕ ಮಂದಿ ಹೊಗಳಿದ್ದಾರೆ.
ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ, ಕಬ್ಬಿನ ಬೆಳೆಗೆ ಹನಿ ನೀರಾವರಿ ಸಬ್ಸಿಡಿ, ಉತ್ತಮ ಬೇಸಾಯಕ್ಕೆ ರೈತರಿಗೆ ಸೂಕ್ತ ತರಬೇತಿ, ಎಥೆನಾಲ್ ಅನ್ನು ಪರ್ಯಾಯ ಇಂಧನವನ್ನಾಗಿ ಬಳಕೆ ಮಾಡುವ ಮೂಲಕ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಉತ್ತೇಜನ ಕೊಡಬೇಕು, ಕಬ್ಬಿನ ಉಪ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ರಮ್ಯಾ ಸದನದ ಗಮನ ಸೆಳೆದರು.[ ಓದಿ: ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ]
ಎಥೆನಾಲ್ ಬಳಕೆ ಉಪಯೋಗ, ಕಬ್ಬು ಬೆಳೆಗಾರರ ಬಗ್ಗೆ ಉತ್ತಮ ಮಾಹಿತಿ ಕಲೆ ಹಾಕಿ ಮಾತನಾಡಿದ ರಮ್ಯಾ ಭಾಷಣದ ಮಧ್ಯೆ ಅಳುಕಿನಿಂದ ನಾನು ತುಂಬಾ ನರ್ವಸ್ ಆಗಿದ್ದೇನೆ ದಯವಿಟ್ಟು ಸಹಕರಿಸಿ ಇದು ಮೊದಲ ಭಾಷಣ ಎಂದು ಪ್ರಮಾಣಿಕವಾಗಿ ಹೇಳಿದರು.
ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಬೇಕಾದರೆ, ಪರಿಸರ ಸಹಕಾರಿ ಎಥೆನಾಲ್ ಇಂಧನವಾಗಬೇಕು. ವಿದೇಶಗಳಲ್ಲಿ ಸಾರಿಗೆ ವಾಹನಗಳಿಗೆ ಶೇ.24 ರಷ್ಟು ಎಥೆನಾಲ್‌ಅನ್ನು ಬಳಕೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ, ನಮ್ಮ ದೇಶದಲ್ಲಿ ಇಂಥ ವ್ಯವಸ್ಥೆಯನ್ನು ಜಾರಿಗೆ ತಂದರೆ ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಆರ್ಥಿಕವಾಗಿ ಪ್ರಯೋಜನವಾಗಲಿದೆ ಎಂದು ರಮ್ಯಾ ಅವರು 15ನೇ ಲೋಕಸಭೆಯ ಕೊನೆ ದಿನ ತಮ್ಮ ಭಾಷಣದಲ್ಲಿ ಹೇಳಿದರು. ಗುರುವಾರ ನಟ, ಸಂಸದ ಚಿರಂಜೀವಿ ಭಾಷಣ ಆಲಿಸಿದ್ದ ಸದನಕ್ಕೆ ಇಂದು ರಮ್ಯಾ ಅವರ ಭಾಷಣ ಕೇಳುವ ಅವಕಾಶ ಲಭಿಸಿತು. ರಮ್ಯಾ ಅವರ ಭಾಷಣಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗಳನ್ನು ಮುಂದೆ ಓದಿ..

ರಮ್ಯಾ ಭಾಷಣದಲ್ಲಿ ರೈತ ಸ್ನೇಹಿ ಅಂಶಗಳು
ರಮ್ಯಾ ಭಾಷಣದಲ್ಲಿ ರೈತ ಸ್ನೇಹಿ ಅಂಶಗಳು ಹೆಚ್ಚಾಗಿದ್ದವು. ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ, ಕಬ್ಬಿನ ಬೆಳೆಗೆ ಹನಿ ನೀರಾವರಿ ಸಬ್ಸಿಡಿ, ಉತ್ತಮ ಬೇಸಾಯಕ್ಕೆ ರೈತರಿಗೆ ಸೂಕ್ತ ತರಬೇತಿ, ಎಥೆನಾಲ್ ಅನ್ನು ಪರ್ಯಾಯ ಇಂಧನವನ್ನಾಗಿ ಬಳಕೆ ಹೇಳಿದರು.
|
ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ಪ್ರತಿಕ್ರಿಯೆ
ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್ ಪ್ರತಿಕ್ರಿಯಿಸಿ, ರಮ್ಯಾ ಅವರಿಗೆ ಶುಭ ಹಾರೈಸಿದವರಲ್ಲಿ ಮೊದಲಿಗರೆನಿಸಿದರು.
|
ನಾನು ಕಾಂಗ್ರೆಸ್ ಬೆಂಬಲಿಗನಲ್ಲ, ಆದರೆ...
ನಾನು ಕಾಂಗ್ರೆಸ್ ಬೆಂಬಲಿಗನಲ್ಲ, ಆದರೆ, ಇಂದಿನ ನಿಮ್ಮ ಭಾಷಣ ನನಗೆ ಮೆಚ್ಚುಗೆಯಾಯ್ತು
|
ಇದು ನಿಮ್ಮ ಪ್ರಥಮ ಭಾಷಣ ಎಂದರೆ ನಂಬಲಾರೆ
ಇದು ನಿಮ್ಮ ಪ್ರಥಮ ಭಾಷಣ ಎಂದರೆ ನಂಬಲಾರೆ. ನಿಮ್ಮ ಭಾಷಣದಲ್ಲಿ ರೈತರು, ಎಥೆನಾಲ್ ಬಗ್ಗೆ ಪ್ರಸ್ತಾಪಿಸಿ ಪ್ರಬುದ್ಧತೆ ಮೆರೆದಿದ್ದೀರಿ.
|
ರಮ್ಯಾ ನಿಮ್ಮ ಭಾಷಣ ಸೂಪರ್ ಅಗಿತ್ತು
ರಮ್ಯಾ ನಿಮ್ಮ ಭಾಷಣ ಸೂಪರ್ ಅಗಿತ್ತು. ಕೃಷಿ, ತಂತ್ರಜ್ಞಾನ, ಬೆಲೆ ಏರಿಕೆ ಎಲ್ಲವನ್ನು ಸಮೀಕರಿಸಿ ಸೊಗಸಾಗಿ ಹೇಳಿದ್ರಿ
|
ರಮ್ಯಾ ನೀವು ನಿಜವಾದ ನಾಯಕಿಯಾಗಿಬಿಟ್ರಿ
ರಮ್ಯಾ ನೀವು ನಿಜವಾದ ನಾಯಕಿಯಾಗಿಬಿಟ್ರಿ ರೀ ಟೇಕ್, ಮೇಕಪ್ ಇಲ್ಲದೆ ಭಾಷಣ ಸೂಪರ್ ಆಗಿ ಬಂತು
|
ಮೊದಲ ಭಾಷಣದಲ್ಲಿ ಏನು ಹೇಳಿದ್ದೇನು
ಮಂಡ್ಯ ಸಂಸದೆ ರಮ್ಯಾ ತಮ್ಮ ಮೊದಲ ಭಾಷಣದಲ್ಲಿ ಏನು ಹೇಳಿದ್ದೇನು
|
ಎಲ್ಲರಿಗೂ ಧನ್ಯವಾದಗಳು ಎಂದ ರಮ್ಯಾ
ಭಾಷಣದ ನಂತರ ಭಾಷಣದ ಮುಖ್ಯಾಂಶಗಳನ್ನು ಟ್ವೀಟ್ ಮಾಡಿದ ರಮ್ಯಾ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ರಮ್ಯಾ ಅವರ ಭಾಷಣದ ಕ್ಲಿಪ್ಪಿಂಗ್ ನೋಡಿ
ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿ, ಕಬ್ಬಿನ ಬೆಳೆಗೆ ಹನಿ ನೀರಾವರಿ ಸಬ್ಸಿಡಿ, ಉತ್ತಮ ಬೇಸಾಯಕ್ಕೆ ರೈತರಿಗೆ ಸೂಕ್ತ ತರಬೇತಿ, ಎಥೆನಾಲ್ ಅನ್ನು ಪರ್ಯಾಯ ಇಂಧನವನ್ನಾಗಿ ಬಳಕೆ ಹೇಳಿದರು.ಮಿಕ್ಕ ವಿಷಯಗಳನ್ನು ವಿಡಿಯೋದಲ್ಲಿ ನೋಡಿ..












Click it and Unblock the Notifications