ಕನ್ನಡ ನಟ ಎಂ.ಕೆ.ಮಠ ಸಾಹಸದ ಕಥೆ ಓದಿ

Posted By:
Subscribe to Oneindia Kannada

ಮಂಗಳೂರು, ಜೂನ್ 07 : ಚಿತ್ರೀಕರಣದ ವೇಳೆ ಒಂಟಿ ಸಲಗದ ದಾಳಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕನ್ನಡ ನಟ ಎಂ.ಕೆ.ಮಠ ಅವರು ಹಿನ್ನೀರಿಗೆ ಬಿದ್ದಿದ್ದ ಇಬ್ಬರು ಬಾಲ ಕಲಾವಿದರನ್ನು ರಕ್ಷಿಸಿದ್ದಾರೆ. 'ಮೇರಾ ಇಂಡಿಯಾ' ಮಕ್ಕಳ ಚಿತ್ರದ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.

'ಗಗ್ಗರ' ಚಿತ್ರದಲ್ಲಿನ ನಟನೆಗಾಗಿ 2008-09ನೇ ಸಾಲಿನಲ್ಲಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಪಡೆದ ಎಂ.ಕೆ. ಮಠ ಅವರು ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿರುವ ಪ್ರತಿಶ್ ದೀಪು ನಿರ್ದೇಶನದ 'ಮೇರಾ ಇಂಡಿಯಾ' ಮಕ್ಕಳ ಚಿತ್ರದಲ್ಲಿ ನಟಿಸುತ್ತಿದ್ದಾರೆ. [ಬಡವರಿಗಾಗಿ ಆಟೋ ಓಡಿಸುವ ಎಂಬಿಬಿಎಸ್ ವಿದ್ಯಾರ್ಥಿ]

mk mata

ಮೇರಾ ಇಂಡಿಯಾ ಚಿತ್ರದಲ್ಲಿ ನಟನೆ ಮಾಡುವ ಜೊತೆಗೆ ಮಠ ಅವರು ಚಿತ್ರದ ಕಥಾನಾಯಕನಾಗಿರುವ ಬಾಲ ಕಲಾವಿದ ಆಂಜೆಗೆ ನಟನಾ ತರಬೇತಿ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಳೆದ ವಾರ ಅವರು ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹೋಗಿದ್ದರು. ಆಗ ಈ ಘಟನೆ ನಡೆದಿದೆ. [ಮಂಗಳೂರಿನ ಬಾಬು ಪಿಲಾರ್ ಕೆಲಸಕ್ಕೆ ನಮ್ಮ ಸಲಾಂ]

ಜಂಟಿ ಸಲಗದ ದಾಳಿ ನಡೆದದ್ದು ಹೇಗೆ ಮಠ ಅವರೇ ಹೇಳಿದ್ದಾರೆ ಓದಿ.... [ಚಳಿಗೆ ನಲುಗುತ್ತಿದ್ದ ಮಗುವನ್ನು ಕಾಪಾಡಿದ ಬೆಕ್ಕು ಮಾಶಾ!]

'ಮಧ್ಯಾಹ್ನ ತನಕ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಿದ ನಾವು ಬಳಿಕ ಅಲ್ಲಿಂದ 5 ಕಿ.ಮೀ. ದೂರದ ಅಣೆಕಟ್ಟಿನ ಹಿನ್ನೀರನ ಪ್ರದೇಶಕ್ಕೆ ಬೋಟ್‌ನಲ್ಲಿ ತೆರಳಿ ಚಿತ್ರೀಕರಣ ನಡೆಸಿದೆವು. ಸಂಜೆ ವೇಳೆಗೆ ಚಿತ್ರೀಕರಣ ಮುಗಿಸಿ ತೆರಳಲು ಅಣಿಯಾಗಿದ್ದೆವು. ನಮ್ಮ ತಂಡದಲ್ಲಿ ಒಟ್ಟೂ 55 ಮಂದಿ ಇದ್ದರಾದರೂ, ಒಂದು ತಂಡ ಅಷ್ಟರಲ್ಲೇ ಬೋಟ್‌ನಲ್ಲಿ ಆನೆ ಎರ್ರಂಗಲ್ ಡ್ಯಾಂಗೆ ತೆರಳಿತು. ಉಳಿದ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 27 ಮಂದಿ ಬೋಟ್‌ಗಾಗಿ ಕಾಯುತ್ತ ನಿಂತಿದ್ದರು'. [ಸ್ನೇಹಿತನ ಸಂಕಷ್ಟ ಹಂಚಿಕೊಂಡ ಇವರು ನಿಜವಾದ ಗೆಳೆಯರು!]

'ಆಗ ಸಂಜೆ ಸುಮಾರು 6 ಗಂಟೆಯ ಸಮಯವಾಗಿರಬಹುದು. ನಾವು ನೋಡುತ್ತಿದ್ದಂತೆಯೇ ಪಕ್ಕದ ಕಾಡಿನಿಂದ ನಾವಿದ್ದ ಪ್ರದೇಶಕ್ಕೆ ಒಂಟಿ ಸಲಾಗವೊಂದು ಬರುವುದು ಕಂಡಿತು. ಇದನ್ನು ಕಂಡ ನಾನು ಮತ್ತು ನಮ್ಮ ನಿರ್ದೇಶಕ ಪ್ರತೀಶ್ ದೀಪು ಇದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ಒಂಟಿ ಸಲಗವನ್ನು ಬೆದರಿಸುವ ತಂತ್ರವಾಗಿ ಮೊಬೈಲ್‌ನಲ್ಲಿನ ಟಾರ್ಚ್ ಹಾಕಿ ಜೋರಾಗಿ ಕಿರುಚಿದೆವು. ಆದರೆ, ಸಲಗ ಕ್ಯಾರೆ ಎನ್ನದೆ, ನಾವಿರುವ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಬಂದು ನಿಂತುಕೊಂಡು ನಮ್ಮನ್ನು ನೋಡ ತೊಡಗಿತು.

'ಆಗ ಆ ಕಡೆಯಿಂದ ಇಬ್ಬರು ಬೈಕ್ ಸವಾರರು ಬಂದಿದ್ದು, ಒಂಟಿ ಸಲಗವನ್ನು ನೋಡಿ ಬೈಕ್‌ನ ಲೈಟ್ ಆನ್ ಮಾಡಿ ನಿಲ್ಲಿಸಿದಲ್ಲೇ ಬೈಕ್‌ನ ಎಕ್ಸಿಲೆಟರ್ ಹಿಡಿದು ಜೋರಾಗಿ ರೇಸ್ ಮಾಡಿದರು. ಆಗ ಒಂಟಿ ಸಲಗ ಅದರ ಕಾಲನ್ನು ಜೋರಾಗಿ ನೆಲಕ್ಕೆ ಬಡಿದು ಘೀಳಿಟ್ಟು ಇನ್ನೂ ನಮ್ಮ ಹತ್ತಿರಕ್ಕೆ ಬಂತು ಆ ಸಮಯದಲ್ಲಿ ಜೀವ ಭಯದಿಂದ ಕೆಲವರು ನಮ್ಮ ಹಿಂದಿದ್ದ ಹಿನ್ನೀರಿಗೆ ಹಾರಿದರು'.

'ನಾನು ಕೂಡಾ ಹಿನ್ನೀರಿಗೆ ಬಿದ್ದೆ ಒಂಟಿ ಸಲಗ ನಮ್ಮಿಂದ ಸುಮಾರು 20 ಅಡಿ ದೂರದಲ್ಲಿ ನಮ್ಮ ಕಡೆಗೆ ನೋಡಿಕೊಂಡು ಮಿಸುಕಾಡದೆ ನಿಂತಿತು. ಇದೇ ಸಂದರ್ಭದಲ್ಲಿ ಹಿನ್ನೀರಿಗೆ ಬಿದ್ದ ಇಬ್ಬರು ಬಾಲ ಕಲಾವಿದರು ಈಜಲಾಗದೆ ಬೊಬ್ಬೆ ಹಾಕಿ ಮುಳುಗೇರುತ್ತಿರುವುದು ಕಂಡು ಬಂತು. ತಕ್ಷಣ ಅಲ್ಲಿಗೆ ಧಾವಿಸಿ ಅವರನ್ನು ರಕ್ಷಿಸಿದೆ.

'ಎಡೆಮಟ್ಟದ ನೀರಿನಲ್ಲಿ ಅವರನ್ನೆತ್ತಿಕೊಂಡೇ ನಿಂತುಕೊಂಡೆ. ಸುಮಾರು ಒಂದೂ ಮುಕ್ಕಾಲು ಗಂಟೆಯ ಬಳಿಕ ಒಂಟಿ ಸಲಗ ಬಂದ ದಾರಿಯಲ್ಲೇ ಕಾಡಿನತ್ತ ವಾಪಸ್ ಆಯಿತು. ಅಲ್ಲಿಯವರೆಗೆ ನಾವು ಜೀವಭಯದಿಂದ ನೀರಿನಲ್ಲೇ ಇರಬೇಕಾಯಿತು'.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Its providential escape for M.K.Mata, Kannada movie actor. A rogue attacked Mata while he was shooting in Munnar, Kerala. His new movie in the making "Mera India"
Please Wait while comments are loading...